ಜಾಲಿ ರೈಡ್‌ನಲ್ಲಿ ಗೆಳತಿ ಇಂಪ್ರೆಸ್ ಮಾಡಲು ಕಾರು ನೀಡಿದ ಯುವಕ, ಅಪಘಾತಕ್ಕೆ ಬೈಕ್ ಸವಾರರು ಬಲಿ!

By Suvarna NewsFirst Published Aug 6, 2022, 4:39 PM IST
Highlights

ಗೆಳತಿ, ಗೆಳೆಯನ ಇಂಪ್ರೆಸ್ ಮಾಡಲು ಹಲವರು ಹರಸಾಹಸ ಪಡುತ್ತಾರೆ. ಇದಕ್ಕಾಗಿ ಅನೇಕ ಕಸರತ್ತು, ಸರ್ಪ್ರೈಸ್ ನೀಡುತ್ತಾರೆ. ಹೀಗೆ ಗೆಳತಿಯನ್ನು ಇಂಪ್ರೆಸ್ ಮಾಡಲು ಹೋಗಿ ಡ್ರೈವಿಂಗ್ ಬರದ ಆಕೆಯ ಕೈಗೆ ಕಾರು ನೀಡಿದ್ದಾನೆ. ಜಾಲಿ ರೈಡ್ ಹೊರಟಿದ್ದೇ ತಡ ಭೀಕರ ಅಪಘಾತ ಸಂಭವಿಸಿದೆ. ಗೆಳತಿಯ ಡ್ರೈವಿಂಗ್‌ಗೆ ಇಬ್ಬರು ಬೈಕ್ ಸವಾರರು ಬಲಿಯಾಗಿದ್ದರೆ.

ಚತ್ತೀಸಘಡ(ಆ.06): ಜಾಲಿ ರೈಡ್ ಹಲವು ಬಾರಿ ಅಪಾಯ ತಂದಿಟ್ಟ ಉದಾಹರಣೆಗಳಿವೆ. ಅಜಾಗರೂಕತೆ, ಅತೀ ವೇಗ, ನಿರ್ಲಕ್ಷ್ಯ ಸೇರಿದಂತೆ ಹಲವು ಕಾರಣಗಳಿಂದ ಜಾಲಿ ರೈಡ್ ದುರಂತದಲ್ಲಿ ಅಂತ್ಯಗೊಂಡಿದೆ. ಆದರೆ ಇಲ್ಲಿ ಜಾಲಿ ರೈಡ್ ಹೊರಟ ಹಕ್ಕಿಗಳು ಒಬ್ಬರನ್ನೊಬ್ಬರು ಮೆಚ್ಚಿಸಲು ಹೋಗಿ ಅಪಾಯ ಮೈಮೇಲೆ ಎಳೆದುಕೊಂಡಿದ್ದಾರೆ. ಗೆಳೆತಿಯ ಇಂಪ್ರೆಸ್ ಮಾಡಲು ಆಕೆಯ ಕೈಗೆ ಕಾರು ನೀಡಿದ್ದಾನೆ. ಇಷ್ಟೇ ಅಲ್ಲ ತಾನು ಪಕ್ಕದಲ್ಲಿರುವ ಭಯವೇಕೆ, ಧೈರ್ಯವಾಗಿ ಕಾರು ಓಡಿಸಲು ಹೇಳಿದ್ದಾನೆ. ಈ ಮಾತು ಕೇಳಿದ ಯುವತಿಗೆ ಇಡೀ ಭಾರತವೇ ತನ್ನ ಬೆನ್ನ ಹಿಂದಿದೆ ಅನ್ನೋವಷ್ಟು ಧೈರ್ಯ ಬಂದಿದೆ. ಡ್ರೈವಿಂಗ್ ಸೀಟಿನಲ್ಲಿ ಕುಳಿತ ಯುವಕಿ ಕಾರು ಸ್ಟಾರ್ಟ್ ಮಾಡಿ ಏಕಾಏಕಿ ಎಕ್ಸಲೇಟರ್ ಒತ್ತಿದ್ದಾಳೆ. ಇಷ್ಟೇ ನೋಡಿ, ಕಾರು ಯದ್ವಾ ತದ್ವಾ ಚಲಿಸಿದೆ. ಯುವತಿ ಗಾಬರಿಗೊಂಡಿದ್ದಾಳೆ. ಧೈರ್ಯ ತುಂಬಿದ ಯುವಕ ಏನೂ ಮಾಡಲಾಗದೆ ಮೂಕ ಪ್ರೇಕ್ಷನಾಗಿದ್ದಾನೆ. ಅತೀ ವೇಗಾಗಿ ರಸ್ತೆಯ ತುಂಬ ಚಲಿಸಿದ ಕಾರು ಎದುರಿನಿಂದ ಬರುತ್ತಿದ್ದ ಬೈಕ್ ಸವಾರರಿಗೆ ಡಿಕ್ಕಿ ಹೊಡಿದಿದೆ. ಬೈಕ್‌ನಲ್ಲಿದ್ದ ಮೂವರು ಮಾರುದ್ದ ದೂರಕ್ಕೆ ಹಾರಿ ರಸ್ತೆಗೆ ಬಿದ್ದಿದ್ದಾರೆ. ಈ ಅಪಘಾತದ ರಭಸಕ್ಕೆ ಇಬ್ಬರು ಬೈಕ್ ಸವಾರರು ಬಲಿಯಾಗಿದ್ದರೆ, ಮತ್ತೊರ್ವ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂದ ಹಾಗೆ ಈ ಘಟನೆ ನಡೆದಿರುವುದು ಚತ್ತೀಸಘಡದ ವಿಲಾಸಪುರ ನಗರದಲ್ಲಿ.

ವಿಲಾಸಪುರ ನಗರದ ಸಮೀಪದ ನೆವಾರದ ನಿವಾಸಿಯಾಗಿರುವ ರವೀಂದ್ರ ಕುರ್ರೆ ತನ್ನ ಗೆಳೆತಿಯೊಂದಿಗೆ ಜಾಲಿ ರೈಡ್ ಹೊರಟಿದ್ದಾನೆ. ಕೋಟಾ ರಸ್ತೆಯಲ್ಲಿ ಹಕ್ಕಿಗಳು ಸುಂದರ ಕ್ಷಣ ಕಳೆಯಲು ನಿರ್ಧರಿಸಿ ಹೊರಟಿದ್ದಾರೆ. ಆದರೆ ಮಾರ್ಗ ಮಧ್ಯೆ ಗೆಳತಿಯ ಇಂಪ್ರೆಸ್ ಮಾಡಲು, ಆಕೆಯ ಕೈಗೆ ಕಾರು ನೀಡಿ ಡ್ರೈವಿಂಗ್ ಮಾಡಲು ಹೇಳಿದ್ದಾನೆ. ಆಕೆ ಕೂಡ ಗೆಳೆಯನ ಇಂಪ್ರೆಸ್ ಮಾಡಲು ಒಕೆ ಎಂದಿದ್ದಾಳೆ. ಡ್ರೈವಿಂಗ್ ಸೀಟಿನಲ್ಲಿ ಕೂತ ಆಕೆ ಒಂದು ಬಾರಿ ಗೆಳೆಯನ ನೋಡಿದ್ದಾಳೆ. ಈ ನೋಟ ಅರ್ಥ ಮಾಡಿಕೊಂಡ ರವೀಂದ್ರ ಕುರ್ರೆ, ಧೈರ್ಯವಾಗಿ ಡ್ರೈವಿಂಗ್ ಮಾಡು, ನಾನಿದ್ದೇನೆ ಎಂದ್ದಾನೆ. ಗೆಳತಿಗೆ ಡ್ರೈವಿಂಗ್ ಬರುವುದಿಲ್ಲ ಅನ್ನೋ ಸತ್ಯ ಗೆಳೆಯನಿಗೂ ತಿಳಿದಿತ್ತು. ಒಬ್ಬರನ್ನೊಬ್ಬರು ಮೆಚ್ಚಿಸುವ ಭರದಲ್ಲಿ ಜಾಲಿ ರೈಡ್‌ನ ಎರಡನೇ ಭಾಗ ಆರಂಭಗೊಂಡಿದೆ.

ಬೈಕ್‌ ಸ್ಕಿಡ್‌ ಆಗಿ ಟ್ರಕ್‌ ಕೆಳಗೆ ಬಂದ ಯುವಕ ಜಸ್ಟ್‌ ಮಿಸ್! ವಿಡಿಯೋ ವೈರಲ್

ಕಾರು ಸ್ಟಾರ್ಟ್ ಮಾಡಿದ್ದೇ ತಡ ಒಂದೇ ಸಮನೆ ಎಕ್ಸಲರೇಟರ್ ಒತ್ತಿದ್ದಾಳೆ. ಕಾರು ಅತೀ ವೇಗದಲ್ಲಿ ಮುಂದಕ್ಕೆ ಚಲಿಸಿದೆ. ಗೆಳತಿ ತಬ್ಬಿಬ್ಬಾಗಿದ್ದಾಳೆ. ಬ್ರೇಕ್ ಹಿಡಿಯಲು ಬರದೆ, ಮತ್ತೆ ಮತ್ತೆ ಎಕ್ಸಲರೇಟರ್ ಒತ್ತಿದ ಜೊತೆಗೆ ಸ್ಟೇರಿಂಗ್ ಅತ್ತಿಂದಿತ್ತ ತಿರುಗಿಸಿದ್ದಾಳೆ. ಇದೇ ವೇಳೆ ಎದುರಿನಿಂದ ಆಗಮಿಸುತ್ತಿದ್ದ ಬೈಕ್ ಸವಾರರಿಗೆ ವೇಗವಾಗಿ ಕಾರು ಡಿಕ್ಕಿ ಹೊಡೆದಿದೆ. ಈ ಬೈಕ್‌ನಲ್ಲಿದ್ದ ಮೂವರು ಸವಾರರು ಅಪಘಾತದ ವೇಗಕ್ಕೆ ದೂರಕ್ಕೆ ಹಾರಿ ಬಿದ್ದಿದ್ದಾರೆ. ಅಪಘಾತದದ ತೀವ್ರತಗೆ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಮತ್ತೋರ್ವನನ್ನು ಆಸ್ಪತ್ರೆ ದಾಖಲಿಸಲಾಗಿದೆ.

ಇತ್ತ ಹುಚ್ಚಾಟ ಆಡಿದ ರವೀಂದ್ರ ಕುರ್ರೆ ಹಾಗೂ ಆತನ ಗೆಳತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.  ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ರವೀಂದ್ರ ಕುರ್ರೆ ಅಸಲಿಯತ್ತು ಬಹಿರಂಗಗೊಂಡಿದೆ. ಇದು ತನ್ನ ಕಾರು ತಂದೆಯ ಬಳಿ ಬೇರೊಂದು ಕಾರಿದೆ ಎಂದು ಬಡಾಯಿ ಕೊಚ್ಚಿಕೊಂಡಿದ್ದ ರವೀಂದ್ರ ಕುರ್ರೆ ಬಳಿ ಯಾವುದೇ ಕಾರಿನಲ್ಲಿ ಅನ್ನೋದು ಬಹಿರಂಗಗೊಂಡಿದ. ಜಾಲಿ ರೈಡ್‌ಗೆ ಬಳಸಿದ ಕಾರು ರವೀಂದ್ರ ಕುರ್ರೆ ತಂದೆ ಕಾರಾಗಿದೆ. ಹೀಗಾಗಿ ಇದೀಗ ರವೀಂದ್ರ ಕುರ್ರೆ ತಂದೆಯ ಮೇಲೂ ಪ್ರಕರಣ ದಾಖಲಾಗಿದೆ. 

ಛಾವಣಿಯಿಂದ ಕೆಳಗೆ ಬಿದ್ದಾತನ ಕತ್ತು ಸೀಳಿ ಬಾಯಿಯಿಂದ ಹೊರಬಂದ ರಾಡ್‌, 2 ತಾಸಿನಲ್ಲಿ ನಡೆಯಿತು ಚಮತ್ಕಾರ!

click me!