ಹಣದ ವಿಚಾರಕ್ಕೆ ಯುವಕನ ಕೈಕಾಲು ಕಟ್ಟಿ ಅಮಾನವೀಯವಾಗಿ ಥಳಿಸಿದ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಕೊಪ್ಪ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು (ಫೆ.8): ಹಣದ ವಿಚಾರಕ್ಕೆ ಯುವಕನ ಕೈಕಾಲು ಕಟ್ಟಿ ಅಮಾನವೀಯವಾಗಿ ಥಳಿಸಿದ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಕೊಪ್ಪ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸತೀಶ್ ಹಲ್ಲೆಗೊಳಗಾಗಿದ್ದ ಕಾರ್ಮಿಕ. ಮಹೇಶ್, ವಿಠಲ್, ಸಿರಿಲ್, ಸುನೀಲ್ ,ಮಂಜು ಬಂಧಿತ ಆರೋಪಿಗಳು. ದುಡಿದ ಹಣ ಕೇಳಿದ್ದಕ್ಕೆ ಹಣ ಕೊಡುತ್ತೇವೆಂದು ನಂಬಿಸಿ ಕರೆಸಿಕೊಂಡಿದ್ದ ಆರೋಪಿಗಳು. ಕೊಪ್ಪ ತಾಲೂಕಿನ ಸೋಮ್ಲಪುರ ರಸ್ತೆಯ ಪ್ಲಾಂಟೇಶನ್‌ಗೆ ಕರೆದುಕೊಂಡು ಹೋಗಿ ಯುವಕನಿಗೆ ಮನಸೋ ಇಚ್ಛೆ ಥಳಿಸಿದ್ದರು. ಹಗ್ಗದಿಂದ ಯುವಕನನ್ನು ಮರಕ್ಕೆ ಕಟ್ಟಿಹಾಕಿ ಚಿತ್ರಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಸಂಬಳ ಕೇಳಿದ್ದಕ್ಕೆ ಕಾರ್ಮಿಕನಿಗೆ ಮನಬಂದಂತೆ ಥಳಿಸಿ ವಿಕೃತಿ ಮೆರೆದ ಹೋಟೆಲ್ ಮಾಲೀಕ!
ಹಲ್ಲೆ ನಡೆಸಿದ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ದುರುಳರು. ಹಲ್ಲೆ ಮಾಡಿ ಚಿತ್ರ ಹಿಂಸೆ ನೀಡಿರುವ ವಿಡಿಯೋ ವೈರಲ್ ಆಗಿತ್ತು. ಗಂಭೀರ ಗಾಯಗೊಂಡ ಸತೀಶ್ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಪ್ರಕರಣ ಸಂಬಂಧ ಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ಚಿಕ್ಕಮಗಳೂರು ಎಸ್‌ಪಿ ತಂಡ ರಚನೆ ಮಾಡಿದ್ದರು. ಕೊನೆಗೂ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.
ಯಾದಗಿರಿ: ಬಡವರ ಅಕ್ಕಿ ಕಾಳಸಂತೆಯ ಪಾಲು; ಪಡಿತರ ಕಳ್ಳಸಾಗಣೆ ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲ