ಅಬ್ಬಾ ಗಂಡಸರೂ ಇಲ್ಲಿ ಸೇಫ್ ಅಲ್ಲ: ಗೂಗಲ್ ಮ್ಯಾನೇಜರ್‌ನ ಎತ್ಹಾಕ್ಕೊಂಡ್ ಹೋಗಿ ಮದ್ವೆ

By Anusha KbFirst Published Oct 17, 2022, 12:12 PM IST
Highlights

ಇದುವರೆಗೆ ಹೆಣ್ಣು ಮಕ್ಕಳನ್ನು ಕಿಡ್ನಾಪ್ ಮಾಡಿ ಮದ್ವೆ ಆದಂತಹ ಪ್ರಕರಣಗಳು ನಡೆದಿದ್ದವು. ಆದರೆ ಈಗ ಹುಡುಗನೋರ್ವನನ್ನು ಬಂಧನದಲ್ಲಿರಿಸಿ ಮದ್ವೆಯಾದ ಘಟನೆಯೊಂದು ಭೋಪಾಲ್‌ನಲ್ಲಿ ನಡೆದಿದೆ. 

ಬೆಂಗಳೂರು: ಇದುವರೆಗೆ ಹೆಣ್ಣು ಮಕ್ಕಳನ್ನು ಕಿಡ್ನಾಪ್ ಮಾಡಿ ಮದ್ವೆ ಆದ ಹಲವು ಪ್ರಕರಣಗಳು ನಡೆದಿದ್ದವು. ಆದರೆ ಈಗ ಹುಡುಗನೋರ್ವನನ್ನು ಕೂಡ ಬಂಧನದಲ್ಲಿರಿಸಿ ಮದ್ವೆಯಾದ ಘಟನೆಯೊಂದು ಭೋಪಾಲ್‌ನಲ್ಲಿ ನಡೆದಿದೆ.  ಬೆಂಗಳೂರು ನಗರದಲ್ಲಿ ಗೂಗಲ್ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಗೃಹ ಬಂಧನದಲ್ಲಿರಿಸಿ ಒತ್ತಾಯಪೂರ್ವಕವಾಗಿ ಮದ್ವೆ ಮಾಡಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮತ್ತು ಬರಿಸುವ ಅಮಲು ಪದಾರ್ಥ ನೀಡಿ ಈತನಿಗೆ ತಿಳಿಯದಂತೆ ಭೋಪಾಲ್‌ನ ಕಮಲಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಯುವತಿಯೊಂದಿಗೆ ಈತನಿಗೆ ವಿವಾಹ ಮಾಡಿಸಲಾಗಿದೆ ಎಂದು ಈ ಗೂಗಲ್ ಮ್ಯಾನೇಜರ್ ದೂರಿದ್ದಾರೆ. ಹೀಗೆ ಬಂಧನದಲ್ಲಿರಿಸಿ ಒತ್ತಾಯಪೂರ್ವಕವಾಗಿ ವಿವಾಹ ಬಂಧನಕ್ಕೊಳಗಾದ ವ್ಯಕ್ತಿಯನ್ನು ಗಣೇಶ್ ಶಂಕರ್ ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಗೂಗಲ್ ಸಂಸ್ಥೆಯಲ್ಲಿ ಹಿರಿಯ ಮ್ಯಾನೇಜರ್ ಅಗಿ ಕೆಲಸ ಮಾಡುತ್ತಿದ್ದ. ಐಐಎಮ್‌ ಶಿಲ್ಲಾಂಗ್‌ನಲ್ಲಿ (IIM Shillong) ವ್ಯಾಸಂಗ ಮಾಡುತ್ತಿದ್ದಾಗ ಈ ಗಣೇಶ್ ಶಂಕರ್‌ಗೆ (Ganesh Shankar) ಭೋಪಾಲ್ (Bhopal) ಮೂಲದ ಸುಜಾತಾ ಎಂಬ ಯುವತಿಯ ಪರಿಚಯವಾಗಿತ್ತು. 

ಪ್ರೀತಿ ನಿರಾಕರಿಸಿದ್ದಕ್ಕೆ 15 ಮಂದಿಯಿಂದ ಮಹಿಳೆಯ ಕಿಡ್ನ್ಯಾಪ್‌: ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ದೂರುದಾರ ಶಂಕರ್ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಈತನನ್ನು ಕತ್ತಲಿನಲ್ಲಿ ಇರಿಸಿ ಮತ್ತು ಬರಿಸುವ ಅಮಲು ಪದಾರ್ಥವನ್ನು ಒತ್ತಾಯಪೂರ್ವಕವಾಗಿ ಕುಡಿಸಿ ಸುಜಾತ ಜೊತೆ ಆತನ ಮದುವೆಯನ್ನು ಸುಜಾತ ಪೋಷಕರು ಮಾಡಿಸಿದ್ದಾರೆ. ನಂತರ ಸುಜತಾ ಹಾಗೂ ಆತನ ಕುಟುಂಬದ ಸದಸ್ಯರು ಇಬ್ಬರ ಫೋಟೋ ತೆಗೆದುಕೊಂಡಿದ್ದಾರೆ. ನಂತರ 40 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇರಿಸಿದ್ದಾರೆ. ಒಂದು ವೇಳೆ ಹಣ ನೀಡಲು ವಿಫಲವಾದರೆ ನಿನ್ನ ವಿರುದ್ಧ ಈ ಫೋಟೋಗಳನ್ನು ಇರಿಸಿ ಸುಳ್ಳು ದೂರು ನೀಡುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಶಂಕರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಅಪ್ರಾಪ್ತ ಬಾಲಕನೊಂದಿಗೆ ಪರಾರಿಯಾಗಿದ್ದ ಆಂಟಿಯ ಬಂಧನ

ಶಂಕರ್ ನೀಡಿದ ದೂರಿನಂತೆ  ಕಮಲಾ ನಗರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಲಾಗಿದೆ.  ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294, 323, 342, 384, 506 ಹಾಗೂ ಸೆಕ್ಷನ್ 34 ರ ಅಡಿ ಪ್ರಕರಣ ದಾಖಲಿಸಲಾಗಿದೆ. ಯುವತಿ ಸುಜಾತ (Sujata), ಆಕೆಯ ತಂದೆ ಕಮಲೇಶ್ ಸಿಂಗ್ (Kamlesh Singh), ಸಹೋದರ ಸೈವೇಶ್ ಸಿಂಗ್ (Shaivesh Singh) ಹಾಗೂ ಆಕೆಯ ಭಾವ ವಿಜೇಂದ್ರ ಕುಮಾರ್ (Vijendra Kumar) ವಿರುದ್ಧ ಕೇಸ್ ದಾಖಲಿಸಲಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕಮಲಾ ನಗರ ಪೊಲೀಸ್ ಠಾಣೆ ಉಸ್ತುವಾರಿ ಅನಿಲ್‌ ಕುಮಾರ್ ಸಿಂಗ್ (Anil Kumar) ಹೇಳಿದ್ದಾರೆ. 

ಆದರೆ ಬೆಂಗಳೂರಿನಲ್ಲಿದ್ದ ಗೂಗಲ್ ಮ್ಯಾನೇಜರ್ ಭೋಪಾಲ್‌ಗೆ ಹೋಗಿದ್ದು ಹೇಗೆ ಹುಡ್ಗಿ ಕಡೆಯವರೆಗೆ ಎತ್ತಾಕೊಂಡು ಹೋದ್ರ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.
 

click me!