ಜಮೀನು ವಿವಾದಿಂದ ಮನೆ ನುಗಿ 14 ವರ್ಷದ ಬಾಲಕಿ ಮುಂದೆ ತಂದೆ ಮೇಲೆ ದಾಳಿ ನಡೆಸಿದ್ದಾರೆ. ಭೀಕರ ದಾಳಿಯಿಂದ ಬಾಲಕಿ ಆಘಾತಗೊಂಡು ಕುಸಿದು ಬಿದ್ಧು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.
ತೆಲಂಗಾಣ(ಆ.17) ಜಮೀನು ವಿವಾದದಲ್ಲಿ ಕುಟುಂಬ ಸದಸ್ಯರ ನಡುವೆ ಜಗಳ, ಮಾರಾಟ ಮಾರಿ, ಹತ್ಯೆಗಳು ನಡೆದಿದೆ. ಘನಘೋರ ಯುದ್ದಗಳೇ ನಡೆದುಹೋಗಿದೆ. ಇದೀಗ ತೆಲಂಗಾಣದಲ್ಲಿ ದಾರುಣ ಘಟನೆಯೊಂದು ವರದಿಯಾಗಿದೆ. ಜಮೀನು ವಿವಾದದ ಕಾರಣ ನೇರವಾಗಿ ಮನೆಗೆ ನುಗ್ಗಿದ ಮೂವರು ಕಣ್ಣೆದುರಲ್ಲೇ ತಂದೆ ಮೇಲೆ ಭೀಕರ ದಾಳಿ ನಡೆಸಿದ್ದಾರೆ. ಪ್ರೀತಿಯ ಅಪ್ಪನ ಮೇಲೆ ದಾಳಿಯಿಂದ ಬೆಚ್ಚಿ ಬಿದ್ದ 14 ವರ್ಷದ ಪುತ್ರಿ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಸೂರ್ಯಪೇಟೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಕಾಸಮ್ ಪಾವನಿ ದುರಂತ ಅಂತ್ಯಕಂಡಿದ್ದಾಳೆ. ಪಾವನಿಗೆ ತನ್ನಲ್ಲೇ ಜಗತ್ತೆ ತಂದೆಯಾಗಿದ್ದ. ಅಪ್ಪನ ಅತೀಯಾಗಿ ನೆಚ್ಚಿಕೊಂಡಿದ್ದ ಪಾವನಿ ಹಾಗೂ ತಂದೆ ಮನೆಯಲ್ಲಿದ್ದ ವೇಳೆ ಹಳೇ ಜಮೀನು ವಿವಾದದಲ್ಲಿ ಆಕ್ರೋಶಗೊಂಡಿದ್ದ ಮೂವರು ನೇರವಾಗಿ ಮನೆಗೆ ನುಗ್ಗಿದ್ದಾರೆ. ಬಳಿಕ ಪಾವನಿ ತಂದೆ ಸೊಮಯ್ಯ ಮೇಲೆ ಬೀಕರ ದಾಳಿ ನಡೆಸಿದ್ದಾರೆ.
ತಂದೆ ಮೇಲೆ ದಾಳಿ ಮಾಡದಂತೆ ಪಾವನಿ ಕೂಗಿದ್ದಾಳೆ. ಸಹಾಯಕ್ಕಾಗಿ ಬೇಡಿದ್ದಾಳೆ. ಆದರೆ ಮೂವರು ಏಕಾಕಿ ದಾಳಿ ನಡೆಸಿದ್ದಾರೆ. ಇದರಿಂದ ಆಘಾತಗೊಂಡ ಪಾವನಿ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಇತ್ತ ಭೀಕರ ದಾಳಿಯಿಂದ ತಂದೆ ಸೋಮಯ್ಯ ಕುಸಿದು ಬಿದ್ದರೆ, ಅತ್ತ ಬಾಲಕಿ ಆಘಾತದಿಂದ ಕುಸಿದು ಬಿದ್ದಿದ್ದಾಳೆ. ದಾಳಿ ನಡೆಸಿದ ಮೂವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಅತ್ಯಾಚಾರಕ್ಕೊಳಗಾದ ಬಾಲಕಿ ತಾಯಿಗೆ ಯೋಗಿ ಭರವಸೆ, ಆರೋಪಿ ಶಾಪ್ ಮೇಲೆ ನುಗ್ಗಿದ ಬುಲ್ಡೋಜರ್!
ಆರ್ತನಾದ ಕೇಳಿ ಸ್ಥಳೀಯರು ಓಡಿ ಬಂದಿದ್ದಾರೆ. ಈ ವೇಳೆ ದಾಳಿ ನಡೆಸಿದ ಮೂವರು ಪರಾರಿಯಾಗಿದ್ದಾರೆ. ತಕ್ಷಣವೇ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ತಪಾಸಣೆ ನಡೆಸಿದ ವೈದ್ಯರು, ಬಾಲಕಿ ಹೃದಯ ಸ್ತಂಭನದಿಂದ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಇತ್ತ ತಂದೆ ಸೊಮಯ್ಯ ತೀವ್ರ ಗಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಾಳಿ ಮಾಡಿದ ಮೂವರನ್ನು ಗುರುತಿಸಿದ್ದಾರೆ. ಕದಾರಿ ಸೈದುಲು, ಕದಾರಿ ಸೊಮಯ್ಯ ಹಾಗೂ ಕಾಸಮ್ ಕಲಿಂಗ್ ದಾಳಿ ನಡೆಸಿ ಪರಾರಿಯಾಗಿದ್ದಾರೆ. ತಂದೆ ಮೇಲೆ ದಾಳಿಯಿಂದ ಪುತ್ರಿ ಮೃತಪಟ್ಟಿದ್ದಾಳೆ. ಶೀಘ್ರದಲ್ಲೇ ಆರೋಪಿಗಳ ಅರೆಸ್ಟ್ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇತ್ತ ಸೋಮಯ್ಯ ಕುಟುಂಬ ಕಂಗಾಲಾಗಿದೆ. ಇದ್ದ ಒಬ್ಬ ಪುತ್ರಿ ಆಘಾತದಲ್ಲಿ ಮೃತಪಟ್ಟರೆ, ಸೋಮಯ್ಯ ತೀವ್ರಗಾಯದಿಂದ ಆಸ್ಪತ್ರೆ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪ್ರಾಪ್ತೆ ಕೈ ಹಿಡಿದು ಐ ಲವ್ ಯು ಹೇಳಿದ 19ರ ಯುವಕನಿಗೆ 2 ವರ್ಷ ಜೈಲು ಶಿಕ್ಷೆ!