ಕಾರು ನಿಲ್ಲಿಸಬೇಡ ಎಂದಿದ್ದೇ ತಪ್ಪಾಯ್ತು... ಮನೆಗೆ ನುಗ್ಗಿ ರಾಡ್ ನಿಂದ ಹೊಡೆದು ಕೊಂದ ನೆರೆಮನೆಯವರು!

By Contributor Asianet  |  First Published Feb 7, 2022, 4:12 PM IST

* ಕಾರು ಪಾರ್ಕಿಂಗ್ ವಿಚಾರದಲ್ಲಿ ಉಂಟಾದ ಕಿರಿಕ್
* ಮನೆ ಮುಂದೆ ಕಾರು ನಿಲ್ಲಿಸಬೇಡ ಎಂದ ವೃದ್ಧನ ಹತ್ಯೆ
* ಕ್ಷುಲ್ಲಕ ಕಾರಣಕ್ಕೆ ರಾಡ್ ಹಿಡಿದು ಮನೆಗೆ ನುಗ್ಗಿದರು


ಚೆನ್ನೈ( ಫೆ. 07)  ಮನೆಯ ಎದುರಿಗೆ ಕಾರ್ ಪಾರ್ಕಿಂಗ್ (Car Parking) ಮಾಡುವ ವಿಚಾರ ವಿಕೋಪಕ್ಕೆ ಹೋಗಿದ್ದು ಕೊಲೆಯಲ್ಲಿ (Murder) ಅಂತ್ಯವಾಗಿದೆ. ಚೆನ್ನೈನ (Chennai ) ಪುಝಲ್ ಟೌನ್ ನಲ್ಲಿ ಘಟನೆ ನಡೆದಿದೆ ಕಾರ್ ಪಾರ್ಕಿಂಗ್ ವಿಚಾರಕ್ಕೆ ಉಂಟಾದ ಜಗಳದಲ್ಲಿ ವೃದ್ಧನ ಹತ್ಯೆಯಾಗಿದೆ. ನೆರೆಹೊರೆಯವರೆ ಆತನ ಮೇಲೆ ಹಲ್ಲೆ ಮಾಡಿ ಸಾಯಿಸಿದ್ದಾರೆ. 

ಫೆಬ್ರವರಿ 1 ರಂದು ಈ ಘಟನೆ ನಡೆದಿದ್ದು, ಭರತ ರಾಮರ್ (62) ಎಂಬುವರ ಕೊಲೆಯಾಗಿದೆ. ವೃದ್ಧ ತಮ್ಮ ಮನೆ ಮುಂದೆ ಕಾರು ನಿಲ್ಲಿಸದಂತೆ ಪಕ್ಕದ ಮನೆಯ ಕುಮಾರನ್  ಕೇಳಿಕೊಂಡಿದ್ದಾನೆ. ಆದರೂ ಕುಮಾರನ್ ಕಾರು ನಿಲ್ಲಿಸಿದ್ದಾನೆ.  ಮತ್ತೆ ಪ್ರಶ್ನೆ ಮಾಡಿದ ವೃದ್ಧನ ಮೇಲೆ ಕೋಪಗೊಂಡ ಕುಮಾರನ್ ತನ್ನ ಕುಟುಂಬಸ್ಥರೊಂದಿಗೆ ವೃದ್ಧನ ಮನೆಗೆ ನುಗ್ಗಿದ್ದಾನೆ. ದೊಣ್ಣೆ ಮತ್ತು ರಾಡ್‌ಗಳಿಂದ ರಾಮರ್ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ನಂತರ ರಾಮರ್ ಮತ್ತು ಅವರ ಕುಟುಂಬವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.  ಆದರೆ ರಾಮರ್ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.

Tap to resize

Latest Videos

ಜನವರಿ 26 ರಂದು ರಾಮರ್ ತನ್ನ ಮನೆಯಲ್ಲಿ ಗೃಹಪ್ರವೇಶ ಸಮಾರಂಭವನ್ನು ಹಮ್ಮಿಕೊಂಡಿದ್ದರು.   ಇದೇ ಕಾರಣಕ್ಕೆ ತಮ್ಮ ಮನೆ ಮುಂದೆ ಕಾರು ನಿಲ್ಲಿಸಬೇಡಿ.. ರಸ್ತೆ ಬ್ಲಾಕ್ ಆಗುತ್ತದೆ ಎಂದು ಕುಮಾರನ್ ಬಳಿ ಹೇಳಿದ್ದರು. ಆದರೂ ಕುಮಾರನ್ ಕಾರು ನಿಲ್ಲಿಸಿದಾಗ ಮತ್ತೆ ಮತ್ತೆ ಪ್ರಶ್ನೆ ಮಾಡಿದ್ದರು.

ಮಂಡ್ಯದಲ್ಲಿ ಮಹಿಳೆಯೊಂದಿಗೆ ನಾಲ್ವರು ಮಕ್ಕಳನ್ನು ಕೊಚ್ಚಿ ಕೊಂದರು

ಕುಮಾರನ್ ಮತ್ತು ಆತನ ತಾಯಿ ಮಲಾರ್, ಸಂಬಂಧಿಕರಾದ ಅರುಣಗಿರಿ, ಪಳನಿ, ರೇವತಿ ಮತ್ತು ಸಂಗೀತಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಕುಮಾರನ್‌ನನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಹೆಂಡತಿ ಕೊಂದು ಸುಸೈಡ್ ಎಂದು ಬಿಂಬಿಸಿದ್ದ: ಕಳೆದ ತಿಂಗಳು ಚೆನ್ನೈನಲ್ಲಿ ತನ್ನ ಹೆಂಡತಿಯನ್ನು ಹೊಡೆದು ಕೊಂದು, ಆತ್ಮಹತ್ಯೆ ಎಂದು ಬಿಂಬಿಸಿದ್ದವನ ಕಳ್ಳಾಟ ಬಯಲಾದ ಕಾರಣ ಗಂಡನ ಸೆರೆಯಾಗಿತ್ತು. 

ಪತ್ನಿ  ಜೀವಿತಾ (24)ಳನ್ನು 2020 ರಲ್ಲಿ ಆರೋಪಿ ಹರಿ ಎಂಬಾತ ಮದುವೆಯಾಗಿದ್ದ.  ದಂಪತಿ ತೊಂಡಿಯಾರ್‌ಪೇಟೆಯಲ್ಲಿ ವಾಸಿಸುತ್ತಿದ್ದರು. ಪತ್ನಿಯನ್ನು ಕೊಲೆ ಮಾಡಿದ ಬಳಿಕ ಆಕೆ ಸ್ನಾನಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹರಿ ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದ. ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಿಳೆಯ ಶವವನ್ನು ಹೊರತೆಗೆದು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. 

ಮರಣೋತ್ತರ ಪರೀಕ್ಷೆ ವೇಳೆ  ಆಕೆಯ ಎದೆಯ ಮೇಲೆ ಗಾಯದ ಗುರುತು ಕಂಡುಬಂದ ನಂತರ ಸಂತ್ರಸ್ತೆಯ ಪೋಷಕರು ಅನುಮಾನಗೊಂಡು ದೂರು ನೀಡಿದ್ದರು.  ಪೊಲೀಸರು ವಿಚಾರಣೆ ಮಾಡಿದಾಗ ಕೊಲೆ ಮಾಡಿದ್ದ ವಿಚಾರ ಬಾಯಿ ಬಿಟ್ಟಿದ್ದ.

ಎಣ್ಣೆ ಹಾಕಲು ನೂರು ರೂ. ಕೇಳಿದವನ ಹತ್ಯೆ:   ಮದ್ಯಪಾನ ಮಾಡಲು 100 ಕೇಳಿದವನಿಗೆ ತೂಕ ಮಾಡುವ ಬಟ್‌ನಿಂದ ತಲೆಗೆ ಹೊಡೆದು ಸ್ನೇಜಹಿತನೆ ಕೊಲೆ ಮಾಡಿದ್ದ. ಬಳಿಕ ಅಪಘಾತವಾಗಿದೆ ಎಂದು ಸುಳ್ಳಿನ ಕತೆ ಹೇಳಿ ತಪ್ಪಿಸಿಕೊಂಡಿದ್ದ. ಮಾಂಸದಂಗಡಿ ಕೆಲಸಗಾರನೊಬ್ಬ ಕೊಡಿಗೇಹಳ್ಳಿ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.

ಮತ್ತಿಕೆರೆ ನಿವಾಸಿ ಪ್ರತೀಕ್‌.ಎಸ್‌.ಯಾದವ್‌ (28) ನನ್ನು ಕೊಲೆ ಮಾಡಲಾಗಿತ್ತು.  ಕೇರಳ ಮೂಲದ ಸಮೀಶ್‌ನನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಕೆಲ ದಿನಗಳ ಹಿಂದೆ ಕೊಡಿಗೇಹಳ್ಳಿ ತಿಂಡ್ಲು ಸರ್ಕಲ್‌ನ ಕರ್ನಾಟಕ ಫೋರ್ಕ್ ಮಟನ್‌ ಸ್ಟಾಲ್‌ನಲ್ಲಿ ಈ ಕೃತ್ಯ ನಡೆದಿತ್ತು.

ಐದಾರು ತಿಂಗಳಿಂದ ಸುರೇಶ್‌ ಎಂಬುವರಿಗೆ ಸೇರಿದ ಕೊಡಿಗೇಹಳ್ಳಿ ತಿಂಡ್ಲು ಸರ್ಕಲ್‌ನಲ್ಲಿದ್ದ ಕರ್ನಾಟಕ ಫೋರ್ಕ್ ಮಟನ್‌ ಸ್ಟಾಲ್‌ನಲ್ಲಿ ಕೇರಳ ಮೂಲದ ಸಮೀಶ್‌ ಮಾಂಸ ಕತ್ತರಿಸುವ ಕೆಲಸ ಮಾಡುತ್ತಿದ್ದ. ಆ ಅಂಗಡಿಗೆ ತನ್ನ ಮಾಲೀಕನ ಜತೆ ಆಗಾಗ್ಗೆ ಬರುತ್ತಿದ್ದ ಪ್ರತೀಕ್‌ ಜತೆ ಸಮೀಶ್‌ಗೆ ಸ್ನೇಹವಾಗಿತ್ತು. ಇದೇ ಗೆಳತನದಲ್ಲಿ ಅ.17ರಂದು ಸುರೇಶ್‌ ಜತೆ ಅಂಗಡಿಗೆ ಬಂದ ಪ್ರತೀಕ್‌, ಮದ್ಯ ಸೇವನೆಗೆ .100 ಕೊಡುವಂತೆ ಸಮೀಶ್‌ಗೆ ಕೇಳಿದ್ದಾನೆ. ಆಗ ತನ್ನ ಬಳಿ ಹಣವಿಲ್ಲವೆಂದು ಹೇಳಿದಾಗ ಗೆಳೆಯನಿಗೆ ಪ್ರತೀಕ್‌ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಕೆರಳಿದ ಆರೋಪಿ, ಪ್ರತೀಕ್‌ ತಲೆಗೆ 1 ಕೆ.ಜಿ. ತೂಕದ ಬಟ್‌ನಿಂದ ಹೊಡೆದಿದ್ದ. 

 

click me!