ಗುರುಗ್ರಾಮ್: 13 ವರ್ಷದ ಬಾಲಕಿ ಮೇಲೆ ಅಪ್ರಾಪ್ತನಿಂದಲೇ ಅತ್ಯಾಚಾರ: ಕಾವಲು ನಿಂತ ಸ್ನೇಹಿತ

By Suvarna News  |  First Published May 22, 2022, 6:29 PM IST

ಗುರುಗ್ರಾಮ್‌ನಲ್ಲಿ 13 ವರ್ಷದ ಬಾಲಕಿಯ ಮೇಲೆ ಅಪ್ರಾಪ್ತ ಬಾಲಕ ಅತ್ಯಾಚಾರವೆಸಗಿದ್ದು, ಈ ವೇಳೆ ಆತನ ಸ್ನೇಹಿತ ಕೊಠಡಿಗೆ ಬೀಗ ಹಾಕಿ ಕಾವಲು ಕಾಯುತ್ತಿದ್ದ ಎಂದು ಸಂತ್ರಸ್ತೆಯ ಸಹೋದರಿ ಆರೋಪಿಸಿದ್ದಾರೆ. ಪೊಲೀಸರು ಇಬ್ಬರನ್ನೂ ಬಂಧಿಸಿದ್ದು,  ತನಿಖೆ ಮುಂದುವರೆದದಿದೆ. 


ಗುರುಗ್ರಾಮ್‌ (ಮೇ 22): ಗುರುಗ್ರಾಮ್‌ನಲ್ಲಿ 13 ವರ್ಷದ ಬಾಲಕಿಯ ಕೋಣೆಗೆ ಅಪ್ರಾಪ್ತನೊಬ್ಬ ನುಗ್ಗಿಅತ್ಯಾಚಾರವೆಸಗಿದ್ದು, ಈ ವೇಳೆ ಆತನ ಸ್ನೇಹಿತ ಕೊಠಡಿಗೆ ಬೀಗ ಹಾಕಿ ಕಾವಲು ನಿಂತಿದ್ದ ಎಂದು ಆರೋಪಿಸಲಾಗಿದೆ. ತನ್ನ ಸಹೋದರಿ ಮಲಗಿದ್ದಾಗ ಆಕೆಯ ಕೋಣೆಗೆ ನುಗ್ಗಿ 17 ವರ್ಷದ ಬಾಲಕ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆಯ ಸಹೋದರಿ ಆರೋಪಿಸಿದ್ದಾರೆ. ಈ ವೇಳೆ 15 ವರ್ಷದ ಹುಡುಗ ಕೋಣೆಗೆ ಹೊರಗಿನಿಂದ ಬೀಗ ಹಾಕಿ ಕಾವಲು ಕಾಯುತ್ತಿದ್ದ ಎಂದು ಆರೋಪಿಸಲಾಗಿದೆ.

ಇಬ್ಬರೂ ಅಪ್ರಾಪ್ತರನ್ನು ಬಂಧಿಸಿ ಮಕ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ಫರಿದಾಬಾದ್‌ನಲ್ಲಿರುವ ಮಕ್ಕಳ ಮನೆಗೆ ರಿಮಾಂಡ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

Tap to resize

Latest Videos

ಮೇ 17 ರಂದು ಈ ಘಟನೆ ನಡೆದಿದೆ. ಸಂತ್ರಸ್ತೆಯ ಸಹೋದರಿ ಬಜ್‌ಘೇರಾ ಪೊಲೀಸ್ ಠಾಣೆಗೆ ಬಂದು ಇಬ್ಬರ ವಿರುದ್ಧ ದೂರು (Crime News) ದಾಖಲಿಸಿದ್ದಾರೆ. ಯುವತಿಯ ಪೋಷಕರು ತಮ್ಮ ಮಗಳ ಆಕ್ರಂದನ ಕೇಳಿ ಕೋಣೆಗೆ ತಲುಪಿದ ನಂತರ ಅಪ್ರಾಪ್ತರು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಯುವತಿಯ ಸಹೋದರಿ ತಿಳಿಸಿದ್ದಾರೆ. 

ಇದನ್ನೂ ಓದಿ: ಯುವತಿ ಗ್ಯಾಂಗ್‌ ರೇಪ್‌: ಬಾಂಗ್ಲಾದ 12 ಅಪರಾಧಿಗಳಿಗೆ ಶಿಕ್ಷೆ

ಈ ಹಿಂದೆಯೂ ಕಿರುಕುಳ: ಈ ಹಿಂದೆಯೇ ಹಿರಿಯ ಹುಡುಗ ಬಾಲಕಿಯ ಬಾತ್ರೂಮ್‌ಗೆ ನುಗ್ಗಿದ್ದ ಆದರೆ ತಾನು ತಪ್ಪಾಗಿ ಒಳಗೆ ಪ್ರವೇಶಿಸಿದ್ದೇನೆ ಎಂದು ಹೇಳಿ ಅಲ್ಲಿಂದ ಹೊರಬಿದ್ದಿದ್ದ ಎಂದು ದೂರುದಾರರು ಆರೋಪಿಸಿದ್ದಾರೆ.

ಏತನ್ಮಧ್ಯೆ, ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POSCO) ಕಾಯ್ದೆಯ ಸೆಕ್ಷನ್ 4 ಮತ್ತು 17ರ ಅನ್ವಯ ಎಫ್‌ಐಆರ್ ದಾಖಲಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ದೃಢಪಟ್ಟ ನಂತರ ಪೊಲೀಸರು ಬಾಲಕರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತೆಯ 'ಡಿಜಿಟಲ್ ರೇಪ್', 81 ವರ್ಷದ ವರ್ಣಚಿತ್ರಕಾರ ಅರೆಸ್ಟ್‌!

click me!