* ಸಹೋದರಿಯ ಮೇಲೆ ತಂದೆಯಿಂದಲೇ ಅತ್ಯಾಚಾರ
* ಆಡಿಯೋ ಕ್ಲಿಪ್ ವೈರಲ್ ನಂತರ ಸಹೋದರ ಸುಸೈಡ್
* ಪೊಲೀಸರಿಗೆ ದೊಡ್ಡ ತಲೆನೋವಾಗಿರತುವ ಪ್ರಕರಣ
ಜೋಧಪುರ(ಸೆ. 06) ಸಹೋದರಿಯ ಆಡಿಯೋ ಕ್ಲಿಪ್ ಒಂದು ವೈರಲ್ ಆದ ನಂತರ ಸಹೋದರ ಸುಸೈಡ್ ಮಾಡಿಕೊಂಡಿದ್ದಾನೆ. ಆ ಆಡಿಯೋದಲ್ಲಿ ಹುಡುಗಿ ತನ್ನ ಚಿಕ್ಕಮ್ಮನ ಜತೆ ಮಾತನಾಡಿದ್ದು ತಂದೆಯೇ ತನ್ನ ಮೇಲೆ ಅತ್ಯಾಚಾರ ಎಸಗಿದ ಘೋರ ಘಟನೆಯನ್ನು ಹೇಳುತ್ತಾ ಹೋಗುತ್ತಾಳೆ. ಇದನ್ನು ಕೇಳಿದ ಸಹೋದರ ಆಘಾತಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾನು ನಿದ್ರೆ ಮಾಡುತ್ತಿದ್ದಾಗ ಅಪ್ಪನೇ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಬಾಲಕಿ ಹೇಳಿದ್ದಾಳೆ. ಹೊಸ ಮೊಬೈಲ್ ಕೊಡಿಸುತ್ತೇನೆ ಎಂದು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಅಪ್ಪನೇ ಅತ್ಯಾಚಾರ ಎಸಗಿದ್ದಾನೆ ಎಂಬ ವಿಚಾರ ಆಡಿಯೋ ಕ್ಲಿಪ್ ನಲ್ಲಿದೆ.
ಪೋನ್ ಮುಂದೆ ಬಚ್ಚೆ ಬಿಚ್ಚಿ ಬೆತ್ತಲೆ ಲೈವ್ ಬಾ, ವಿದೇಶಿ ಗಂಡನ ಹುಚ್ಚಾಟ!
ಈ ಆಡಿಯೋ ವೈರಲ್ ಆಗಿ ಸಹೋದರನ ಕಿವಿ ತಲುಪಿದೆ. ನೊಂದ ಸಹೋದರ ಕಾಲುವೆಗೆ ಹಾರಿದ್ದಾನೆ. ಘಟನೆಯ ದಿನ, ತಾಯಿ ಮಗಳ ಜತೆ ಮಗನನ್ನು ಕರೆದುಕೊಂಡು ಹೋಗಿ ಎಂದು ಹೇಳಿದ್ದಳು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಇನ್ನೊಂದು ಕಡೆ ಕರೆ ಕೇಳಿಸಿಕೊಂಡಿದ್ದಾಳೆ ಎಂಬ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆಕೆ ಸಂತ್ರಸ್ತೆ ತನ್ನ ಅಜ್ಜಿ ಜತೆ ಮಿದ್ರಿಸುತ್ತಾಳೆ ಎಂದು ಹೇಳಿಕೆ ನೀಡಿದ್ದಾಳೆ. ಒಂದಕ್ಕೊಂದು ತಾಳೆಯಾಗದೇ ಇರುವುದರಿಂದ ಪೊಲೀಸರಿಗೆ ಪ್ರಕರಣ ದೊಡ್ಡ ತಲೆನೋವಾಗಿದೆ.