ಹಾವೇರಿಯಲ್ಲಿ ಬಾಲಕನ ಅಪಹರಣ ಯತ್ನ; ಸಮಯಪ್ರಜ್ಞೆ ಬಾಲಕ ಬಚಾವ್!

Published : Dec 01, 2024, 11:34 PM ISTUpdated : Dec 01, 2024, 11:53 PM IST
ಹಾವೇರಿಯಲ್ಲಿ ಬಾಲಕನ ಅಪಹರಣ ಯತ್ನ; ಸಮಯಪ್ರಜ್ಞೆ ಬಾಲಕ ಬಚಾವ್!

ಸಾರಾಂಶ

ಆಟವಾಡುತ್ತಿದ್ದ ಬಾಲಕನನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಲು ಯತ್ನಿಸಿರುವ ಘಟನೆ ಹಾವೇರಿ ನಗರದ ಪುರದ ಓಣಿಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಬಾಲಕ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದಿದ್ದಾನೆ.

ಹಾವೇರಿ (ಡಿ.1): ಆಟವಾಡುತ್ತಿದ್ದ ಬಾಲಕನನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಲು ಯತ್ನಿಸಿರುವ ಘಟನೆ ಹಾವೇರಿ ನಗರದ ಪುರದ ಓಣಿಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಬಾಲಕ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದಿದ್ದಾನೆ.

ಮೊಹ್ಮದ್ ಅಯಾನ್(12) ಅಪಹರಣಕ್ಕೊಳಗಾಗಿದ್ದ ಬಾಲಕ.ಹಾವೇರಿ ನಗರದ ಪುರದ ಓಣಿ ನಿವಾಸಿ ಮೊಹಮ್ಮದ್ ಅಯಾನ್ ಇಂದು ಸಂಜೆ ಸುಮಾರು 7 ಗಂಟೆಗೆ ಎಂದಿನಂತೆ ಹೊರಗಡೆ ಬಂದಿದ್ದ. ಈ ವೇಳೆ ಮಾರುತಿ ಇಕೋ ವ್ಯಾನ್ ನಲ್ಲಿ ಮಾಸ್ಕ್ ಧರಿಸಿದ್ದ ಅಪಹರಿಸಲು ಬಂದ ನಾಲ್ವರು ಆಗುಂತಕರು. ಬಾಲಕನ್ನು ಹಿಡಿದು ವ್ಯಾನ್‌ಗೆ ತಳ್ಳಿದ್ದಾರೆ. ಪುರದ ಓಣಿಯಿಂದ ಕಿಡ್ನಾಪ್ ಮಾಡಿದ ಬಳಿಕ ಅಲ್ಲಿಂದ ಅಕ್ಕಿಪೇಟೆಗೆ ಕರೆತಂದಿರುವ ದುರುಳರು. ಈ ವೇಳೆ ಅಲ್ಲಿಂದ ಬಿಡಿಸಿಕೊಳ್ಳಲು ಯತ್ನಿಸಿದ ಬಾಲಕನ ಮುಖದ ಭಾಗ, ಗಲ್ಲ ಹಾಗೂ ಬೆನ್ನಿಗೆ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲಿ ಅಪಹರಣಕಾರರಿಗೆ ತುರ್ತು ವಿಸರ್ಜನೆ ಹಿನ್ನೆಲೆ ಮಧ್ಯೆ ವ್ಯಾನ್ ನಿಲ್ಲಿಸಿ ಕೆಳಗಿಳಿದಿದ್ದಾರೆ. ಗಾಡಿ ನಿಲ್ಲಿಸಿ ಡೂರ್ ತೆಗೆದಿದ್ದೇ ತಡ ಅಲ್ಲಿಂದ ತಕ್ಷಣ ಹೊರಕ್ಕೆ ಜಿಗಿದು ತಪ್ಪಿಸಿಕೊಂಡು ಬಂದಿರುವ ಬಾಲಕ.

ನಂಬಿಕಸ್ಥರೇ ಮೋಸ ಮಾಡಿದ್ರೆ ಯಾರನ್ನ ನಂಬೋದು? ಬರೋಬ್ಬರಿ 3 ಕೋಟಿ ಮೌಲ್ಯದ ಮೊಬೈಲ್ ಎಗರಿಸಿದ ಭೂಪ!

ಬಾಲಕನ ಕಿಡ್ನಾಪ್ ವಿಚಾರ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಜನರು. ಬಾಲಕನ ಮೈಮೇಲೆ ಪೆಟ್ಟು ಬಿದ್ದಿರುವ ಹಿನ್ನೆಲೆ ಅಳುತ್ತಾ ಓಡಿ ಬಂದಿದ್ದಾನೆ. ಈ ಘಟನೆಯಿಂದ ಹಾವೇರಿ ನಿವಾಸಿಗಳಲ್ಲಿ ಮಕ್ಕಳ ಅಪಹರಣಕಾರರ ಆತಂಕ ಮನೆ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!