Car Accident: ಸಚಿವ ಗೋವಿಂದ ಕಾರಜೋಳ ಕಾರು ಅಪಘಾತ

By Suvarna NewsFirst Published Nov 25, 2021, 10:16 PM IST
Highlights

* ಸಚಿವ ಗೋವಿಂದ ಕಾರಜೋಳ ಕಾರು ಅಪಘಾತ
* ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಘಟನೆ
* ಅಪಘಾತದಲ್ಲಿ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯ

ಬೆಂಗಳೂರು, (ನ.25): ನಗರದ ಹೊರವಲಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ (National Highway) 48ರಲ್ಲಿ ಸಚಿವ ಗೋವಿಂದ ಕಾರಜೋಳ ಅವರ ಕಾರು ಅಪಘಾತವಾಗಿದೆ (Govind Karjol Car Accident).

ಇಂದು(ನ.25) ತುಮಕೂರು-ಬೆಂಗಳೂರು (Bengaluru) ಮಾರ್ಗಮಧ್ಯೆ ಗೋವಿಂದ ಕಾರಜೋಳ ಅವರ ಕಾರು, ಬೈಕ್‍ಗೆ ಡಿಕ್ಕಿ (Car Bike Accident) ಹೊಡೆದಿದೆ. ನೆಲಮಂಗಲ ತಾಲೂಕಿನ ಮಹಿಮಾಪುರ ಗೇಟ್ ಬಳಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.  ಗಾಯಾಳುವನ್ನು ತಾಳೆಕೆರೆ ಪಾಳ್ಯ ನಿವಾಸಿ ಕೃಷ್ಣ ಮೂರ್ತಿ(45) ಎಂದು ಗುರುತಿಸಲಾಗಿದೆ.

Car Accident; ರಾಮನಗರ ಬಳಿ ಘೋರ ಅಪಘಾತ, ಊಟ ಬಿಟ್ಟು ಗಾಯಾಳುಗಳ ನೆರವಿಗೆ ಧಾವಿಸಿದ ಪ್ರತಾಪ್ ಸಿಂಹ

 ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆ ಬರುವ ವೇಳೆ ಕಾರಿಗೆ ಅಡ್ಡಲಾಗಿ ಬೈಕ್ ಬಂದಾಗ ಅಪಘಾತವಾಗಿದೆ. ಗಾಯಳು ಕೃಷ್ಣ ಮೂರ್ತಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ನೆಲಮಂಗಲ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಆಸ್ಪತ್ರೆಗೆ ಸಚಿವ ಕಾರಜೋಳ ಭೇಟಿ:
ಅಪಘಾತದ ನಂತರ ಕಾರಜೋಳ, ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಳು ಆರೋಗ್ಯ ವಿಚಾರಿಸಿ ಮಾನವೀಯತೆ ಮೆರೆದರು. ಬಳಿಕ ಗಾಯಾಳು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗೆ ಬಂದ ಸಚಿವರು ನಂತರ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಬಗ್ಗೆ ವೈದ್ಯರ ಜೊತೆ ಚರ್ಚೆ ನಡೆಸಿ ಗಾಯಾಳುವಿನ ಆರೋಗ್ಯ ವಿಚಾರಿಸಿ ಆತನ ಖರ್ಚು ವ್ಯೆಚ್ಚವನ್ನು ಬರಿಸುವುದಾಗಿ ತಿಳಿಸಿದರು.

 ಗಾಯಾಳು ಮದ್ಯಪಾನ ಮಾಡಿ ಬೈಕ್ ಚಲಾಯಿಸಿರುವುದು ಸಾಭೀತಾಗಿದೆ. ಆತ ಕೂಡ ಒಪ್ಪಿಕೊಂಡಿದ್ದು, ಕಾರಜೋಳ ಅಧಿಕಾರಿಗಳ ಜೊತೆಗೆ ಚರ್ಚಿಸಿ ಸಮಸ್ಯೆಯಾಗದಂತೆ ಮನವರಿಕೆ ಮಾಡಿಕೊಟ್ಟು ನಂತರ ಖಾಸಗಿ ವಾಹನದಲ್ಲಿ ಬೆಂಗಳೂರು ಕಡೆ ತೆರಳಿದರು.

ದಂಪತಿ ಇಬ್ಬರು ಮಕ್ಕಳ ದಾರುಣ ಸಾವು 
41 ವರ್ಷದ ಸತ್ಯಂ ಉಪಾಧ್ಯಾಯ(Satyam Upadhyay) ಇವರ ಪತ್ನಿ 38 ವರ್ಷದ ಮನಿಕಾ(Manika) ಹಾಗೂ ಈ ದಂಪತಿಯ ಇಬ್ಬರು ಮಕ್ಕಳಾದ 10 ವರ್ಷದ ಇಶಾನಿ( Ishani) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಈ ದಂಪತಿಯ 8 ವರ್ಷದ ಪುತ್ರ ಸ್ನೇಹ್‌(Sneh) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಬುಧವಾರ ಮಧ್ಯರಾತ್ರಿ ಸತ್ನಾ ಜಿಲ್ಲೆಯ ಜೀತ್‌ ನಗರ(Jeet Nagar)ದಲ್ಲಿ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ತೀವ್ರಗಾಯಗೊಂಡಿದ್ದ ಬಾಲಕ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಮೈಹಾರ್‌(Maihar) ಉಪ ವಿಭಾಗೀಯ ಪೊಲೀಸ್‌ ಅಧಿಕಾರಿ(SDOP) ಹಿಮಾಲಿ ಸೋನಿ( Himali Soni) ಹೇಳಿದ್ದಾರೆ.

click me!