ಜನ್ಮ ನೀಡಿದ ತಾಯಿ ಮೇಲೆಯೇ ಮಗ ಅತ್ಯಾಚಾರ ಮಾಡಲು ಮುಂದಾಗಿದ್ದು, ಇದನ್ನು ವಿರೋಧಿಸಿದ ತಾಯಿಯನ್ನು ಪಾಪಿ ಪುತ್ರನೇ ಕೊಂದು ಹಾಕಿದ್ದಾನೆ.
ಮಂಗಳೂರು (ಅ.31): ಇಡೀ ಮನುಷ್ಯ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ತನಗೆ ಜನ್ಮ ನೀಡಿದ ತಾಯಿ ಮೇಲೆಯೇ ಮಗ ಅತ್ಯಾಚಾರ ಮಾಡಲು ಮುಂದಾಗಿದ್ದು, ಇದನ್ನು ವಿರೋಧಿಸಿದ ತಾಯಿಯನ್ನು ಪಾಪಿ ಪುತ್ರನೇ ಕೊಂದು ಹಾಕಿದ್ದಾನೆ.
ಹೌದು, ಮಂಗಳೂರಿನಲ್ಲೊಂದು ಅತೀ ವಿಕೃತ ಘಟನೆ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಕನ್ನಡ ಜಿಲ್ಲೆ ಮುಲ್ಕಿ ತಾಲೂಕಿನ ಕೊಂಡೇಲಾ ಗ್ರಾಮದಲ್ಲಿ ಘಟನೆ ನಡೆದಿದೆ. ದುರ್ಗಾನಗರ ನಿವಾಸಿ ರತ್ನಾಶೆಟ್ಟಿ (62) ಎನ್ನುವ ಮಹಿಳೆಯನ್ನು ಆಕೆಯ ಮಗನೇ ಕತ್ತು ಹಿಸುಕಿ ಕೊಂದು ಹಾಕಿದ್ದಾನೆ. ತಾಯಿಯನ್ನು ಕೊಲೆ ಮಾಡಿದ ಮಗ, ನಂತರ ಮನೆಗೆ ಬೀಗ ಹಾಕಿ ಅಲ್ಲಿಂದ ಪರಾರಿ ಆಗಿದ್ದಾನೆ. ತಾಯಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಆರೋಪಿ ಪಾಪಿ ಪುತ್ರ ರವಿರಾಜ್ ಶೆಟ್ಟಿ ಆಗಿದ್ದಾನೆ.
14 ವರ್ಷದ ಬಾಲಕನ ಬರ್ಬರ ಹತ್ಯೆ: ಸ್ನೇಹಿತೆಯ ಬಗ್ಗೆ ಮಾತನ್ನಾಡಿದಕ್ಕೆ ಕೊಲೆ..!
ಈ ಘಟನೆ ಅಕ್ಟೋಬರ್ 26 ರ ರಾತ್ರಿ ನಡೆದಿದೆ. ಆದರೆ, ಘಟನೆ ನಡೆದು ಮೂರು ದಿನಗಳ ಬಳಿಕ ಬೆಳಕಿಗೆ ಬಂದಿದೆ. ಮನೆಯ ಕಿಟಕಿಯ ಬಳಿ ದುರ್ವಾಸನೆ ಬೀರುತ್ತಿದ್ದು, ನೊಣಗಳು ಮುತ್ತಿಕೊಂಡಿವೆ. ಈ ಬಗ್ಗೆ ಸ್ಥಳೀಯರು ಮನೆಯ ಕಿಟಕಿಗೆ ಇಣುಕಿ ನೋಡಿದಾಗ ಮಹಿಳೆ ಸತ್ತು ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆಕೆಯ ಪುತ್ರನನ್ನ ಬಜಪೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನು ಪೊಲೀಸರ ವಿಚಾರಣೆ ವೇಳೆ ತಾನು ತಾಯಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದಾಗ ಆಕೆ ಒಪ್ಪದೇ ತೀವ್ರ ವಿರೋಧ ಮಾಡಿದಳು. ಆದ್ದರಿಂದ ಆಕೆಯ ಕತ್ತು ಹಿಸುಕಿ ಹಿಡಿದಾಗ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಪಾಪಿ ಮಗ ಒಪ್ಪಿಕೊಂಡಿದ್ದಾನೆ. ಆದರೂ, ಬಜ್ಪೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.