ಕೊಳ್ಳೇಗಾಲ: ತಂದೆ-ತಾಯಿ ಬೇಡ .. 18 ತುಂಬಿದ ಮೇಲೆ ಅವನನ್ನೇ ಮದುವೆ ಆಗುವೆ..ಬಾಲಕಿಯ ಹಠ!

Published : Feb 07, 2022, 10:45 PM ISTUpdated : Feb 07, 2022, 10:53 PM IST
ಕೊಳ್ಳೇಗಾಲ: ತಂದೆ-ತಾಯಿ ಬೇಡ .. 18 ತುಂಬಿದ ಮೇಲೆ ಅವನನ್ನೇ ಮದುವೆ ಆಗುವೆ..ಬಾಲಕಿಯ ಹಠ!

ಸಾರಾಂಶ

* 18 ತುಂಬಿದ ತಕ್ಷಣ ಪ್ರೇಮಿ ಜೊತೆ ವಿವಾಹ, * ಅಲ್ಲಿತನಕ ನನ್ನ  ಬಾಲಮಂದಿರದಲ್ಲಿ ರಕ್ಷಣೆ ಕೊಡಿ * ಪ್ರೇಮಿ ವಿರುದ್ದ ದೂರು  ನೀಡಲು ನಿರಾಕರಿಸಿದ ಅಪ್ರಾಪ್ತೆ  * ತಂದೆ  ಮನೆಗೂ ತೆರಳದೆ ಬಾಲಮಂದಿರದತ್ತ ಹೆಜ್ಜೆ..! 

ಕೊಳ್ಳೇಗಾಲ( ಫೆ 7)  ಪ್ರೀತಿಸಿದ ಯುವಕನ (Lover) ಜೊತೆ ನನಗೆ 18ವಷ೯ ತುಂಬಿದ ನಂತರ ಮದುವೆ ಆಗುವೆ. ಅಲ್ಲಿತನಕ ನನ್ನನ್ನ ಬಾಲಮಂದಿರಕ್ಕೆ (Balamandira) ಕಳುಹಿಸಿ , ನಾನು ನನ್ನ ತಂದೆ, ತಾಯಿ ಜೊತೆ ಹೋಗಲ್ಲ ಹೀಗೆಂದು ಗ್ರಾಮಾಂತರ ಠಾಣೆಯಲ್ಲಿ ಮುಳ್ಳೂರು  ಗ್ರಾಮದ ಬಾಲಕಿ ದೂರು ನೀಡಿದ್ದು ರಕ್ಷಣೆ ಕೋರಿದ್ದಾಳೆ.

ನಾನು ಪ್ರೇಮಿಯನ್ನೆ ನಾನು (Marriage) ವಿವಾಹವಾಗುವೆ. ಆತನನ್ನು ಹಲವು ತಿಂಗಳುಗಳಿಂದ ಪ್ರೀತಿಸುತ್ತಿರುವೆ. ಆದರೆ ಆತ ನನ್ನ ದೇಹ ಮುಟ್ಟಿಲ್ಲ, ನಮ್ಮದು ನಿಜವಾದ ಪ್ರೀತಿ, ಆತ ಅನ್ಯ ಜಾತಿಯ ಯುವಕ. ಹಾಗಾಗಿ ಗ್ರಾಮದಲ್ಲಿ ನನ್ನನ್ನು ಹಾಗೂ ಕುಟುಂಬದವರನ್ನು ನೋಡುವ ರೀತಿಯೆ ಬೇರೆಯಾಗಿದೆ.  ಆತನ ಮೇಲೆ ನನ್ನ ಪೋಷಕರು  ಒತ್ತಡ ಮಾಡಿ ದೂರು ನೀಡಲು ಕರೆತಂದಿದ್ದಾರೆ, ಆದರೆ ನಾನು ನನ್ನ ಪ್ರೇಮಿ ಬಗ್ಗೆ ದೂರು ನೀಡಲಾರೆ ಎಂದಿದ್ದಾಳೆ.

POCSO Case : 17ರ ಬಾಲಕನ ಹಿಂದೆ ಬಿದ್ದಿದ್ದು 35ರ ಆಂಟಿ : ಆಮೇಲಾಗಿದ್ದೆ ಬೇರೆ

ನನಗೆ 18 ತುಂಬಿದ ತಕ್ಷಣ ನಾನೇ ವಿವಾಹವಾಗುವೆ. ಅಲ್ಲಿತನಕ   ನನ್ನನ್ನು ಬಾಲ ಮಂದಿರದಲ್ಲಿಡಿ, ನಾನು ನಮ್ಮ ಮನೆಗೆ ಹೋಗಲ್ಲ, ತಂದೆ, ತಾಯಿ ಜೊತೆ ಇರಲ್ಲ ಎಂದು ಅಪ್ರಾಪ್ತೆ   ಗ್ರಾಮಾಂತರ ಪೊಲೀಸರಿಗೆ ನೀಡಿರುವ ದೂರಿನಲ್ಲಿ  ವಿವರಿಸಿದ್ದಾರೆ. 

ಏನಿದು ಕಥೆ?: ಮುಳ್ಳೂರು ಗ್ರಾಮದ  9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಹಿಂದೆ  ಗ್ರಾಮದ  ಯುವಕ  ಬಿದ್ದಿದ್ದಾನೆ. ಪ್ರೀತಿಸುವುದಾಗಿ  ಹೇಳುತ್ತಿದ್ದನಂತೆ.  ಹಲವು ತಿಂಗಳುಗಳ ಬಳಿಕ  ನಡೆ, ನುಡಿ ಕಂಡು ಆತನೊಂದಿಗೆಗೆ  ಪ್ರೇಮಾಂಕುರವಾಗಿದೆ. ಕಾಲೇಜಿಗೆ ಹೋಗುತ್ತೆನೆಂದು ಜ.10ರಂದು ತೆರಳಿದ ಬಾಲಕಿ ತನ್ನ ಪ್ರಿಯಕರನ ಮಾತಿಗೆ ಮನಸೋತು ಬಿಳಿಗಿರಿರಂಗನಬೆಟ್ಟ ಮತ್ತು ತಲಕಾಡಿಗೆ ತೆರಳಿ ಪೂಜೆ ಮಾಡಿಸಿ ಬರುವ ವೇಳೆ ಅವರ ಸಂಬಂಧಿಕರು ನೋಡಿದ್ದಾರೆ.

ಅವರ  ಪೋಷಕರಿಗೆ ವಿಚಾರ ತಿಳಿಸಿದ ಬಳಿಕ ಇವರಿಬ್ಬರ ಪ್ರೇಮಾಂಕುರ ಬಯಲಿಗೆ ಬಂದಿದ್ದು  ಬಾಲಕಿ ಮನೆಯಲ್ಲಿ ಗಲಾಟೆ ನಡೆದಿದೆ. ಈ ವೇಳೆ ಮನನೊಂದ ಬಾಲಕಿ ಯುವಕನ ಮನೆಗೆ ತೆರಳಿದ್ದಾಳೆ.  ಯುವಕನ ಪೋಷಕರು ನೀನು ಅಪ್ರಾಪ್ತೆ 18ತುಂಬಿದ ತನಕ ನಿಮ್ಮ ಮನೆಯಲ್ಲಿಯೇ ಇರು, ಆಮೇಲೆ ವಿವಾಹ ಮಾಡಿಕೊಳ್ಳೋಣ  ಎಂದಿದ್ದಾರೆ. ಬಳಿಕ ಆಕೆ ತಮ್ಮಸಂಬಂಧಿಕರ ಮನೆ ಹೊಸದೊಡ್ಡಿಯಲ್ಲಿಯೇ ಕೆಲ ಕಾಲ ಇದ್ದು ಗ್ರಾಮದ್ಲಲಿ ಅನ್ಯ ಜಾತಿ ಯುವಕನೊಂದಿಗೆ ಈಕೆ ಪ್ರೇಮ ಪ್ರಸಂಗ ಬಯಲಾಗುತ್ತಿದ್ದಂತೆ ನಾನಾ ಚೆಚ೯ಗಳು ಆರಂಭವಾದ ಕಾರಣ ನಡೆದ ಹಿನ್ನೆಲೆ  ಫೆ.5ರಂದು ಅಪ್ರಾಪ್ತೆ ಪೋಷಕರು ಯುವಕನ  ವಿರುದ್ದ ದೂರು ನೀಡಲು ಠಾಣೆಗೆ ಕರೆತಂದಿದ್ದಾರೆ. ಆದರೆ ಬಾಲಕಿ ತನ್ನ ಪ್ರಿಯಕರನ ವಿರುದ್ಧ ದೂರು ನೀಡಲ್ಲ ಎಂದಿದ್ದಾರೆ.

ನಾನು ಮನೆಗೂ ಹೋಗಲ್ಲ, ತಂದೆ, ತಾಯಿ ಜೊತೆಯೂ ಇರಲ್ಲ, ನನಗೆ 18ತುಂಬುವ ತನಕ ಬಾಲಮಂದಿರದಲ್ಲಿಡಿ ಎಂದು ದೂರು ನೀಡಿದ್ದಾಳೆ. ಪಿಎಸೈ ಮಂಜುನಾಥ್
ಪ್ರಕರಣ ದಾಖಲಿಸಿಕೊಂಡು, ಆಕೆಯನ್ನು ಬಾಲಮಂದಿರಕ್ಕೆ ಕಳುಹಿಸುವ ಮೂಲಕ  ಮುಂದಿನ ಕ್ರಮ ಕೈಗೊಂಡಿದ್ದಾರೆ.

ತಮಿಳುನಾಡಿನಲ್ಲಿ  ನಲವತ್ತರ ಮಹಿಳೆಯೊಬ್ಬಳು ಹದಿನೇಳು ವರ್ಷದ ಬಾಲಕನ ಹಿಂದೆ ಬಿದ್ದಿದ್ದಳು. ಕುಟುಂಬದವರಿಗೆ ವಂಚಿಸಿ ಯುವಕನನ್ನು ಜತೆಗೆ ಕರೆದುಕೊಂಡು ಹೋಗಿ ಮದುವೆ ಮಾಡಿಕೊಂಡ ಪ್ರಕರಣ ವರದಿಯಾಗಿತ್ತು.  

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ