
ಸಂಭಲ್ (ಡಿ.22) ಗಂಡ ಹೆಂಡತಿ ಸಂಸಾರದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾಗಿ ಬದುಕು ಮೂರಾಬಟ್ಟೆಯಾದ ಹಲವು ಘಟನೆಗಳಿವೆ. ಪತಿಯಿಂದ ಪತ್ನಿ ಹತ್ಯೆ, ಇತ್ತ ಪತ್ನಿಯಿಂದ ಪತಿ ಹತ್ಯೆಗಳು ಸಾಕಷ್ಟು ನಡೆದಿದೆ. ಆದರೆ ಇದೀಗ ನಡೆದ ಈ ಘಟನೆ ಊಹಿಸಲು ಕಷ್ಟವಾಗುತ್ತಿದೆ. ಲವರ್ ಜೊತೆಗಿರಲು ಪತ್ನಿ ಮಾಡಿದ ಖತರ್ನಾಕ್ ಐಡಿಯಾ ಕಟುಕ ಕೂಡ ಊಹಿಸಲಾರ. ಮದುವೆಯಾಗಿ 15 ವರ್ಷವಾಗಿದೆ. ಇಬ್ಬರು ಮಕ್ಕಳಿದ್ದಾರೆ. ಆದರೆ ಪತಿಗೆ ಗೊತ್ತಿಲ್ಲದೆ ಕದ್ದು ಮುಚ್ಚಿ ಲವರ್‌ನ್ನು ಮನೆಗೆ ಕರೆಯಿಸಿಕೊಳ್ಳುತ್ತಿದ್ದಳು ಈ ನೌಟಂಕಿ. ಈ ವಿಚಾರ ಪತಿಗೂ ತಿಳಿದಿದೆ. ಪತ್ನಿಗೆ ಬುದ್ದಿವಾದ ಹೇಳಿ, ಇವೆಲ್ಲಾ ಬಿಟ್ಟುಬಿಡು, ನಮ್ಮ ಮಕ್ಕಳು ದೊಡ್ಡವರಾಗುತ್ತಿದ್ದಾರೆ ಎಂದು ತಿಳಿ ಹೇಳಿದ್ದ.ಇಷ್ಟೇ ನೋಡಿ, ಪತಿ ಮನಸ್ಸಿನಲ್ಲೇ ಕೆಡ್ಡಾ ತೋಡುತ್ತಾ ತಲೆಯಾಡಿಸಿದ್ದಾಳೆ. ಕೆಲವೇ ದಿನದಲ್ಲಿ ಪತಿ ದೇಹ ಹಲವು ತುಂಡಗಳಾಗಿದ್ದು ಮಾತ್ರವಲ್ಲ, ಜಿಲ್ಲೆಯ ಗ್ರಾಮ ದ್ರಾಮದಲ್ಲಿ ಒಂದೊಂಡು ತುಂಡು ಎಸೆದ ಕ್ರೂರ ಹತ್ಯೆ ಘಟನೆ ಉತ್ತರ ಪ್ರದೇಶದ ಸಂಭಲ್‌ನಲ್ಲ ನಡೆದಿದೆ.
ಡಿಸೆಂಬರ್ 15ಕ್ಕೆ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ ದೇಹದ ಸಣ್ಣ ಸಣ್ಣ ತುಂಡು ಮಾತ್ರ ಸಿಕ್ಕಿತ್ತು. ಇದೇ ದೇಹದ ಭಾಗಗಳನ್ನು ಆಧರಿಸಿ ಪೊಲೀಸರು ತನಿಖೆ ನೆಡೆಸಿ ಇದೀಗ ಹತ್ಯೆಯ ಹಿಂದಿನ ಕಾರಣ, ಅಸಲಿ ಕತೆಗಳನ್ನು ಪೊಲೀಸರು ಬಯಲು ಮಾಡಿದ್ದಾರೆ. 40 ವರ್ಷದ ರಾಹುಲ್ ಹಾಗೂ ರೂಬಿಗೆ 15 ವರ್ಷದ ಹಿಂದೆ ಮದುವೆಯಾಗಿದೆ. ಈ ದಂಪತಿಗೆ 12 ವರ್ಷಗ ಮಗ ಹಾಗೂ 10 ವರ್ಷದ ಮಗಳಿದ್ದಾಳೆ. ಆದರೆ ರೂಬಿಗೆ ಗಂಡನಿಂದ ಆಕೆಯ ಲವರ್ ಗೌರವ್ ಮೇಲೆ ಮೋಹ. ಹೀಗಾಗಿ ಪತಿ ಇಲ್ಲದ ವೇಳೆ ಗೌರವ್ ಮನೆಗೆ ಬರುತ್ತಿದ್ದ. ಇದು ರಾಹುಲ್‌ಗೆ ಗೊತ್ತಾಗಿದೆ. ಬುದ್ದಿವಾದ ಹೇಳಿದ್ದಾನೆ. ರಾಹುಲ್ ತೀರಾ ನೊಂದುಕೊಂಡಿದ್ದರು, ಮಕ್ಕಳು ಭವಿಷ್ಯದ ದೃಷ್ಟಿಯಿಂದ ನೋವು ನುಂಗಿದ್ದ. ಆದರೆ ರೂಬಿ ಹಾಗಲ್ಲ, ಗೌರವ್ ಜೊತೆಗಿರುವುದು ಪತಿಗೆ ಗೊತ್ತಾಗಿದೆ. ಹೇಗಾದರೂ ಮಾಡಿ ಪತಿಯನ್ನೇ ಮುಗಿಸಲು ಗೌರವ್ ಜೊತೆ ಸ್ಕೆಚ್ ಹಾಕಿದ್ದಾಳೆ.
ಪತಿಯನ್ನೇ ಮುಗಿಸಿ ಬಿಡಲು ಹಲವು ಪ್ಲಾನ್ ಮಾಡಿದ್ದಾರೆ. ಮುಗಿಸಿದ ಬಳಿಕ ಮೃತದೇಹ ಹೂತು ಹಾಕಿದರೂ ಸಮಸ್ಯೆ, ವಿಲೇವಾರಿ ಮಾಡುವುದು ಹೇಗೆ ಎಂದು ಹಲವು ಬಾರಿ ಚರ್ಚೆ ನಡೆಸಿದ್ದಾರೆ. ದೇಶದಲ್ಲಿ ನಡೆದಿರುವ ಕೆಲ ಘಟನೆಗಳನ್ನು ತೆಗೆದು ಅಧ್ಯಯನ ಮಾಡಿದ್ದಾರೆ. ದೆಹಲಿ, ಶ್ರದ್ಧಾ ಕೇಸ್ ಸೇರಿದಂತೆ ಮೃತದೇಹ ವಿಲೇವಾರಿ ಸಿಕ್ಕಿ ಬಿದ್ದ ಘಟನೆ ತೆಗೆದು ಅಧಕ್ಕೆ ಕಾರಣ ಹುಡುಕಿದ್ದಾರೆ. ಈ ತಪ್ಪು ನಾವು ಮಾಡದಂತೆ ಎಚ್ಚರವಹಿಸಬೇಕು ಎಂದು ಪ್ಲಾನ್ ಮಾಡಿ ಗಂಡನ ಹತ್ಯೆ ಮಾಡಿದ್ದಾಳೆ.
ರೂಬಿ, ಗೌರವ್ ಹಾಗೂ ಮತ್ತೊಬ್ಬನ ನೆರವು ಪಡೆದು ಹಲವು ತುಂಡುಗಳಾಗಿ ರಾಹುಲ್ ಮೃತೇದಹ ಕತ್ತರಿಸಿದ್ದಾರೆ. ಸಂಭಲ್ ಜಿಲ್ಲೆಯ ಹಲವು ಗ್ರಾಮದಲ್ಲಿ ಮೃತೇದಹ ಒಂದೊಂದು ಪೀಸ್ ಎಸೆದಿದ್ದಾರೆ. ಕಾಡು, ತೊರೆ, ಸೇರಿದತೆ ಹಲವೆಡೆ ಎಸೆತಿದ್ದಾರೆ. ಈ ಪೈಕಿ ಚಂದೌಸಿ ಬಳಿಯ ಪತ್ರುವಾ ರಸ್ತೆ ನಿರ್ದನ ಪ್ರದೇಶದಲ್ಲಿ ಎಸೆಯಲು ಪ್ಲಾನ್ ಮಾಡಲಾಗಿದೆ. ಬ್ಯಾಗ್ ಸಮೇತ ಬಿಡಿ ಬಾಗ ಎಸೆತಿದ್ದಾರೆ. ಆದರೆ ಈ ಬ್ಯಾಗ್ ನಾಯಿಗಳು ಮತ್ತೆ ಬೀದಿ ಬದಿಗೆ ತಂದಿದೆ. ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 15ರಂದು ದೇಹದ ಒಂದು ಭಾಗ ಪತ್ತೆಯಾಗಿತ್ತು. ಪೊಲೀಸರು ಇದು ಅತ್ಯಂತ ಕ್ರೂರವಾಗಿ ಮಾಡಿದ ಮರ್ಡರ್ ಎಂದು ಒಂದೇ ನೋಟಕ್ಕೆ ಹೇಳಿಬಿಟ್ಟಿದ್ದರು. ಆದರೆ ಕೊಲೆಯಾದ ವ್ಯಕ್ತಿ ಯಾರು ಅನ್ನೋದು ಪತ್ತೆ ಹಚ್ಚಲು ದೇಹಗ ಒಂದು ಸಣ್ಣ ಭಾಗ ಮಾತ್ರವಿತ್ತು. ಹುಡುಕಾಟ ತೀವ್ರಗೊಂಡಿತ್ತು. ಈ ವೇಳೆ ಕೈಯ ಮತ್ತೊಂದು ಭಾಗ ಪಕ್ಕದ ಗ್ರಾಮದಲ್ಲಿ ಲಭ್ಯವಾಗಿತ್ತು.
ಈ ಕೈ ಮಹತ್ವದ ಸುಳಿವು ನೀಡಿತ್ತು.ಕಾರಣ ಈ ಕೈಯಲ್ಲಿ ರಾಹುಲ್ ಎಂದು ಹಚ್ಚೆ ಹಾಕಿತ್ತು. ರಾಹುಲ್ ಹೆಸರಿನ ಯಾರಾದರೂ ಕಾಣೆಯಾಗಿದ್ದಾರಾ? ಈ ಕುರಿತು ದೂರು ದಾಖಲಾಗಿದೆಯಾ, ಈ ಗ್ರಾಮದಲ್ಲಿ ರಾಹುಲ್ ಹೆಸರಿನ ವ್ಯಕ್ತಿಗಳು ಯಾರಿದ್ದಾರೆ ಎಂಬ ಹುಡುಕಾಟ ಶುರುವಾಯ್ತು. ಈ ವೇಳೆ ಚಾಲಕಿ ಪತ್ನಿ ರೂಬಿ ನೀಡಿದ ಮಸ್ಸಿಂಗ್ ಕಂಪ್ಲೇಟ್ ಪತ್ತೆಯಾಗಿತ್ತು. ಆದರೆ ಕಂಪ್ಲೇಟ್ ನೀಡಿದ ರೂಬಿ ನಾಪತ್ತೆಯಾಗಿದ್ದಳು. ರೂಬಿಯ ಇಬ್ಬರು ಮಕ್ಕಳು,ಕುಟುಂಬಸ್ಥರ ವಿಚಾರಣೆ ಆರಂಭಗೊಂಡಿದೆ. ಈ ವೇಳೆ ರಾಹುಲ್ ಮಗಳು ಮನೆಗೆ ಗೌರವ್ ವ್ಯಕ್ತಿ ಬರುತ್ತಿದ್ದರು. ನಮಗೆ ಚಾಕೋಲೇಟ್ ತರುತ್ತಿದ್ದರು ಎಂದಿದ್ದಾರೆ. ಇತ್ತೀಚೆಗೆ ತಂದೆ ತಾಯಿ ಜಗಳವಾಡಿದ್ದರು. ನಮಗೆ ಭಯವಾಗಿತ್ತು ಎಂದು ಕಣ್ಮೀರಿಟ್ಟಿದ್ದಾಳೆ.
ಪೊಲೀಸರು ನಾಪತ್ತೆಯಾಗಿದ್ದ ರೂಬಿಯನ್ನು ಹುಡುಕಿ ತಂದು ವಿಚಾರಣೆ ಮಾಡಿದಾಗ ಅಸಲಿ ಸತ್ಯ ಹೊರಬಂದಿದೆ. ಗೌರವ್ ಹಾಗೂ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಕೊಲೆ ಮಾಡಿದ್ದು ಹೇಗೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ