Miscreants Arrested: ನಾಗ ದೇವರ ಮೂರ್ತಿ ಧ್ವಂಸಗೊಳಿಸಿದವರಿಗೆ ಸಂಕಷ್ಟ, ಪೊಲೀಸ್ ತನಿಖೆ ವೇಳೆ ಬಹಿರಂಗ

Published : Nov 27, 2021, 04:27 PM ISTUpdated : Nov 27, 2021, 05:10 PM IST
Miscreants Arrested: ನಾಗ ದೇವರ ಮೂರ್ತಿ ಧ್ವಂಸಗೊಳಿಸಿದವರಿಗೆ ಸಂಕಷ್ಟ, ಪೊಲೀಸ್ ತನಿಖೆ ವೇಳೆ ಬಹಿರಂಗ

ಸಾರಾಂಶ

* ಮಂಗಳೂರಿನಲ್ಲಿ ನಾಗ ದೇವರ ಮೂರ್ತಿಗಳ ಧ್ವಂಸ ಪ್ರಕರಣ * ನಾಗ ದೇವರ ಮೂರ್ತಿಗಳ ಧ್ವಂಸಗೊಳಿಸಿದವರಿಗೆ ಸಂಕಷ್ಟ * ಪೊಲೀಸ್ ತನಿಖೆ ವೇಳೆ ಬಹಿರಂಗ

ಮಂಗಳೂರು, (ನ.27): ಇಲ್ಲಿನ ನಾಗ ದೇವರ ಮೂರ್ತಿಗಳ ಧ್ವಂಸ ಪ್ರಕರಣವನ್ನು ಪೊಲೀಸರು (ಫೊಲಿಚೆ) ಭೇದಿಸಿದ್ದಾರೆ. 

ಮಂಗಳೂರಿನ(ಂಅನಗಾಲುರು) ಉರ್ವಾದ ಕೋಡಿಕಲ್, ಕಾವೂರು, ಪಣಂಬೂರು ಎಂಬಲ್ಲಿ ನಾಗ ದೇವರ ಮೂರ್ತಿಗಳನ್ನು ಭಗ್ನಗೊಳಿಸಿದ್ದರು. ಪೊಲೀಸರ ಮಹತ್ವದ ಕಾರ್ಯಾಚರಣೆ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Asianet Suvarna FIR: 8 ವರ್ಷದ ಕೂಸು..ನಾಲ್ವರು ರಕ್ಕಸರು...ಮನಕಲಕುವ ಕಥೆ

 ಕಾವೂರು ನಿವಾಸಿ ಸಫ್ವಾನ್, ಮೊಹಮ್ಮದ್ ಸುಹೈಲ್, ಪ್ರವೀಣ್ ಅನಿಲ್ ಮೊಂತೆರೊ, ನಿಖಿಲೇಶ್, ಸುರತ್ಕಲ್ನ ಜಯಂತ್ ಕುಮಾರ್, ಬಂಟ್ವಾಳದ ಪ್ರತೀಕ್, ಕೂಳೂರಿನ ಮಂಜುನಾಥ್, ಹಾಸನ ನಿವಾಸಿ ನೌಷಾದ್ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳು ನಾಗ ದೇವರ ಮೂರ್ತಿ(Idols) ಭಗ್ನಗೊಳಿಸಿ ಗಲಭೆ ಸೃಷ್ಟಿಸಿ ಶಾಂತಿ ಕದಡಲು ಸಂಚು ರೂಪಿಸಿದ್ದರು. ಅಲ್ಲದೇ ಸರಗಳ್ಳತನ, ದರೋಡೆ ಪ್ರಕರಣಗಳ ಹಿಂದೆ ಬಿದ್ದ ಪೊಲೀಸರ ದಿಕ್ಕು ತಪ್ಪಿಸಲು ಈ ರೀತಿ ದೇವರ ಮೂರ್ತಿ ಭಗ್ನಗೊಳಿಸಿದ್ದಾರೆ ಎಂತಲೂ ಹೇಳಲಾಗುತ್ತಿದೆ. 

ಸರಣಿ ನಾಗ ದೇವರ ಮೂರ್ತಿಗಳ ಧ್ವಂಸ ಪ್ರಕರಣಗಳು ಮಂಗಳೂರು ಪೊಲೀಸರಿಗೆ ಸವಾಲಾಗಿತ್ತು.  ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಗಾಂಜಾ ಮತ್ತಿನ ನಶೆಯಲ್ಲಿ ಕಿಡಿಗೇಡಿ ಕೃತ್ಯಗಳಲ್ಲಿ ಭಾಗಿಯಾಗಿದ್ರ ಎನ್ನಲಾಗಿದೆ.

‌ನಾಗ ದೇವರ ಕಲ್ಲು ಧ್ವಂಸಗೈದ ಆರೋಪಿಗಳಿಗೆ ಸಂಕಷ್ಟ!
ನಾಗ ದೇವರ ಕಲ್ಲು ಕಿತ್ತವರಿಗೆ ಕೈ ನಡುಕ, ಆಟೋ ರಿಕ್ಷಾ ಅಪಘಾತ ಸೇರಿ ಹಲವು ಸಂಕಷ್ಟ ಎದುರಾಗಿವೆ. ತನಿಖೆ ವೇಳೆ ಪೊಲೀಸರ ಮುಂದೆ ಆರೋಪಿಗಳು ಪಶ್ವಾತ್ತಾಪ ಪಟ್ಟಿದ್ದಾರೆ.

ಈ ಬಗ್ಗೆ  ಮಂಗಳೂರು ಉತ್ತರ  ಶಾಸಕ ಭರತ್ ಶೆಟ್ಟಿ ಪೊಲೀಸರಿಂದ ತನಿಖೆ ಬಗ್ಗೆ ಮಾಹಿತಿ ಪಡೆದುಕೊಂಡು ಬಳಿಕ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯಿಸಿದ್ದು.

ಕರಾವಳಿ ಜಿಲ್ಲೆಗಳಲ್ಲಿ ಹಲವಾರು ವರ್ಷಗಳಿಂದ ನಾಗದೇವರ ಆರಾಧನೆ ನಡೆಯುತ್ತಿದೆ. ನಾಗಬನದ ಅಪವಿತ್ರಗೊಳಿಸುವ ಕೆಲಸವನ್ನ ಯಾವ ಧರ್ಮದವರೂ ಮಾಡಲು ಹೋಗಲ್ಲ. ಆರೋಪಿಗಳ ಪೈಕಿ ಒಬ್ಬನಿಗೆ ನಾಗನ ಕಲ್ಲು ಎತ್ತಿದಾಗಲೇ ಕೈ ಕಾಲು ನಡುಗಿ ಅಲ್ಲಿಂದ ಓಡಿದ್ದಾನೆ. ಮತ್ತೊಬ್ಬ ಆರೋಪಿ ರಿಕ್ಷಾ ಚಾಲಕನಾಗಿದ್ದು, ಘಟನೆ ಬಳಿಕ ರಿಕ್ಷಾ ಪಲ್ಟಿಯಾಗಿ ಗಾಯವಾಗಿದೆ ಇನ್ನೊಬ್ಬನಿಗೆ ಮಾನಸಿಕವಾಗಿ ‌ರಾತ್ರಿ ಕನಸುಗಳಲ್ಲಿ ಕಂಡು ಮಾನಸಿಕ ಅಸಮತೋಲನವಾಗಿದೆ. ಇದನ್ನ ತನಿಖಾಧಿಕಾರಿಗಳ ಬಳಿ ಮಾತನಾಡುವ ಸಂದರ್ಭದಲ್ಲಿ ಅವರು ಹೇಳಿದ್ರು ಎಂದು ತಿಳಿಸಿದ್ದಾರೆ.

ಇನ್ನು ಇಡೀ ಕೃತ್ಯದ ಹಿಂದೆ ರಾಜಕೀಯ ಪಿತೂರಿ ಇದೆ. ಕೇವಲ ಈ ಆರೋಪಿಗಳಷ್ಟೇ ಕೃತ್ಯದಲ್ಲಿ ಇಲ್ಲ, ಇವರ ಹಿಂದೆ ಬೇರೆ ಜನರಿದ್ದಾರೆ. ರಾಜಕೀಯ ನಾಯಕರೊಬ್ಬರ ಸಂಬಂಧಿಯೂ ಇದರಲ್ಲಿ ಭಾಗಿ ಎಂಬ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ಕೋಮು ಗಲಭೆ ಸೃಷ್ಟಿಸಲು ಈ ರೀತಿ ಕೃತ್ಯಗಳನ್ನು ಮಾಡಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ