ಬಾಲಕಿಯ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ/ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ರೇವೂರ (ಬಿ) ಬಳಿ ಶವ ಪತ್ತೆ/ ರೇವೂರ - ಚಿಂಚೋಳಿ ಮಾರ್ಗದ ರಸ್ತೆ ಬದಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ ಪತ್ತೆ/ 14 ರಿಂದ 15 ವರ್ಷದ ಅಪರಿಚಿತ ಅಪ್ರಾಪ್ತ ಬಾಲಕಿಯ ಶವ/ ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಶಂಕೆ/ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಡಿ ಪರಿಶೀಲನೆ
ಕಲಬುರಗಿ(ಫೆ. 25) ಕಲಬುರಗಿ ಜಿಲ್ಲೆಯಿಂದ ಘೋರ ಪ್ರಕರಣವೊಂದು ವರದಿಯಾಗಿದೆ. ದೂರದ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಕೇಳುತ್ತಿದ್ದ ಘಟನೆಗಳು ನಮ್ಮದೆ ರಾಜ್ಯದಲ್ಲಿ ನಡೆದು ಹೋಗಿದೆ.
ಬಾಲಕಿಯ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ರೇವೂರ (ಬಿ) ಬಳಿ ಶವ ಪತ್ತೆಯಾಗಿದೆ. ರೇವೂರ - ಚಿಂಚೋಳಿ ಮಾರ್ಗದ ರಸ್ತೆ ಬದಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಟ್ರಾಫಿಕ್ ಪೊಲೀಸರ ಕಿರುಕುಳಕ್ಕೆ ಬೇಸತ್ತು ಮಾಂಗಲ್ಯ ಮಾರಲು ಮುಂದಾದ ಮಹಿಳೆ
14 ರಿಂದ 15 ವರ್ಷದ ಅಪರಿಚಿತ ಬಾಲಕಿಯ ಶವ ಎಂದು ಹೇಳಲಾಗಿದೆ. ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಡಿ ಪರಿಶೀಲನೆ ನಡೆಸಿದ್ದಾರೆ. ಅಫಜಲಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿಯಿಂದಲೂ ಒಂದು ವಿಚಿತ್ರ ಪ್ರಕರಣ ವರದಿಯಾಗಿತ್ತು. ಲಾಕ್ ಡೌನ್ ಸಂದರ್ಭ ಅಪ್ರಾಪ್ತರನ್ನು ಮದುವೆ ಮಾಡಿ ಕೊಡಲಾಗಿದ್ದು ಬಾಲಕಿಯರು ಗರ್ಭಿಣಿಯರಾಗಿದ್ದರು. ಹೆರಿಗೆಗೆ ಎಂದು ಆಸ್ಪತ್ರೆಗೆ ದಾಖಲಾಗಿದ್ದಾಗ ಪ್ರಕರಣ ಬೆಳಕಿಗೆ ಬಂದಿತ್ತು .