ತಪ್ಪಾಗಿ ಹೊಟೇಲ್ ಕೋಣೆಯ ಬಾಗಿಲು ಬಡಿದವಳಿಗೆ ಆಘಾತ: ನರ್ಸ್ ಮೇಲೆ ಸಾಮೂಹಿಕ ಅತ್ಯಾ*ಚಾರ

Published : Dec 23, 2025, 01:25 PM IST
Jharkhand crime Army jawan arrested over alleged rape at Ranchi railway station

ಸಾರಾಂಶ

ತಾನು ಹೋಗಬೇಕಾದ ಹೊಟೇಲ್ ರೂಮ್ ಬಿಟ್ಟು ತಪ್ಪಾಗಿ ಬೇರೆ ಕೋಣೆಯ ಬಾಗಿಲು ಬಡಿದ ಮಹಿಳೆಯೊಬ್ಬಳನ್ನು ಅಲ್ಲಿ ಒಳಗೆ ಬೀರ್ ಕುಡಿಯುತ್ತಾ ಕುಳಿತಿದ್ದ ಕಾಮುಕರು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರವೆಸಗಿದ್ದಾರೆ.

ತಾನು ಹೋಗಬೇಕಾದ ಹೊಟೇಲ್ ರೂಮ್ ಬಿಟ್ಟು ತಪ್ಪಾಗಿ ಬೇರೆ ಕೋಣೆಯ ಬಾಗಿಲು ಬಡಿದ ಮಹಿಳೆಯೊಬ್ಬಳನ್ನು ಅಲ್ಲಿ ಒಳಗೆ ಬೀರ್ ಕುಡಿಯುತ್ತಾ ಕುಳಿತಿದ್ದ ಕಾಮುಕರು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರವೆಸಗಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಸಮೀಪದ ಹೊಟೇಲ್‌ನಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ವೇದಾಂತ್ ನಗರ ಪೊಲೀಸರು ಆರೋಪಿಗಳಾದ ಘನಶ್ಯಾಮ್ ರಾಥೋಡ್ (27), ರಿಷಿಕೇಶ್ ಚವಾಣ್ (25), ಮತ್ತು ಕಿರಣ್ ರಾಥೋಡ್ (25) ಅವರನ್ನು ಬಂಧಿಸಿದ್ದಾರೆ. ಸಾಮೂಹಿಕ ಅತ್ಯಾ*ಚಾರಕ್ಕೊಳಗಾದ ಮಹಿಳೆ 30 ವರ್ಷದ ವಿವಾಹಿತ ಮಹಿಳೆಯಾಗಿದ್ದು, ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಮಹಿಳೆ ಬುಧವಾರ ರಾತ್ರಿ ತಮ್ಮ ಸ್ನೇಹಿತರೊಬ್ಬರನ್ನು ಭೇಟಿ ಮಾಡುವುದಕ್ಕಾಗಿ ಹೊಟೇಲ್‌ಗೆ ಹೋಗಿದ್ದು, ಅಲ್ಲಿ ರೂಮ್ ನಂಬರ್ 205ರ ಬಾಗಿಲು ಬಡಿದಿದ್ದಾರೆ. ಆದರೆ ಅದು ಅವರ ಸ್ನೇಹಿತರಿದ್ದ ರೂಮ್ ಆಗಿರಲಿಲ್ಲ, ಆಕೆಯ ಸ್ನೇಹಿತರು ರೂಮ್ ನಂಬರ್ 105ರಲ್ಲಿ ಇದ್ದರು ಎಂದು ವರದಿಯಾಗಿದೆ.

ಆರೋಪಿಗಳಲ್ಲಿ ಘನಶ್ಯಾಮ್ ರಾಥೋಡ್ ಹಾಗೂ ಕಿರಣ್ ರಾಥೋಡ್ ಇಬ್ಬರೂ ಬ್ಯಾಂಕಿನಲ್ಲಿ ರಿಕವರಿ ಏಜೆಂಟ್‌ಗಳಾಗಿದ್ದರೆ, ರಿಷಿಕೇಶ್ ಚವಾಣ್ ಎಂಬಿಎ ವಿದ್ಯಾರ್ಥಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಬುಧವಾರ ರಾತ್ರಿ 11 ಗಂಟೆಯಿಂದ ಗುರುವಾರ ಬೆಳಗಿನ ಜಾವ 3 ಗಂಟೆಯ ನಡುವೆ ಈ ಘಟನೆ ನಡೆದಿದ್ದು, ಕೃತ್ಯದ ನಂತರ ಆರೋಪಿಗಳು ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಇನ್ಸ್‌ಪೆಕ್ಟರ್ ಪ್ರವೀಣ ಯಾದವ್ ಹೇಳಿದ್ದಾರೆ. ತಾಂತ್ರಿಕ ಮತ್ತು ಸ್ಥಳೀಯ ಗುಪ್ತಚರ ಮಾಹಿತಿಯ ಆಧಾರದ ಮೇಲೆ ದೂರು ನೀಡಿದ ಮೂರು ಗಂಟೆಗಳಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಯಾದವ್ ಹೇಳಿದ್ದಾರೆ.

ಆರೋಪಿಗಳಾದ ಮೂವರು ಸ್ನೇಹಿತರು ಮತ್ತು ಮದ್ಯ ಕುಡಿಯಲು ಹೋಟೆಲ್ ಕೋಣೆಯಲ್ಲಿ ಒಟ್ಟುಗೂಡಿದ್ದರು. ಈ ವೇಳೆ ಸಂತ್ರಸ್ತೆ 105 ರ ಬದಲು ತಪ್ಪಾಗಿ ಆರೋಪಿಗಳಿದ್ದ ಕೊಠಡಿ 205 ಅನ್ನು ತಲುಪಿದ್ದಾರೆ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಆರೋಪಿಗಳು ಪರಿಸ್ಥಿತಿಯ ಲಾಭ ಪಡೆದು ಆಕೆಯ ಮೇಲೆ ಸಾಮೂಹಿಕ ಅತ್ಯಾ*ಚಾರ ಎಸಗಿದ್ದಾರೆ ಎಂದು ಯಾದವ್ ಹೇಳಿದರು. ಪೊಲೀಸರ ಪ್ರಕಾರ, ಬದುಕುಳಿದ ವ್ಯಕ್ತಿ ವಿವಾಹಿತೆಯಾಗಿದ್ದು, ಆಕೆಗೆ ಒಂದು ಮಗುವು ಇದೆ.

ಆಕೆ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ತಮ್ಮ ಕುಟುಂಬದ ಪ್ರಮುಖ ಜೀವನಾಧಾರವಾಗಿದ್ದಾರೆ. ಈ ಹಿಂದೆ ನಿರುದ್ಯೋಗಿಯಾಗಿದ್ದ ಮಹಿಳೆಯ ಪತಿ ಇತ್ತೀಚೆಗೆ ಕೆಲಸಕ್ಕೆ ಹೋಗಲು ಪ್ರಾರಂಭಿಸಿದರು. ಹೀಗಾಗಿ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದ್ದ ಮಹಿಳೆ ಜಲ್ನಾದ ಭೋಕರ್ದನ್‌ನಲ್ಲಿ ವಾಸಿಸುವ ತನ್ನ ಸ್ನೇಹಿತರೊಬ್ಬರಿಂದ ಆರ್ಥಿಕ ಸಹಾಯವನ್ನು ಕೋರಿದರು. ಸ್ನೇಹಿತೆ ಆಕೆಗೆ ಸಹಾಯ ಮಾಡುವುದಾಗಿ ಭರವಸೆ ನೀಡಿ ಹೋಟೆಲ್‌ನಲ್ಲಿ ತನ್ನನ್ನು ಭೇಟಿಯಾಗಲು ಹೇಳಿದಳು. ಈ ಮಧ್ಯೆ ರಾತ್ರಿ 11 ಗಂಟೆ ಸುಮಾರಿಗೆ ಮಹಿಳೆ ಫೋನ್ ಕರೆ ಸ್ವೀಕರಿಸಲು ಹೋಟೆಲ್‌ನಿಂದ ಹೊರಬಂದಿದ್ದಾಳೆ. ಹಿಂತಿರುಗುವಾಗ, ಅವಳು ತಪ್ಪಾಗಿ ಎರಡನೇ ಮಹಡಿಗೆ ಹೋಗಿ ತಪ್ಪು ಕೋಣೆಯ ಬಾಗಿಲನ್ನು ಬಡಿದಿದ್ದಾಳೆ.

ಇದನ್ನೂ ಓದಿ: ಪ್ರೀತಿಯ ಶ್ವಾನದ ಸಾವಿನ ದುಃಖದಿಂದ ಹೊರಬರಲಾಗದೇ ಸಾವಿಗೆ ಶರಣಾದ ಗಾಯಕಿ

ಇದೇ ವೇಳೆ ಆ ಕೋಣೆಯೊಳಗೆ ಮೂವರು ಆರೋಪಿಗಳು ಮದ್ಯಪಾನ ಮಾಡುವುದನ್ನು ಅವಳು ನೋಡಿದ್ದು, ತನ್ನ ಸ್ನೇಹಿತನ ಹೆಸರನ್ನು ಹೇಳಿದ್ದಾಳೆ ಈ ವೇಳೆ ಆರೋಪಿಗಳು ಅವನಿಲ್ಲ ಎಂದು ಹೇಳಿದ್ದಲ್ಲದೇ ಆಕೆ ಹೊರಡಲು ತಿರುಗುತ್ತಿದ್ದಂತೆ ಆರೋಪಿಗಳಲ್ಲಿ ಓರ್ವ ನಿನ್ನ ಸ್ನೇಹಿತ ಒಳಗೆ ಇದ್ದಾನೆ ಎಂದು ಹೇಳಿ ಆಕೆಯನ್ನು ಕೋಣೆಗೆ ಕರೆದಿದ್ದು,

ನಂತರ ಬಾಗಿಲನ್ನು ಲಾಕ್ ಮಾಡಿ, ಬಲವಂತವಾಗಿ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗಿನ ಜಾವ 3 ರಿಂದ 4 ಗಂಟೆಯ ನಡುವೆ, ಮಹಿಳೆ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದು, ನಂತರ ಆಕೆ ವೇದಾಂತ್ ನಗರ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾಳೆ. ಪೊಲೀಸರು ಸಾಮೂಹಿಕ ಅತ್ಯಾ*ಚಾರ, ಅಕ್ರಮ ಬಂಧನ ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:  ಪುಟ್ಟ ಬಾಲೆಯ ಬ್ಯಾಟಿಂಗ್‌ಗೆ ಫಿದಾ ಆದ ಡೆಲ್ಲಿ ಕ್ಯಾಪಿಟಲ್ಸ್‌: ಧೋನಿಯಿಂದಲೂ ಮೆಚ್ಚುಗೆ: ವೀಡಿಯೋ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಲೆಮರೆಸಿಕೊಂಡ ಬೈರತಿಗೆ ಇದೀಗ ‘ಕೋಕಾ’ ಕೋಳ?
ಲವರ್ ಜೊತೆ ಸೇರಿ ಪತಿ ಹತ್ಯೆಗೈದು ದೇಹದ ಒಂದೊಂದು ಪೀಸ್ ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ