ಕಾಡುಗೋಡಿಯ ಕಂಪನಿಯೊಂದರ ಕಚೇರಿ ಬೀಗ ಮುರಿದು 20 ಲ್ಯಾಪ್‌ಟಾಪ್‌ಗಳು, ವಾಷ್ ರೂಮ್ ಟ್ಯಾಪ್ ಗಳು ಸೇರಿದಂತೆ ಇತರೆ ವಸ್ತುಗಳನ್ನು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರು(ಆ.17): ಬೀಗ ಹಾಕಿದ ಮನೆಗಳು ಹಾಗೂ ಕಚೇರಿಗಳ ಬೀಗ ಮುರಿದು ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಳೇ ಬೈಯಪ್ಪನಹಳ್ಳಿಯ ಅರುಣ್ (23), ಅಜಯ್ (24), ಪ್ರತಾಪ್ (25) ಹಾಗೂ ಸಾಯಿ ಅಲಿಯಾಸ್ ಅಪ್ಪು(25) ಬಂಧಿತರು. ಆರೋಪಿಗಳಿಂದ ₹4 ಲಕ್ಷ ಮೌಲ್ಯದ 24 ಗ್ರಾಂ ಚಿನ್ನಾಭರಣಗಳು, ದ್ವಿಚಕ್ರ ವಾಹನ ಹಾಗೂ ವಿವಿಧ ಕಂಪನಿಗಳ 11 ಲ್ಯಾಪ್ಟಾಪ್ ಜಪ್ತಿ ಮಾಡಲಾಗಿದೆ.
ನಗರದಲ್ಲಿ ಕಳ್ಳತನ, ಕಾಡಿನಲ್ಲಿ ವಾಸ: ಐನಾತಿ ಕಳ್ಳನ ಬಂಧನ
ಇತ್ತೀಚೆಗೆ ಕಾಡುಗೋಡಿಯ ಕಂಪನಿಯೊಂದರ ಕಚೇರಿ ಬೀಗ ಮುರಿದು 20 ಲ್ಯಾಪ್‌ಟಾಪ್‌ಗಳು, ವಾಷ್ ರೂಮ್ ಟ್ಯಾಪ್ ಗಳು ಸೇರಿದಂತೆ ಇತರೆ ವಸ್ತುಗಳನ್ನು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.