* ವಿವಾಹಿತ ಮಹಿಳೆಯನ್ನು ಕಿಡ್ನಾಪ್ ಮಾಡಿದ ಕಾಮುಕ
* ಎರಡು ತಿಂಗಳ ಕಾಲ ನಿರಂತರ ಲೈಂಗಿಕ ದೌರ್ಜನ್ಯ
* ಎರಡು ಮಕ್ಕಳ ತಾಯಿ ಮಹಿಳೆಯನ್ನು ಹೊಲದಿಂದ ಹೊತ್ತೊಯ್ದರು
* ದೌರ್ಜನ್ಯ ಎಸಗಿದ್ದು ಅಲ್ಲದೇ ಧರ್ಮ ಬದಲಾಯಿಸಿಕೊಳ್ಳಲು ಒತ್ತಾಯ
ಪಾಟ್ನಾ(ಸೆ. 07) ವಿವಾಹಿತ ಮಹಿಳೆಯನ್ನು ಬಂಧಿಸಿ ಕರೆದೊಯ್ದ ಕಾಮುಕ ಎರಡು ತಿಂಗಳಿಗೂ ಹೆಚ್ಚು ಕಾಲ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೇ ಆಕೆ ಬಂಧಿಯಾಗಿದ್ದಾಗ ನೀನು ಮತಾಂತರ ಆಗಬೇಕು ಎಂದು ಒತ್ತಾಯ ಮಾಡಿದ್ದ ಎಂಬ ಸಂಗತಿ ಬಹಿರಂಗವಾಗಿದೆ.
ಮಹಿಳೆ ತನ್ನ ಕುಟುಂಬದ ಸದಸ್ಯರಿಗೆ ತನ್ನನ್ನು ಬಂಧಿಸಿಟ್ಟಿದ್ದ ಜಾಗದ ಬಗ್ಗೆ ಅದು ಹೇಗೋ ಮಾಹಿತಿ ನೀಡಿದ್ದು ಬಿಡಿಸಿಕೊಂಡು ಹೋಗಲು ಕೇಳಿದ್ದಾರೆ. ಕುಟುಂಬದವರು ಸಂಘಟನೆಯೊಂದರ ಜತೆ ಸೇರಿ ಇಬ್ಬರು ಮಕ್ಕಳ ತಾಯಿಯಾಗಿರುವ ಮಹಿಳೆಯ ರಕ್ಷಣೆ ಮಾಡಿದ್ದಾರೆ.
ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ, ಸುದ್ದಿ ತಿಳಿದ ಸಹೋದರ ಸುಸೈಡ್
ಈ ಬಗ್ಗೆ ದೂರು ನೀಡಿರುವ 28 ವರ್ಷದ ಸಂತ್ರಸ್ತೆ ಕಲೀಂ ಮತ್ತು ಆತನ ಸ್ನೇಹಿತರು ಜೂನ್ 30 ರಂದು ನಾನು ಹೊಲಕ್ಕೆ ಹೋಗಿದ್ದ ಸಂದರ್ಭ ಕಿಡ್ನಾಪ್ ಮಾಡಿದರು. ನಂತರ ನನ್ನನ್ನುಗೊತ್ತಿಲ್ಲದ ಜಾಗಕ್ಕೆ ಕರೆದುಕೊಂಡು ಹೋದರು. ಈ ಬಂಧನದ ವೇಳೆಯಲ್ಲೇ ನಿನ್ನ ಧರ್ಮ ಬದಲಾಯಿಸಿಕೊಳ್ಳಬೇಕು ಎಂದು ಕಲೀಂ ಒತ್ತಡ ಹೇರಿದ್ದ.
ತಾನು ಬಂಧನವಾದ ಜಾಗದಲ್ಲಿನ ಅಕ್ಕಪಕ್ಕದವರ ಸಹಾಯ ತೆಗೆದುಕೊಂಡ ಮಹಿಳೆ ಸಂಗತಿಯನ್ನು ಕುಟುಂಬಕ್ಕೆ ರವಾನಿಸಿದ್ದಾರೆ. ಇದಾದ ಮೇಲೆ ಆಕೆಯ ರಕ್ಷಣೆ ಮಾಡಲಾಗಿದೆ. ಆರೋಪಿಯೂ ಸೆರೆ ಸಿಕ್ಕಿದ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.