ಕೊಡಗು ಕಾರ್ಮಿಕನ ಮೇಲೆ ಕಾಡಾನೆ ದಾಳಿ, ಮಂಗಳೂರಿನಲ್ಲಿ ರೈಲು ಡಿಕ್ಕಿಯಾಗಿ 17 ಜಾನುವಾರು ಬಲಿ!

By Gowthami KFirst Published May 15, 2023, 1:04 PM IST
Highlights

ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಕೊಡಗಿನ ವಿರಾಜಪೇಟೆಯಲ್ಲಿ ನಡೆದಿದೆ. ಇನ್ನೊಂದೆಡೆ ಮಂಗಳೂರಿನಲ್ಲಿ ರೈಲು ಡಿಕ್ಕಿಯಾಗಿ 17 ಕ್ಕೂ ಹೆಚ್ಚು ಜಾನುವಾರು ಬಲಿಯಾಗಿದೆ.

ಕೊಡಗು (ಮೇ.15): ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಕೊಡಗಿನ ವಿರಾಜಪೇಟೆಯಲ್ಲಿ ನಡೆದಿದೆ. ಘಟನೆಯಲ್ಲಿ  ಕಾರ್ಮಿಕ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಗಂಭೀರ ಗಾಯಗೊಂಡ ಕಾರ್ಮಿಕನನ್ನು ಮಾಧು ಎಂದು ಗುರುತಿಸಲಾಗಿದೆ. ವಿರಾಜಪೇಟೆ ತಾಲೂಕಿನ ಕಾರೆಕಾಡು ಎಂಬಲ್ಲಿ ರಾತ್ರಿ  ಈ ಘಟನೆ ನಡೆದಿದ್ದು ಮಾಧು ತನ್ನ ಪತ್ನಿ ಮೀನಾ ಜೊತೆ ಅಂಗಡಿಯಿಂದ ಆಗಮಿಸುತ್ತಿದ್ದಾಗ ಆನೆ ದಾಳಿ ಮಾಡಿದೆ. ಕಾಫಿ ತೋಟದಲ್ಲಿದ್ದ ಕಾಡಾನೆಯಿಂದ ದಾಳಿಯಾಗಿದ್ದು, ಕಾಡಾನೆಯ ದಿಢೀರ್ ದಾಳಿಯಿಂದ  ಮಾಧು ಪತ್ನಿ ಮೀನಾ  ತಪ್ಪಿಸಿಕೊಂಡಳು. ಗಂಭೀರ ಗಾಯಗೊಂಡ ಮಾಧುವನ್ನು  ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ದೇವಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ.

ರೈಲು ಡಿಕ್ಕಿಯಾಗಿ 17 ಕ್ಕೂ ಹೆಚ್ಚು ಜಾನುವಾರು ಬಲಿ:
ಮಂಗಳೂರು: ರೈಲು ಡಿಕ್ಕಿಯಾಗಿ 17 ಕ್ಕೂ ಹೆಚ್ಚು ಜಾನುವಾರುಗಳ ದಾರುಣ ಸಾವು ಕಂಡಿರುವ ಘಟನೆ ಮಂಗಳೂರು ಹೊರವಲಯದ ಜೋಕಟ್ಟೆ ಅಂಗರಗುಂಡಿ ಎಂಬಲ್ಲಿ ನಡೆದಿದೆ. ತಡರಾತ್ರಿ ಗೂಡ್ಸ್ ರೈಲು ಹೊಡೆದ ಪರಿಣಾಮ 15 ಕ್ಕೂ ಹೆಚ್ಚು ಜಾನುವಾರುಗಳ ಸಾವನ್ನಪ್ಪಿವೆ. ಗೂಡ್ಸ್ ರೈಲು ಕಂಕನಾಡಿ ಕಡೆಯಿಂದ ಎಂಸಿಎಫ್ ಕಡೆ ಹೋಗುತ್ತಿತ್ತು ಎಂದು ತಿಳಿದುಬಂದಿದೆ.

ಗುರುದ್ವಾರದ ಬಳಿ ಶರಾಬು ಸೇವಿಸುತ್ತಿದ್ದ ಮಹಿಳೆಗೆ ಗುಂಡಿಕ್ಕಿ ಹತ್ಯೆ

ರೈಲು ಬರುವಾಗ ಭಯದಿಂದ ಜಾನುವಾರುಗಳು ರೈಲೆ ಬ್ರಿಡ್ಜ್ ಮೇಲೆ ಓಡಿದೆ. ಹೀಗಾಗಿ ಈ ದುರಂತ ಸಂಭವಿಸಿದೆ. ಕದ್ರಿ ಅಗ್ನಿಶಾಮಕ ದಳದವರಿಂದ ಮೂರು ಎಮ್ಮೆಗಳನ್ನು ರಕ್ಷಣೆ ಮಾಡಲಾಗಿದೆ. ಸ್ಥಳಕ್ಕೆ ರೈಲ್ವೆ ಹಾಗು ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ್ದಾರೆ. 

ಜಿದ್ದಾಜಿದ್ದಿನ ಕಣದಲ್ಲಿ ರಾಜಕೀಯ ದ್ವೇಷ, ಶರತ್ ಬಚ್ಚೇಗೌಡ ಗೆಲುವಿನ ಸಂಭ್ರಮಕ್ಕೆ ಓರ್ವನ ಹತ್ಯೆ

click me!