ಬಾಳೆ ಹಣ್ಣಿನ ದುಡ್ಡಿನ ವಿಷಯಕ್ಕೆ ಟಿಕ್ಕಿಗೆ ಹಲ್ಲೆ: ದರೋಡೆ ಮಾಡಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

Published : Aug 28, 2023, 07:02 AM IST
ಬಾಳೆ ಹಣ್ಣಿನ ದುಡ್ಡಿನ ವಿಷಯಕ್ಕೆ ಟಿಕ್ಕಿಗೆ ಹಲ್ಲೆ: ದರೋಡೆ ಮಾಡಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ಸಾರಾಂಶ

ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಸಾಫ್ಟ್‌ವೇರ್‌ ಎಂಜಿನಿಯರ್‌ ಜತೆಗೆ ಜಗಳ ತೆಗೆದು ಹಲ್ಲೆಗೈದು ದರೋಡೆ ಮಾಡಿದ್ದ ಏಳು ಮಂದಿ ಆರೋಪಿಗಳನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಆ.28): ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಸಾಫ್ಟ್‌ವೇರ್‌ ಎಂಜಿನಿಯರ್‌ ಜತೆಗೆ ಜಗಳ ತೆಗೆದು ಹಲ್ಲೆಗೈದು ದರೋಡೆ ಮಾಡಿದ್ದ ಏಳು ಮಂದಿ ಆರೋಪಿಗಳನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಡುಬೀಸನಹಳ್ಳಿಯ ರೂಪೇಶ್‌, ಪ್ರಶಾಂತ್‌, ಅಭಿ, ಪುನೀತ್‌, ಪಣತ್ತೂರಿನ ನವೀನ್‌, ಮೋಹನ್‌, ಸುದರ್ಶನ್‌ ಬಂಧಿತರು. ಆರೋಪಿಗಳು ಆ.20ರಂದು ರಾತ್ರಿ 10.30ರ ಸುಮಾರಿಗೆ ಕಾಡುಬೀಸನಹಳ್ಳಿಯ ಕ್ರೋಮಾ ರಸ್ತೆಯ ಚಿಕ್ಕ ಅಂಗಡಿ ಬಳಿ ಆಂಧ್ರಪ್ರದೇಶ ಮೂಲದ ಟೆಕ್ಕಿ ಮಹೇಶ್‌(24) ಎಂಬಾತನ ಜತೆಗೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಹಲ್ಲೆ ನಡೆಸಿ ಮೂರು ಮೊಬೈಲ್‌ ಹಾಗೂ ದ್ವಿಚಕ್ರ ವಾಹನ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ: ಆಂಧ್ರಪ್ರದೇಶ ಮೂಲದ ಮಹೇಶ್‌ ನಗರದ ವೈಟ್‌ಫೀಲ್ಡ್‌ನ ಐಟಿಪಿಎಲ್‌ನಲ್ಲಿ ಇರುವ ಸಾಫ್‌್ಟವೇರ್‌ ಕಂಪನಿಯೊಂದರ ಉದ್ಯೋಗಿಯಾಗಿದ್ದು, ವರ್ತೂರಿನ ಮಧುರನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಆ.8ರಂದು ಕಂಪನಿಗೆ ರಜೆ ಇದ್ದ ಕಾರಣ ಸ್ನೇಹಿತರಾದ ಗಣೇಶ್‌, ಹೇಮಂತ, ವೆಂಕಟೇಶ್‌, ತರುಣ್‌ ಜತೆಗೆ ಮಹೇಶ್‌ ಮೂರು ದ್ವಿಚಕ್ರ ವಾಹನದಲ್ಲಿ ಮೆಜೆಸ್ಟಿಕ್‌ನ ಮಂಡಿ ಹೋಟೆಲ್‌ಗೆ ಬಂದು ಊಟ ಮಾಡಿ ರಾತ್ರಿ 10.30ರ ಸುಮಾರಿಗೆ ಮನೆಗೆ ವಾಪಾಸಾಗುತ್ತಿದ್ದರು. ಮಾರ್ಗ ಮಧ್ಯೆ ಕಾಡುಬೀಸನಹಳ್ಳಿಯ ಕ್ರೋಮಾ ರಸ್ತೆಯ ಪೆಟ್ಟಿಅಂಗಡಿಯಲ್ಲಿ ಬಾಳೆ ಹಣ್ಣು ತಿನ್ನಲು ತೆರಳಿದ್ದರು. ಈ ವೇಳೆ ಆರೋಪಿ ರೂಪೇಶ್‌, ಅಂಗಡಿ ಮಾಲಿಕನ ಜತೆಗೆ ಜಗಳ ಮಾಡುತ್ತಿದ್ದ. ಈ ನಡುವೆ ಮಹೇಶ್‌, ಬಾಳೆ ಹಣ್ಣು ತಿಂದು ಬಳಿಕ ಎಷ್ಟುದುಡ್ಡು ಕೊಡಬೇಕು ಎಂದು ಅಂಗಡಿ ಮಾಲಿಕನನ್ನು ಕೇಳಿದ್ದಾರೆ.

ಸೌಜನ್ಯ ಕೇಸ್‌ ಮರುತನಿಖೆಗಾಗಿ ವೀರೇಂದ್ರ ಹೆಗ್ಗಡೆ ಕುಟುಂಬ ಹೈಕೋರ್ಟ್‌ಗೆ

ಕ್ಷುಲ್ಲಕ ಕಾರಣಕ್ಕೆ ಜಗಳ: ಇಷ್ಟಕ್ಕೆ ಕೋಪಗೊಂಡ ರೂಪೇಶ್‌, ‘ನಾವಿಬ್ಬರು ಮಾತನಾಡುವಾಗ ನೀನು ಮಧ್ಯಪ್ರವೇಶಿಸಿ ಡಿಸ್ಟರ್ಬ್‌ ಮಾಡುವೆಯಾ’ ಎಂದು ಮಹೇಶ್‌ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಪಕ್ಕದ ಸ್ಮಶಾನದಲ್ಲಿ ಸ್ನೇಹಿತನೊಬ್ಬನ ಬತ್‌ರ್‍ ಡೇ ಪಾರ್ಟಿ ಮಾಡುತ್ತಿದ್ದ ಇತರೆ ಆರೋಪಿಗಳನ್ನು ಅಲ್ಲಿಗೆ ಕರೆಸಿಕೊಂಡಿದ್ದಾನೆ. ಈ ವೇಳೆ ಆರೋಪಿಗಳು ಮಹೇಶ್‌ ಹಾಗೂ ಆತನ ಸ್ನೇಹಿತರಾದ ಗಣೇಶ್‌, ಹೇಮಂತ, ವೆಂಕಟೇಶ್‌ ಮತ್ತು ತರುಣ್‌ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಅಷ್ಟರಲ್ಲಿ ಮಹೇಶ್‌ ಬಿಟ್ಟು ಉಳಿದವರು ತಮ್ಮ ದ್ವಿಚಕ್ರ ವಾಹನಗಳಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದರು.

2 ಮೊಬೈಲ್‌, ಬೈಕ್‌ ಕಸಿದು ಪರಾರಿ: ಈ ವೇಳೆ ಮಹೇಶ್‌ನನ್ನು ಹಿಡಿದುಕೊಂಡ ಆರೋಪಿಗಳು ದ್ವಿಚಕ್ರ ವಾಹನ ಸಹಿತ ಸ್ಮಶಾನಕ್ಕೆ ಕರೆದೊಯ್ದಿದ್ದರು. ಅಲ್ಲಿ ‘ಓಡಿ ಹೋಗಿರುವ ಸ್ನೇಹಿತರನ್ನು ಕರೆಯಿಸು’ ಎಂದು ಬಿಯರ್‌ ಬಾಟಲಿಯಿಂದ ಮಹೇಶ್‌ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ‘ತರುಣ್‌ ಮನೆ ತೋರಿಸು’ ಎಂದು ಮಹೇಶ್‌ನನ್ನು ಆತನ ಮನೆ ಬಳಿ ಕರೆದೊಯ್ದಿದ್ದಾರೆ. ಆ ಸಮಯದಲ್ಲಿ ತರುಣ್‌ ಮನೆಯಲ್ಲಿ ಇರಲಿಲ್ಲ. ಬಳಿಕ ಆರೋಪಿಗಳು ಮಹೇಶ್‌ನನ್ನು ಹಲವೆಡೆ ಸುತ್ತಾಡಿಸಿ ಮಧ್ಯರಾತ್ರಿ 1.30ರ ಸುಮಾರಿಗೆ ಗುಂಜೂರು ರಸ್ತೆಗೆ ಕರೆದೊಯ್ದು ಹಲ್ಲೆ ನಡೆಸಿ, ಮೂರು ಮೊಬೈಲ್‌ಗಳು ಹಾಗೂ ದ್ವಿಚಕ್ರ ವಾಹನ ಕಿತ್ತುಕೊಂಡು ಪರಾರಿಯಾಗಿದ್ದರು. ಬಳಿಕ ಮಹೇಶ್‌ ಮನೆಗೆ ಬಂದು ಸ್ನೇಹಿತರೊಂದಿಗೆ ಠಾಣೆಗೆ ಬಂದು ದೂರು ನೀಡಿದ್ದರು.

ಮುನೇನಕೊಪ್ಪ, ಚಿಕ್ಕನಗೌಡ್ರ ಕಾಂಗ್ರೆಸ್‌ಗೆ ಬರ್ತಾರೆ: ಸಚಿವ ಸಂತೋಷ್‌ ಲಾಡ್‌

ಸ್ಮಶಾನದಲ್ಲಿ ಬರ್ತ್‌ಡೇ ಪಾರ್ಟಿ!: ಆರೋಪಿಗಳು ಈ ಹಿಂದೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಅಂದು ರಾತ್ರಿ ಸ್ಮಶಾನದಲ್ಲಿ ಸ್ನೇಹಿತನೊಬ್ಬನ ಬರ್ತ್‌ಡೇ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಮಹೇಶ್‌ ಮೇಲೆ ಹಲ್ಲೆ ಮಾಡಿದ್ದರು. ಮುಂದಿನ ದಿನಗಳಲ್ಲಿ ಆರೋಪಿಗಳ ವಿರುದ್ಧ ರೌಡಿಪಟ್ಟಿತೆರೆಯುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ