ಅಂತರಾಷ್ಟ್ರೀಯ ಖತರ್ನಾಕ್ ಆನ್‌ಲೈನ್ ವಂಚಕ ಬಂಧನ/ ವಿದೇಶಿ ಮೂಲದ ದೆಹಲಿ ನಿವಾಸಿ ಬ್ರೈಟ್ (25), ಬಂಧಿತ ಆರೋಪಿ/ ತನ್ನ ವಿದೇಶಿ ಸಹಚರರ ಜೊತೆಗೂಡಿ ಆನ್ ಲೈನ್ ನಲ್ಲಿ ವಂಚನೆ/ ಶಾದಿ ಡಾಟ್ ಕಾಮ್, ಮ್ಯಾಟ್ರೀಮೋನಿ ಸೇರಿದಂತೆ ಗಿಫ್ಟ್ ಕಳಿಸೋದಾಗಿ ಹಲವರಿಗೆ ಮೋಸ/
ಬೆಂಗಳೂರು(ನ. 28) ಅಂತರಾಷ್ಟ್ರೀಯ ಖತರ್ನಾಕ್ ಆನ್‌ಲೈನ್ ವಂಚಕ ಸೆರೆಸಿಕ್ಕಿದ್ದಾನೆ. ವಿದೇಶಿ ಮೂಲದ ದೆಹಲಿ ನಿವಾಸಿ ಬ್ರೈಟ್ (25) ಬಂಧಿತ ಆರೋಪಿ.ತನ್ನ ವಿದೇಶಿ ಸಹಚರರ ಜೊತೆಗೂಡಿ ಆನ್ ಲೈನ್ ನಲ್ಲಿ ವಂಚನೆ ಮಾಡುತ್ತಿದ್ದ.
ಶಾದಿ ಡಾಟ್ ಕಾಮ್, ಮ್ಯಾಟ್ರೀಮೋನಿ ಸೇರಿದಂತೆ ಗಿಫ್ಟ್ ಕಳಿಸೋದಾಗಿ ಹಲವರಿಗೆ ಮೋಸ ಮಾಡಿದ್ದಾನೆ. ಆನ್ ಲೈನ್ ನಲ್ಲಿ ಸಾಮಾನ್ಯ ಜನರ ಪರಿಚಯ ಮಾಡಿಕೊಂಡು ವಂಚನೆ ಎಸಗುತ್ತಿದ್ದ. ಬಂಧಿತ ಆರೋಪಿಗಳು ದೇಶಿಯ 38, ವಿದೇಶಿದ 28 ಬ್ಯಾಂಕ್ ಖಾತೆಗಳಲ್ಲಿ ಹಣ ವಹಿವಾಟು ಮಾಡಿರುವುದು ಪತ್ತೆಯಾಗಿದೆ.
ಈತ ಪ್ರಚಂಡ ಶ್ರೀಕಿ.. ಬಂಡವಾಳವಿಲ್ಲದೆ ಕೋಟಿ ಕೋಟಿ ಗಳಿಸಿದ್ದ
ಬಂಧಿತ ವಿದೇಶಿ ಮೂಲದವನಾಗಿದ್ದರೂ ಕೂಡ ಈವರೆಗೂ ಯಾವುದೇ ವೀಸಾ, ಪಾಸ್ ಪೋರ್ಟ್ ಪತ್ತೆ ಅಗಿಲ್ಲ ಬಂಧಿತ ಬ್ರೈಟ್ ವಿರುದ್ದ ಬೆಂಗಳೂರಿನಲ್ಲಿ ಮಾತ್ರ ವಿವಿಧ ಠಾಣೆಗಳಲ್ಲಿ 10 ಪ್ರಕರಣ ದಾಖಲಾಗಿದೆ. ಬಂಧಿತನಿಂದ ಹಲವು ಅಕೌಂಟ್ ಗಳು ಸೀಜ್ ಮಾಡಿ ಸುಮಾರು 8 ಲಕ್ಷ ರೂ. ಹಣ ಜಪ್ತಿ ಮಾಡಲಾಗಿದೆ. ನಾಲ್ಕು ವಿವಿಧ ಲ್ಯಾಪ್ ಟಾಪ್, 10 ವಿವಿಧ ಕಂಪನಿಯ ಮೊಬೈಲ್ ಗಳು ವಶಕ್ಕೆ ಪಡೆದುಕೊಳ್ಳಲಾಗಿದೆ ಆರೋಪಿ ಬ್ರೈಟ್ ನನ್ನು ದೆಹಲಿಯಲ್ಲಿ ಬಂಧಿಸಿ ವೈಟ್ ಫಿಲ್ಡ್ ಸೆನ್ ಪೋಲಿಸರು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.