ಐಷಾರಾಮಿ ಕಾರಿನ ತೆರಿಗೆ ವಂಚನೆ: ಮಂಗಳೂರು RTO ಅಧಿಕಾರಿಯ ಕರಾಳ ಮುಖ ಬಯಲು

Published : Jun 25, 2025, 01:18 PM ISTUpdated : Jun 25, 2025, 02:05 PM IST
Mangaluru Crime

ಸಾರಾಂಶ

ಮಂಗಳೂರು RTO ಅಧಿಕಾರಿಯೊಬ್ಬರು ಕೋಟಿ ಬೆಲೆಯ ಐಷಾರಾಮಿ ಕಾರಿಗೆ ಲಕ್ಷದ ಕಾರಿನ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಮೈಸೂರಿನಲ್ಲಿ ನಡೆದ ತಪಾಸಣೆಯಲ್ಲಿ ಈ ವಂಚನೆ ಬಯಲಾಗಿದ್ದು, ತನಿಖೆ ನಡೆಯುತ್ತಿದೆ.

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಜೂ.25): ಕೋಟಿ ಬೆಲೆಯ ಐಶಾರಾಮಿ ಕಾರಿಗೆ ಲಕ್ಷ ಮೌಲ್ಯದ ಕಾರಿನ ನೋಂದಾಣಿಯ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ಸರ್ಕಾರಿ ಅಧಿಕಾರಿಯೇ ಭಾರೀ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ. ಐಷಾರಾಮಿ ಕಾರಿನ ದಾಖಲೆ ಬದಲಿಸಿ ಭಾರೀ ತೆರಿಗೆ ವಂಚನೆ ದಂಧೆ ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನಡೆದಿದ್ದು, ಸಾರಿಗೆ ಅಧಿಕಾರಿಯೇ ಕಳ್ಳಾಟ ನಡೆಸಿರುವುದು ಬಯಲಾಗಿದೆ.

ಮಂಗಳೂರು ಸಾರಿಗೆ ಇಲಾಖೆಯ ಲಕ್ಷ ಲಕ್ಷ ತೆರಿಗೆ ವಂಚನೆಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಬಯಲು ಮಾಡಿದೆ. ಕೋಟಿ ಮೌಲ್ಯದ ಐಶಾರಾಮಿ ಕಾರಿನ ತೆರಿಗೆ ವಂಚಿಸಲು ಕಾರಿನ ದಾಖಲೆಯೇ ಮಾರ್ಪಾಡು ಮಾಡಲಾಗಿದೆ. ಮಂಗಳೂರು ಸಾರಿಗೆ ಅಧಿಕಾರಿ ಉಸ್ತುವಾರಿಯಲ್ಲೇ ನಡೆದಿದೆ ಕೋಟಿ ಬೆಲೆಯ ಕಾರಿನ ನಕಲಿ ದಾಖಲೆ ಸೃಷ್ಟಿ ಪ್ರಕರಣ ಇದಾಗಿದ್ದು, ಮರ್ಸಿಡಿಸ್ ಬೆಂಝ್ ಕಾರಿನ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಲಕ್ಷ ಲಕ್ಷ ತೆರಿಗೆ ವಂಚನೆ ಮಾಡಲಾಗಿದೆ.

ಎರಡು ಕೋಟಿ ಬೆಲೆಯ ಕಾರನ್ನು 50 ಲಕ್ಷ ಬೆಲೆಯ ಕಾರಿನ ಮಾಡೆಲ್ ಗೆ ದಾಖಲೆ ಬದಲಿಸಿ ತೆರಿಗೆ ವಂಚಿಸಲು ಮಂಗಳೂರು ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್ ಸಾಥ್ ನೀಡಿದ ಆರೋಪ ಕೇಳಿ ಬಂದಿದೆ. ಮೈಸೂರಿನಲ್ಲಿ ಐಶಾರಾಮಿ ಕಾರುಗಳ ತಪಾಸಣೆ ವೇಳೆ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ಮಂಗಳೂರು ಸಾರಿಗೆ ಇಲಾಖೆಯ ತೆರಿಗೆ ವಂಚನೆ ದಂಧೆಯ ಕರಾಳ ಕೃತ್ಯ ಬಯಲಾಗಿದ್ದು, ಕೋಟಿ ಬೆಲೆಯ ಐಶಾರಾಮಿ ಕಾರಿಗೆ ಲಕ್ಷ ಬೆಲೆಯ ಕಾರಿನ ನೋಂದಾಣಿ ದಾಖಲೆ ಮಾಡಲಾಗಿದೆ.

Mercedes-Benz AMG G 63 ಕಾರಿಗೆ Mercedes-Benz GLA 200 CDA ಕಾರಿನ ನಕಲಿ ದಾಖಲೆ ಸೃಷ್ಟಿಸಲಾಗಿದ್ದು, ಕಾರಿನ ಮೌಲ್ಯ ಕಡಿಮೆ ಮಾಡಿ ಭಾರೀ ತೆರಿಗೆ ವಂಚಿಸೋ ಮೆಗಾ ದಂಧೆ ಇದಾಗಿದೆ. ಪ್ರಸ್ತುತ 2 ರಿಂದ 2.50 ಕೋಟಿ ಮೌಲ್ಯ ಹೊಂದಿರುವ Mercedes-Benz AMG G 63 ಕಾರಿಗೆ ಸುಮಾರು 50 ಲಕ್ಷದವರೆಗೆ ಮೌಲ್ಯ ಹೊಂದಿರುವ Mercedes-Benz GLA 200 CDA ಕಾರಿನ ದಾಖಲೆ ಸೃಷ್ಟಿಸಲಾಗಿದೆ. ಕೋಟಿ ಮೌಲ್ಯದ ಕಾರಿಗೆ ಲಕ್ಷ ಮೌಲ್ಯದ ಕಾರಿನ ದಾಖಲೆ ಸೃಷ್ಟಿಸಿ ಭಾರೀ ದಂಧೆ ನಡೆಸಿರೋ ಅರೋಪ ವ್ಯಕ್ತವಾಗಿದೆ. 2.50 ಕೋಟಿ ಮೌಲ್ಯದ ಕಾರಿಗೆ 50 ಲಕ್ಷದವರೆಗೆ ತೆರಿಗೆ ಕಟ್ಟಬೇಕು. ಆದರೆ 50 ಲಕ್ಷ ಮೌಲ್ಯದ ಕಾರಿಗೆ 5-6 ಲಕ್ಷ ತೆರಿಗೆ ಕಟ್ಟಿದರೆ ಸಾಕು. ಇದೇ ಕಾರಣಕ್ಕೆ ಭಾರೀ ತೆರಿಗೆ ಉಳಿಸಲು ಕಾರಿನ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಿರುವ ದೂರು ಇದೆ.

ದಂಧೆಗೆ ಕಾರಣವಾದ ಕೋಟಿ ಬೆಲೆಯ ಕಾರಿನ ಹಿಸ್ಟರಿಯೇ ರೋಚಕ!

ಕೋಟಿ ಬೆಲೆಯ ಬೆಂಝ್ ಕಾರು ಲಕ್ಷ ಮೌಲ್ಯದ ಬೆಂಝ್ ಕಾರಿನ ಮಾಡೆಲ್ ಹೆಸರಿನಲ್ಲಿ ನೋಂದಾಣಿ ಮಾಡಲಾಗಿದೆ. ಮಂಗಳೂರು ಸಾರಿಗೆ ಅಧಿಕಾರಿ ಶಾಮೀಲಾತಿಯಲ್ಲೇ ಮಹಾ ಭ್ರಷ್ಟಾಚಾರ ನಡೆದಿದ್ದು, ಒರಿಜಿನಲ್ ಚಾಸಿಸ್, ಇಂಜಿನ್ ನಂಬರ್ ಕಾರನ್ನು ‌ನಕಲಿ ಮಾಡೆಲ್ ನಲ್ಲಿ ನೋಂದಾಣಿ ಮಾಡಿದ್ದಾರೆ. ಶೋ ರೂಂನಲ್ಲಿ ಖರೀದಿಸಿದ ಕಾರೇ ಬೇರೆಯಾಗಿದ್ದು, ನೋಂದಾಣಿಯಾಗೋ ಕಾರಿನ ಮಾಡೆಲ್ ಬೇರೆಯಾಗಿದೆ. ‌2017ರಲ್ಲಿ ಮಂಗಳೂರಿನ ನಿಹಾಲ್ ಅಹ್ಮದ್ ಎಂಬಾತ ಬೆಂಗಳೂರಿನಲ್ಲಿ ಖರೀದಿಸಿದ್ದ Mercedes-Benz AMG G 63 ಕಾರನ್ನು KA51/TR005155/2016-17 ಟೆಂಪಾರೆರಿ ನೋಂದಾಣಿಯಾಗಿತ್ತು. ಆದರೆ 2017ರಿಂದ 2025ರವರೆಗೆ ಕಾರು ನೋಂದಾಣಿ ಮಾಡಿಸದೇ ಚಲಾಯಿಸಲಾಗಿದೆ. ಆ ಬಳಿಕ 2025ರಲ್ಲಿ ಮಂಗಳೂರಿನ ನೀರಜ್ ಕುಮಾರ್ ಶರ್ಮಾಗೆ ಕಾರು ಮಾರಾಟ ಮಾಡಲಾಗಿದ್ದು, ಈ ವೇಳೆ ನೇರವಾಗಿ ನೀರಜ್ ಕುಮಾರ್ ಹೆಸರಿನಲ್ಲೇ ಕಾರು ನೋಂದಾಣಿ ಪ್ರಕ್ರಿಯೆ ನಡೆದಿದೆ. ಕಾರು ನೋಂದಾಣಿಗೂ ಮುನ್ನ ಮಾರ್ಪಾಡು ಪ್ರಕ್ರಿಯೆ ನಡೆಸಿರೋ ಮಂಗಳೂರು ಅರ್ ಟಿಓ ಅಧಿಕಾರಿ, Mercedes-Benz AMG G 63 ಕಾರಿಗೆ Mercedes-Benz GLA 200 CDA ಕಾರಿನ ದಾಖಲೆಗೆ ಮಾರ್ಪಾಡು ಮಾಡಿದ್ದಾರೆ.

ತಾತ್ಕಾಲಿಕ ನೋಂದಾಣಿ ದಾಖಲೆಯಲ್ಲಿ ನೀರಜ್ ಶರ್ಮಾ ಹೆಸರಿಗೆ ದಾಖಲೆ ಮಾರ್ಪಾಡು ಮಾಡಲಾಗಿದೆ. 2025ರ ಜನವರಿಯಲ್ಲಿ ದಾಖಲೆ ಬದಲಿಸಿದ್ದ ಮಂಗಳೂರು ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್, WDB4632722X261301 ಚಾಸಿಸ್ ನಂಬರ್‌ ನ Benz AMG G 63 ಕಾರಿಗೆ ಅದೇ ಚಾಸಿಸ್ ನಂಬರ್ ನಲ್ಲಿ Benz GLA 200 CDA ಕಾರಿನ ನಕಲಿ ದಾಖಲೆ ಸೃಷ್ಟಿಸಿದ್ದಾರೆ. 15798460107755 ಇಂಜಿನ್ ನಂಬರ್ ಕೂಡ ಸರಿಯಾಗಿದ್ದರೂ ಕಾರಿನ ಮಾಡೆಲ್ ಮಾರ್ಪಡು ಮಾಡಲಾಗಿದೆ.

ಮಂಗಳೂರು ಆರ್ ಟಿಓದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಉಡುಪಿ ಆರ್ಟಿಓದಲ್ಲಿ ಕಾರು ನೋಂದಾಣಿ ಮಾಡಲಾಗಿದೆ. ಲಕ್ಷಾಂತರ ರೂ. ತೆರಿಗೆ ವಂಚಿಸಲು ಕಾರಿನ ಮಾಡೆಲ್ ಬದಲಿಸಿ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಸದ್ಯ ಮೈಸೂರಿನಲ್ಲಿ ತಪಾಸಣೆ ವೇಳೆ ಕಾರಿನ ನಕಲಿ ದಾಖಲೆ ಮಾಹಿತಿ ಬಹಿರಂಗವಾಗಿದ್ದು, ಸದ್ಯ ಕಾರು ಸೀಝ್ ಮಾಡಿ ಆರ್ ಸಿ ಬ್ಲಾಕ್ ಲಿಸ್ಟ್ ಮಾಡಿರೋ ಸಾರಿಗೆ ಇಲಾಖೆ, ಶಿವಮೊಗ್ಗ ವಿಭಾಗದ ಸಾರಿಗೆ ಇಲಾಖೆ ಜಂಟಿ ಆಯುಕ್ತರ ಆದೇಶದಂತೆ ತನಿಖೆ ನಡೆಸ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್‌ಗೆ ಹಾರಿ ವ್ಯಕ್ತಿ ಆತ್ಮ೧ಹತ್ಯೆ; ನೇರಳೆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ವ್ಯತ್ಯಯ!
ರೇಣುಕಾಸ್ವಾಮಿ ತಂದೆ-ತಾಯಿಗೆ ಸಮನ್ಸ್, ದರ್ಶನ್‌ಗೆ ಜೈಲಲ್ಲೊಂದು ಶಾಕ್, ಕೋರ್ಟ್‌ನಲ್ಲೊಂದು ಆಘಾತ!