ಶಾಸಕ ದಿನೇಶ್ ಗುಂಡೂರಾವ್ ಮನೆ ಕೆಲಸಗಾರ ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯ

By Gowthami KFirst Published Sep 10, 2022, 2:39 PM IST
Highlights

ಶಾಸಕ ದಿನೇಶ್ ಗುಂಡೂರಾವ್ ಮನೆ ಕೆಲಸಗಾರ ನಾಪತ್ತಾಯಾಗಿದ್ದ ಪ್ರಕರಣ ಸುಖಾಂತ್ಯವಾಗಿದೆ. ಪಶ್ಚಿಮ ಬಂಗಾಳ ಮೂಲದ ಸಂಜು ಶರ್ಮಾ  ಎರಡು ದಿನದ ಹಿಂದೆ ಆರ್ ಟಿ ನಗರದ ಮನೆ ಬಿಟ್ಟು ಪರಾರಿಯಾಗಿದ್ದ.

ಬೆಂಗಳೂರು (ಸೆ.10): ಶಾಸಕ ದಿನೇಶ್ ಗುಂಡೂರಾವ್ ಮನೆ ಕೆಲಸಗಾರ ನಾಪತ್ತಾಯಾಗಿದ್ದ ಪ್ರಕರಣ ಸುಖಾಂತ್ಯವಾಗಿದೆ. ಪಶ್ಚಿಮ ಬಂಗಾಳ ಮೂಲದ ಸಂಜು ಶರ್ಮಾ (41) ಎರಡು ದಿನದ ಹಿಂದೆ ಆರ್ ಟಿ ನಗರದ ಮನೆ ಬಿಟ್ಟು ಪರಾರಿಯಾಗಿದ್ದ. ಈ ಹಿನ್ನೆಲೆ ಕುಟುಂಬಸ್ತರು ದಿನೇಶ್ ಗುಂಡುರಾವ್ ಗೆ ಮಾಹಿತಿ ನೀಡಿದ್ದರು. ನಂತರ ಸಂಜಯ್ ನಗರ ಪೊಲೀಸ್ ಠಾಣೆಗೆ ಮಾಹಿತಿ ರವಾನೆಯಾಗಿತ್ತು. ಈ ಹಿನ್ನೆಲೆ ಸಂಜು ಶರ್ಮಾ ಮಾಹಿತಿ ಕಲೆಹಾಕಿದ ಪೊಲೀಸ್ರಿಗೆ. ಸಂಜು ಶರ್ಮಾ ಕಳೆದ ಮೂರು ವರ್ಷಗಳಿಂದ ದಿನೇಶ್ ಗುಂಡೂರಾವ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದು.  2 ತಾರೀಖು ಮನೆಯಿಂದ ಹೊರ ಹೋದವನು ಮನೆಗೆ ವಾಪಸ್ ಆಗಿರಲಿಲ್ಲ ಅನ್ನೊ ಮಾಹಿತಿ ಕಲೆ ಹಾಕಿಕೊಳ್ಳುತ್ತಾರೆ.. ಘಟನೆ ಸಂಬಂಧ ಸಂಜು ಶರ್ಮಾ ಫೋಟೊವನ್ನ ರೈಲ್ವೆ ಸ್ಟೇಷನ್ ಹಾಗೂ ಬಸ್ ನಿಲ್ದಾಣಗಳಿಗೆ ರವಾನಿಸುತ್ತಾರೆ.. ಸದ್ಯ ಈತ ಹೊರ ರಾಜ್ಯದ ರೈಲ್ವೆ ನಿಲ್ದಾಣದಲ್ಲಿ ಸಂಜು ಶರ್ಮಾ ಮಾಹಿತಿ ದೊರೆತಿದ್ದು ಸಂಜಯ್ ನಗರ ಪೊಲೀಸ್ ಠಾಣೆಗೆ ರವಾನಿಸಿದ್ದಾರೆ..  ಸಂಜು ಶರ್ಮಾನನ್ನ ವಿಚಾರಣೆ ನಡೆಸಿದ ಪೊಲೀಸ್ರಿಗೆ ನನಗೆ ಬೆಂಗಳೂರಿನಲ್ಲಿ ಕೆಲಸ ಮಾಡುಲು ಇಷ್ಟವಿಲ್ಲ ಮನೆಯಲ್ಲಿ ಹೇಳಿದರೆ ನನ್ನನ್ನ ಬಿಡೋದಿಲ್ಲ ಹಿಗಾಗಿ ನಾನು ಮನೆ ಬಿಟ್ಟು ಹೋಗಿದ್ದೆ ಎಂದಿದ್ದಾನೆ.. ಸಂಜು ಶರ್ಮಾ ಹೇಳಿಕೆ ಪಡೆದು ಹಾಗೂ ಆತನಿಂದ ಮುಚ್ವಳಿಕೆ ಪತ್ರ ಬರೆಸಿಕೊಂಡು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.

ಜಾಗೀರಪನ್ನೂರಲ್ಲಿ 2 ಲಕ್ಷ ಮೌಲ್ಯದ ಗಾಂಜಾ ವಶ: ಪ್ರಕರಣ ದಾಖಲು
ಮಾನ್ವಿ: ತಾಲೂಕಿನ ಜಾಗೀರಪನ್ನೂರು ಗ್ರಾಮದ ಬಳಿ ಹತ್ತಿ ಬೆಳೆಯಲ್ಲಿ ಗಾಂಜಾ ಬೆಳೆಯಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 112 ಗ್ರಾಂ. ಹೂ, ಕಾಯಿ ಮತ್ತು ಎಲೆಯಿಂದ ಕೂಡಿದ ಸಂಸ್ಕರಿಸಿದ 1.74 ಲಕ್ಷ ರು. ಬೆಲೆ ಬಾಳುವ ಒಣ ಗಾಂಜಾ ಸೇರಿದಂತೆ ಒಟ್ಟು 2 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡು ಹೊಲದ ಮಾಲೀಕ ಹುಚ್ಚಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಬಕಾರಿ ಅಪರ ಆಯುಕ್ತ ಡಾ. ವೈ.ಮಂಜುನಾಥ ಆದೇಶದ ಮೇರೆಗೆ ಅಬಕಾರಿ ಜಂಟಿ ಆಯುಕ್ತ ಬಸವರಾಜ ಹಡಪದ ನಿರ್ದೇಶನದ ಮೇರೆಗೆ ಉಪ ಆಯುಕ್ತೆ ಲಕ್ಷ್ಮೇನಾಯಕ ಹಾಗೂ ಜಿಲ್ಲಾ ಅಬಕಾರಿ ಉಪ ಅಧಿಕ್ಷಕ ಹರಿಕೃಷ್ಣ ಹಾಗೂ ಮಾನ್ವಿ ವಲಯ ಅಧಿಕಾರಿ ಬಸವರಾಜ ಕಾಕರಗಲ್‌ ನೇತೃತ್ವದ ತಂಡ ಗುರುವಾರ ದಾಳಿ ನಡೆಸಿದ 42 ಹೂ, ಕಾಯಿ ಮತ್ತು ಎಲೆಯಿಂದ ಕೂಡಿದ ಗಾಂಜಾ ಗಿಡಗಳು ಮತ್ತು ಹೊಲದ ತಾಡಪತ್ರಿ ಗುಡಿಸಿಲಿನಲ್ಲಿ ಇಟ್ಟಿದ್ದ ಒಟ್ಟು ತೂಕ 17.18 ಕೆಜಿ ಮತ್ತು ಸಂಸ್ಕರಿಸಿದ 112 ಗ್ರಾಂ ಹೂ, ಕಾಯಿ ಮತ್ತು ಎಲೆಯಿಂದ ಕೂಡಿದ ಸಂಸ್ಕರಿಸಿದ ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ.

Shivamogga; ಚಲಿಸುತ್ತಿದ್ದ ಟ್ರ್ಯಾಕ್ಟರ್ ನಿಂದ ಬಿದ್ದು ವ್ಯಕ್ತಿ ಸಾವು

ಗಾಂಜಾ ಬೆಳೆದಿರುವ ಆರೋಪದ ಮೇಲೆ ಹುಚ್ಚಪ್ಪ ವಿರುದ್ಧ ಅಬಕಾರಿ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಆರೋಪಿಯು ನಾಪತ್ತೆ ಆಗಿದ್ದು ಪತ್ತೆಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

LOAN APP ಕಿರುಕುಳ: ಮಗಳ ಹುಟ್ಟುಹಬ್ಬದಂದೆ ವಿಷ ಕುಡಿದು ದಂಪತಿ ಆತ್ಮಹತ್ಯೆ

ಈ ವೇಳೆ ಅಬಕಾರಿ ಉಪ ಆಯುಕ್ತೆ, ಲಕ್ಷ್ಮೀನಾಯಕ, ಬಸವರಾಜ ಕಾಕರಗಲ್‌, ಬಿ.ಕವಿತಾ ಅಬಕಾರಿ ನಿರೀಕ್ಷಕರು ಉಪ ವಿಭಾಗ, ನಾಗಣ್ಣ ಅಬಕಾರಿ ಉಪ ನಿರೀಕ್ಷಕರು, ಶಿವಲಿಂಗಸ್ವಾಮಿ ಅಬಕಾರಿ ಉಪ ನಿರೀಕ್ಷಕರು, ಈರಮ್ಮ ಉಪ ನಿರೀಕ್ಷಕರು, ಅಬಕಾರಿ ಪೇದೆಗಳಾದ ಆಂಜಿನಯ್ಯ, ವೆಂಕೋಬ, ಮೂರ್ತಿ, ನಿಂಗಪ್ಪ, ಶಿವಾನಂದ ಮತ್ತು ಮಹೆಬೂಬ್‌ ಇದ್ದರು.

click me!