ಬೆಂಗಳೂರು; ರಾಮಮಂದಿರ ನಿಧಿ ಸಂಗ್ರಹ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳ ದಾಳಿ

By Suvarna NewsFirst Published Jan 29, 2021, 9:49 PM IST
Highlights

ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ/ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳಿಂದ ದಾಳಿ/ ಬಿಸ್ಮಿಲ್ಲಾ  ನಗರದಲ್ಲಿ ಘಟನೆ/ ಪರಿಸ್ಥಿತಿ ನಿಯಂತ್ರಣಕ್ಕೆ ತಂದ ಪೊಲೀಸರು

ಬೆಂಗಳೂರು (ಜ.  29)  ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡುತ್ತಿದ್ದ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳ ತಂಡವೊಂದು ದಾಳಿ ಮಾಡಿದೆ. ನಗರ ಬಿಸ್ಮಿಲ್ಲಾ ನಗರದಲ್ಲಿ ಘಟನೆ ಸಂಭವಿಸಿದ್ದು ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ನಿಧಿ ಸಮರ್ಪಣೆ ವೇಳೆ ಹಲ್ಲೆಗೆ ಮುಂದಾದ ಗುಂಪೊಂದು ಪ್ರಚಾರೆದ ರಥಕ್ಕೂ ಹಾನಿ ಮಾಡಿದೆ.  ಶೇಷಾಚಲ, ಯಶವಂತ್, ಸುರೇಶ್ ಗಾಯಗೊಂಡಿದ್ದಾರೆ.

ರಾಮಮಂದಿರಕ್ಕೆ ಹುಬ್ಬಳ್ಳಿ ಉದ್ಯಮಿಯಿಂದ ಕೋಟಿ ದೇಣಿಗೆ

ನಿಮಗೆ ಇಲ್ಲಿಗೆ ಬರಲು ಅವಕಾಶ ಕೊಟ್ಟವರು ಯಾರು? ಇಲ್ಲಿಂದ  ಜಾಗ ಖಾಲಿ ಮಾಡಿ ಎಂದು ಹೇಳುತ್ತ ಬಂದ ಗುಂಪು ಕಲ್ಲಿನಿಂದ ದಾಳಿ ಮಾಡಿದೆ ಎಂದು ಕಾರ್ಯಕರ್ತರು ಹೇಳಿದ್ದಾರೆ.

ಸುದ್ದಗುಂಟೆ ಠಾಣೆಗೆ ಆಗಮಿಸಿದ ಡಿಸಿಪಿ ಶ್ರೀನಾಥ್ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.  ಇನ್ನೊಂದು ಕಡೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇಡೀ ದೇಶಾದ್ಯಂತ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ ನಡೆಯುತ್ತಿದೆ.

 

click me!