Dev Murari Bapu arrest:ಕಿರುಕುಳ, ಬೆದರಿಕೆ ಕೇಸ್, ಆತ್ಮಹತ್ಯೆಗೆ ಯತ್ನಿಸಿದ ದೇವ್ ಮುರಾರಿ ಬಾಪು ಬಂಧನ!

Published : Dec 04, 2021, 06:07 PM IST
Dev Murari Bapu arrest:ಕಿರುಕುಳ, ಬೆದರಿಕೆ ಕೇಸ್, ಆತ್ಮಹತ್ಯೆಗೆ ಯತ್ನಿಸಿದ ದೇವ್ ಮುರಾರಿ ಬಾಪು ಬಂಧನ!

ಸಾರಾಂಶ

ಅರ್ಚಕ ಮಥುರಾದ ದೇವ್ ಮುರಾರಿ ಬಾಪು ವಿರುದ್ಧ ಕಿರುಕುಳ, ಬೆದರಿಕೆ ಕೇಸ್ ಪೊಲೀಸರ ಬಂಧನದ ವೇಳೆ ಆತ್ಮಹತ್ಯೆ ಯತ್ನಿಸಿದ ಮುರಾರಿ ಬಾಬು ಮಹಿಳೆ ದೂರಿನ ಆಧಾರದಲ್ಲಿ ಮುರಾರಿ ಬಾಪು ಬಂಧಿಸಿದ ಪೊಲೀಸ್

ಮಥುರಾ(ಡಿ.04);  ಬಂಧಿಸಲು ಬಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ಹತ್ತಿರ ಬರಬೇಡಿ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದ ಮಥುರಾ ಶ್ರೀಕೃಷ್ಣ ದೇಗುಲದ(Sri Krishna's city Mathura) ಅರ್ಚಕ ದೇವ್ ಮುರಾರಿ ಬಾಪುವನ್ನು(Dev Murari Bapu) ಪೊಲೀಸರು ಬಂಧಿಸಿದ್ದಾರೆ(Arrest). ಮಹಿಳೆ ನೀಡಿದ ಕಿರುಕುಳ ಹಾಗೂ ಕೊಲೆ ಬೆದರಿಕೆ(molestation and threatening ದೂರಿನ ಆಧಾರದಲ್ಲಿ ಮುಥಾರ ಪೊಲೀಸರು ದೇವ್ ಮುರಾರಿ ಬಾಪುವನ್ನು ಬಂಧಿಸಿದ್ದಾರೆ.

ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮಹಿಳೆ ಅರ್ಚಕ್ ದೇವ್ ಮುರಾರಿ ಬಾಪು ಮನೆ ಮುಂದೆ ಅಳವಡಿಸಿದ್ದ ಸ್ಪೀಡ್‌ಬ್ರೇಕರ್‌ನಿಂದ ಬೈಕ್‌ನಿಂದ ನೆಲಕ್ಕೆ ಬಿದ್ದಿದ್ದಾರೆ. ದೇವ್ ಮುರಾರಿ ಬಾಪು ಅಕ್ರಮವಾಗಿ ಸ್ಪೀಡ್‌ಬ್ರೇಕರ್ ಅಳವಡಿಸಿದ್ದಾರೆ ಎಂದು ಮಹಿಳೆ ಅರ್ಚಕ ಮೇಲೆ ಆರೋಪ ಮಾಡಿದ್ದಾರೆ. ಇತ್ತ ಮಹಿಳೆ ವಿರುದ್ಧ ಗಂರ ಆದ ದೇವ್ ಮುರಾರಿ ಬಾಪು ಮಹಿಳೆಯನ್ನು ತಳ್ಳಿದ್ದಾರೆ. ಇದರಿಂದ ಮತ್ತೆ ನೆಲಕ್ಕುರುಳಿದ ಮಹಿಳೆ, ತನ್ನ ಮೇಲೆ ಹಲ್ಲೆ, ನಿಂದನೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

Krishna Janmabhoomi: ಅಯೋಧ್ಯೆ ಆಯ್ತು, ಇದೀಗ ಮಥುರೆ ಸಿದ್ಧತೆ: UP ಡಿಸಿಎಂ ಕೇಶವ ಪ್ರಸಾದ್‌ ಮೌರ್ಯ!

ಮಹಿಳೆ ನೀಡಿದ ದೂರಿನಿಂದ ಮಥುರಾ ಪೊಲೀಸರು(Mathura Police) ದೇವ್ ಮುರಾರಿ ಬಾಪು ಮನೆಗೆ ತೆರಳಿದ್ದಾರೆ. ಪೊಲೀಸರನ್ನು ನೋಡಿದ ದೇವ್ ಮುರಾರಿ ಬಾಪು ಮನೆಯಿಂದ ಹೊರಬಂದು ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ. ನನ್ನ ಚಾರಿತ್ರೆ ವಧೆ ಮಾಡುವ ಸುಳ್ಳು ಕೇಸ್ ಆಧರಿ ನನ್ನ ಬಂಧನಕ್ಕೆ ಬಂದಿರುವುದು ತಪ್ಪು. ಮಹಿಳೆ ನನ್ನ ಮೇಲೆ ಯಾಕೆ ದೂರು ನೀಡಿದ್ಡಾರೆ ಅನ್ನೋದು ತಿಳಿದಿಲ್ಲ. ನನ್ನನ್ನು ಬಂಧಿಸಲು ಯತ್ನಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಚಾಕು ಹಿಡಿದು ಪೊಲೀಸರನ್ನು ಬೆದರಿಸಿದ್ದಾರೆ.

ಪೊಲೀಸರು ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜವಾಗಿಲ್ಲ. ಹೀಗಾಗಿ ಪೊಲೀಸ್ ಅಧಿಕಾರಿ ಬಾಬುಗೆ ಗೊತ್ತಿಲ್ಲದಂತೆ ಹಿಂಬದಿಯಿಂದ ಬಂದು ಚಾಕು ಹಿಡಿದ ಕೈಯನ್ನು ಹಿಡಿದಿದ್ದಾರೆ. ಇದೇ ವೇಳೆ ಮುಂಭಾಗದಲ್ಲಿದ್ದ ಪೊಲೀಸರು ಬಾಪುವನ್ನು ಹಿಡಿದು ಬಂಧಿಸಿದ್ದಾರೆ. ಪೊಲೀಸರ ಕ್ರಮವನ್ನು ಕಂಡಿಸಿದ ಬಾಪು ಗಳಗಳನೆ ಅತ್ತಿದ್ದಾರೆ.

ಕೃಷ್ಣಜನ್ಮಭೂಮಿ ವಿವಾದ: ಜಾಮಾ ಮಸೀದಿ ಸರ್ವೆಗೆ ಮಥುರಾ ಕೋರ್ಟ್‌ನಲ್ಲಿ ಮನವಿ!

ಬಂಧನದ ಬಳಿಕ ಮಾತನಾಡಿರವ ದೇವ್ ಮುರಾರಿ ಬಾಪು, ನಾನು ಯಾವುದೇ ತಪ್ಪು ಮಾಡಿಲ್ಲ. ಮಹಿಳೆ ರಸ್ತೆಯಲ್ಲಿ ಬಿದ್ದಿರುವುದಕ್ಕೂ ನನಗೂ ಸಂಬಂಧವಿಲ್ಲ. ಆಕೆ ಸ್ಕೂಟರ್‌ನಿಂದ ಬಿದ್ದು ಗಾಯಮಾಡಿಕೊಂಡಿದ್ದಾಳೆ. ನಾನು ಆಕೆಯನ್ನು ತಳ್ಳಾಡಿಲ್ಲ. ಇನ್ನು ಇದೇ ಮೊದಲ ಬಾರಿಗೆ ಆ ಮಹಿಳೆಯನ್ನು ನೋಡಿದ್ದೇನೆ. ಆದರೆ ಆಕೆ ದೂರಿನಲ್ಲಿ ಹಲವು ದಿನಗಳಿಂದ ಕೊಲೆ ಬೆದರಿಕೆ ಹಾಕುತ್ತಿರುವುದಾಗಿ ಆರೋಪ ಮಾಡಿದ್ದಾರೆ. ಮಹಿಳೆಯ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆದರೆ ಪೊಲೀಸರು ಸುಳ್ಳು ಕೇಸ್ ಆಧಾರವಾಗಿಟ್ಟುಕೊಂಡು ಅರ್ಚಕನನ್ನು ಬಂಧಿಸಿದ್ದಾರೆ. ಇದು ನ್ಯಾಯ ಸಮ್ಮತವಲ್ಲ ಎಂದು ದೇವ್ ಮುರಾರಿ ಬಾಪು ಹೇಳಿದ್ದಾರೆ.

ಮುರಾರಿ ಬಾಪು ಮೇಲಿನ ಕೇಸ್‌ಗೆ ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ. ಕೇಸ್ ದಾಖಲಾದ ಬೆನ್ನಲ್ಲೇ ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಮುರಾರಿ ಬಾಪು ಅವರನ್ನು ಪೊಲೀಸ್ ಠಾಣೆಗೆ ಕರೆದು ಕೌನ್ಸಿಲಿಂಗ್ ಮಾಡಿದ್ದೇವೆ. ಮಹಿಳೆ ನೀಡಿದ ದೂರಿನ ವಿಚಾರಣೆ ನಡೆಯುತ್ತಿದೆ ಎಂದು ಮಥುರಾ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಮಹಿಳೆ ಕೇಸ್ ಮೇಲ್ನೋಟಕ್ಕೆ ಸುಳ್ಳು ಕೇಸ್‌ನಂತಿದೆ. ಹೀಗಾಗಿ ಮಹಿಳೆ ವಿರುದ್ಧ ಪ್ರಕರ ದಾಖಲಿಸಿ ಪೊಲೀಸರು ತನಿಖೆ ನಡೆಸಬೇಕು ಎಂದು ಮಥುರಾ ಹಲವು ಗುಂಪು ಆಗ್ರಹಿಸಿದೆ. ಮತ್ತೊಂದು ಗುಂಪು, ಅರ್ಚಕರು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದೀಗ ಶ್ರೀಕೃಷ್ಣನ ಜನ್ಮಸ್ಥಳ ಎಂದೇ ಹೆಸರುವಾಸಿಯಾಗಿರುವ ಮಥುರಾದಲ್ಲಿ ಪರ ವಿರೋಧಗಳು ಆರಂಭಗೊಂಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Darshan The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ ದರ್ಶನ್‌ ಮೆಸೇಜ್
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು