ಮಂಡ್ಯ: ರೈಲ್ವೆ ಪೊಲೀಸ್ ಪೇದೆಗೆ ಚಾಕುವಿನಿಂದ ಇರಿತ, ದುಷ್ಕರ್ಮಿಗಳಿಂದ ಕೊಲೆಗೆ ಯತ್ನ

By Kannadaprabha News  |  First Published Feb 28, 2024, 1:29 PM IST

ಮಂಡ್ಯ ರೈಲ್ವೆ ಔಟ್ ಪೊಲೀಸ್‌ ಠಾಣೆ ಪೇದೆ ಎಸ್.ವಿ.ಸತೀಶ್ ಚಂದ್ರ ದುಷ್ಕರ್ಮಿಗಳ ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಬೆಂಗಳೂರು ಮೂಲದ ಇಬ್ಬರು ಯುವಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಉಳಿದ ನಾಲ್ವರ ಪತ್ತೆಗೆ ರೈಲ್ವೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.


ಮದ್ದೂರು(ಫೆ.28): ರೈಲಿನಲ್ಲಿ ಗಾಂಜಾ ಮಿಶ್ರಿತ ಸಿಗರೇಟ್ ಸೇವನೆ ಮಾಡುತ್ತಿದ್ದ ಬಗ್ಗೆ ಆಕ್ಷೇಪಣೆ ಮಾಡಿದ ರೈಲ್ವೆ ಪೊಲೀಸ್ ಪೇದೆಗೆ ಆರು ಮಂದಿ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆಗೆ ವಿಫಲ ಯತ್ನ ನಡೆಸಿರುವ ಘಟನೆ ಪಟ್ಟಣದ ನಿಲ್ದಾಣದಲ್ಲಿ ಸೋಮವಾರ ಸಂಜೆ ಜರುಗಿದೆ.

ಮಂಡ್ಯ ರೈಲ್ವೆ ಔಟ್ ಪೊಲೀಸ್‌ ಠಾಣೆ ಪೇದೆ ಎಸ್.ವಿ.ಸತೀಶ್ ಚಂದ್ರ ದುಷ್ಕರ್ಮಿಗಳ ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಬೆಂಗಳೂರು ಮೂಲದ ಇಬ್ಬರು ಯುವಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಉಳಿದ ನಾಲ್ವರ ಪತ್ತೆಗೆ ರೈಲ್ವೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

Latest Videos

undefined

ಮಂಡ್ಯ: ಹಣ ಡಬಲ್‌ ಮಾಡಿಕೊಡ್ತಿನಿ ಅಂತಾ ಮಹಿಳೆಗೆ ನಂಬಿಸಿ ₹ 70 ಲಕ್ಷ ದೋಚಿ ಖದೀಮ ಪರಾರಿ!

ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿದ್ದ ಗೋಲ್ ಗುಂಬಜ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ದುಷ್ಕರ್ಮಿಗಳು ರೈಲಿನ ಎರಡು ಬಾಗಿಲ ಫುಟ್ ಬೋರ್ಡ್ ಮೇಲೆ ಕುಳಿತು ಗಾಂಜಾ ಮಿಶ್ರಿತ ಸಿಗರೇಟ್ ಸೇವನೆ ಮಾಡಿ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು.

ಇದೇ ರೈಲಿನಲ್ಲಿ ಮಂಡ್ಯದಿಂದ ಮದ್ದೂರು ಕಡೆಗೆ ಕರ್ತವ್ಯದ ಮೇಲೆ ತೆರಳುತ್ತಿದ್ದ ಪೊಲೀಸ್ ಪೇದೆ ಎಸ್.ವಿ.ಸತೀಶ್ ಚಂದ್ರ ರೈಲಿನಲ್ಲಿ ಸಿಗರೇಟ್ ಸೇದದಂತೆ ತಾಕೀತು ಮಾಡಿದ್ದಾರೆ. ಈ ವೇಳೆ ಗಾಂಜಾ ನಶೆಯಲ್ಲಿದ್ದ ದುಷ್ಟಮಿಗಳು ಸಂಜೆ 4:45ರ ಸುಮಾರಿಗೆ ರೈಲು ಮದ್ದೂರು ನಿಲ್ದಾಣ ತಲುಪುತ್ತಿದ್ದಂತೆ ಪೇದೆ ಸತೀಶ್ ಚಂದ್ರ ಅವರನ್ನು ರೈಲಿನಿಂದ ಇಳಿಯಲು ಅವಕಾಶ ನೀಡದೆ ಅಡ್ಡಗಟ್ಟಿ ಆತನ ಮೇಲೆ ಗುಂಪು ಹಿಗ್ಗಾಮುಗ್ಗ ಥಳಿಸಿ ನಂತರ ಚಾಕುನಿಂದ ಇರಿದು ಕೊಲೆ ಮಾಡಲು ಪ್ರಯತ್ನ ನಡೆಸಿದ್ದಾರೆ.

ಮಂಡ್ಯ: ತಬ್ಬಿಕೊಂಡ ಸ್ಥಿತಿಯಲ್ಲೇ ಜೋಡಿ ಮೃತದೇಹ‌ ಪತ್ತೆ

ಪೇದೆ ರಕ್ಷಣೆಗೆ ಧಾವಿಸಿದ ಪ್ರಯಾಣಿಕರ ಮೇಲೂ ಸಹ ದುಷ್ಕರ್ಮಿಗಳ ಗುಂಪು ಹಳಿಗಳ ಮೇಲಿದ್ದ ಜಲ್ಲಿಕಲ್ಲು ಗಳನ್ನು ತೂರಿ ಗಾಯಗೊಳಿಸಿದ್ದಾರೆ. ಇದರಿಂದ ಆತಂಕಗೊಂಡ ಪ್ರಯಾಣಿಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ಚಾಕು ಇರಿತದಿಂದ ಪೇದೆ ಸತೀಶ್ ಚಂದ್ರ ಅವರ ಬಲಭಾಗದ ಬೆನ್ನಿಗೆ ಗಾಯವಾಗಿ ರಕ್ತಸ್ರಾವವಾಗಿದೆ. ತಮ್ಮ ರಕ್ಷಣೆಗೆ ಧಾವಿಸಿದ ಪ್ರಯಾಣಿಕರ ಮೇಲೂ ಸಹ ದುಷ್ಕರ್ಮಿಗಳು ದಾಳಿ ನಡೆಸಬಹುದು ಎನ್ನುವುದನ್ನು ಅರಿತ ಪೇದೆ ಸತೀಶ್ ಚಂದ್ರ ಚಾಕು ಇರಿತದಿಂದ ರಕ್ತ ಸೋರುತಿರುವುದನ್ನು ಲೆಕ್ಕಿಸದೆ ದುಷ್ಕರ್ಮಿಗಳ ಪೈಕಿ ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಗಾಯಾಳು ಪೇದೆ ಸತೀಶ್ ಚಂದ್ರ ಅವರಿಗೆ ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮದ್ದೂರು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಘಟನೆ ಸಂಬಂಧ ಮೈಸೂರು ರೈಲ್ವೆ ಪೊಲೀಸರು ಪ್ರಕಣ ದಾಖಲು ಮಾಡಿಕೊಂಡು ಉಳಿದ ನಾಲ್ವರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

click me!