ಮಂಗಳೂರು: ಹಣ ದ್ವಿಗುಣಗೊಳಿಸುವ ಆ್ಯಪ್‌ನಿಂದ 21 ಲಕ್ಷ ರೂ. ಕಳೆದುಕೊಂಡ ಮಹಿಳೆ ಆತ್ಮಹತ್ಯೆಗೆ ಶರಣು!

By Sathish Kumar KH  |  First Published Dec 24, 2023, 5:36 PM IST

ಹಣ ದ್ವಿಗುಣಗೊಳಿಸುವ ಆ್ಯಪ್‌ಗೆ 21 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿ ವಂಚನೆಗೊಳಗಾಗಿ ಬಂಟ್ವಾಳದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


ದಕ್ಷಿಣ ಕನ್ನಡ (ಡಿ.24): ಹಣ ದ್ವಿಗುಣಗೊಳಿಸುವ ಆ್ಯಪ್‌ಗೆ 21 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿ ವಂಚನೆಗೊಳಗಾಗಿ ಬಂಟ್ವಾಳದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಬರುವ ಸಂದೇಶಗಳನ್ನು ನಂಬಿಕೊಂಡು ಮೋಸ ಹೋಗುವವರ ಸಂಖ್ಯೆ ತೀವ್ರ ಹೆಚ್ಚಾಗುತ್ತಿದೆ. ಸೈಬರ್ ಕ್ರೈಂ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಎಚ್ಚೆತ್ತುಕೊಳ್ಳದ ಜನರು ಮೋಸಕ್ಕೆ ಸಿಲುಕಿ ಹಣ ಕಳೆದುಕೊಳ್ಳುವ ಜೊತೆಗೆ ಕೆಲವರು ತಮ್ಮ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಅದೇ ರೀತಿ ಇಲ್ಲೊಬ್ಬ ಮಹಿಳೆಯೂ ಕೂಡ ಹಣ ದ್ವಿಗುಣಗೊಳಿಸುವ ಆ್ಯಪ್‌ಗೆ ಹಣ ಹಾಕಿ ವಂಚನೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಪುಚ್ಚಮೊಗರು ಎಂಬಲ್ಲಿ ಘಟನೆ ನಡೆದಿದೆ. ಆ್ಯಪ್‌ವೊಂದಕ್ಕೆ ಬರೋಬ್ಬರಿ 21 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ ಮಹಿಳೆ ತಾನು ಮೋಸ ಹೋಗಿರುವುದಾಗಿ ತಿಳಿದಾಗ, ಅಷ್ಟೊಂದು ಹಣವನ್ನು ಪುನಃ ಸಂಪಾದನೆ ಮಾಡಲು ಸಾಧ್ಯವಿಲ್ಲವೆಂದು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಲೆ ಎಂದು ತಿಳಿದುಬಂದಿದೆ.

Tap to resize

Latest Videos

ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಮನುವಾದಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯನ್ನು ತಿರಸ್ಕರಿಸಿ: ನಟ ಅಹಿಂಸಾ ಚೇತನ್!

ಮೃತಳನ್ನು ಬಂಟ್ವಾಳದ ಕುಕ್ಕಿಪಾಡಿ ನಿವಾಸಿ ವೀಟಾ ಮರಿನಾ ಡಿಸೋಜಾ(32) ಎಂದು ಗುರುತಿಸಲಾಗಿದೆ. ಕಳೆದ ಕೆಲ ತಿಂಗಳ‌ ಹಿಂದೆ ಹಣ ದ್ವಿಗಣಗೊಳಿಸುವ ಆ್ಯಪ್ ಗೆ 21 ಲಕ್ಷ ಹಣ ಹಾಕಿದ್ದರು. ಆದ್ರೆ ಹಣ ದ್ವಿಗುಣಗೊಳ್ಳದೇ ಮೋಸ ಹೋಗಿರೋದ್ರಿಂದ ಬಂಟ್ವಾಳ ಠಾಣೆಗೆ ದೂರು ನೀಡಿದ್ದರು. ಈಗಾಗಲೇ ಮದುವೆಯಾಗಿ ಹಲವು ವರ್ಷಗಳಿಂದ ಮಕ್ಕಳಾಗದ ಕಾರಣ ಮನ ನೊಂದಿದ್ದರು. ಈಗ ತಾನು ಹೂಡಿಕೆ ಮಾಡಿದ ಹಣವನ್ನೂ ಮೋಸ ಮಾಡಿದ್ದಾರೆ. ಇದರಿಂದ ತಾವು ಬದುಕುವುದಕ್ಕಿಂತ ಸಾಯುವುದೇ ಲೇಸೆಂದು ಪುಚ್ಚಮೊಗರು ಫಲ್ಗುಣಿ‌ ನದಿಯ ಸೇತುವೆ ಮೇಲೆ‌ ಸ್ಕೂಟರ್ ನಿಲ್ಲಿಸಿ ನದಿಗೆ ಹಾರಿದ್ದಾರೆ. ಇನ್ನು ಸ್ಕೂಟರ್ ಪತ್ತೆಯಾದ ಬಳಿಕ‌ ಅಗ್ನಿಶಾಮಕ‌ದಳದ ಸಿಬ್ಬಂದಿ ನದಿಯಲ್ಲಿ ಹುಡುಕಾಟ‌ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಈ ಘಟನೆ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ನಮಗೆ ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು: ಬಿ.ಕೆ.ಹರಿಪ್ರಸಾದ್

ಆದಿ ದ್ರಾವಿಡ ಜನಾಂಗಕ್ಕೆ ಒಂದು ನಿಗಮ ಮಂಡಳಿ ಸ್ಥಾನ ಖಚಿತ:
ಮಂಗಳೂರಿನಲ್ಲಿ ನಡೆದ ರಾಜ್ಯ ಆದಿ ದ್ರಾವಿಡ ಸಮಾವೇಶದಲ್ಲಿ ಸಮುದಾಯದ ಮುಖಂಡರ ಹಕ್ಕೊತ್ತಾಯಕ್ಕೆ ಸ್ಪಂದಿಸಿದ ಗೃಹ ಸಚಿವ ಡಾ ಜಿ.ಪರಮೇಶ್ವರ್ ಅವರು, ಒಂದು ನಿಗಮ ಮಂಡಳಿಯ‌ ಅಧ್ಯಕ್ಷ ಸ್ಥಾನ ಆದಿ ದ್ರಾವಿಡ ಸಮುದಾಯಕ್ಕೆ ಕೊಡ್ತೀವಿ. ನೀವು ನಿಗಮ ಮಂಡಳಿಗೆ ಒಂದು ಅಧ್ಯಕ್ಷನನ್ನು ಕೇಳಿದ್ದೀರಿ. ನನ್ನನ್ನು ಮುಖ್ಯಮಂತ್ರಿಗಳು ಏನು ತಿಳಿದುಕೊಂಡರು ಪರ್ವಾಗಿಲ್ಲ. ನಿಗಮ ಮಂಡಳಿಗೆ ನಿಮ್ಮ ಸಮುದಾಯದ ಒಬ್ಬ ಅಧ್ಯಕ್ಷನನ್ನು ಖಂಡಿತವಾಗಿಯು ಮಾಡಿಸ್ತೇವೆ. ಯಾವುದು ಅಂತಾ ಗೊತ್ತಿಲ್ಲ, ಅದನ್ನು ಈಗ ಹೇಳಲ್ಲ. ಆದ್ರೆ ಒಂದು ನಿಗಮ ಮಂಡಳಿ ಅಧ್ಯಕ್ಷ ಈ ಆದಿ ದ್ರಾವಿಡ ಸಮುದಾಯಕ್ಕೆ ಸಿಗುತ್ತದೆ ಎಂದು ಹೇಳಿದರು.

click me!