* ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದ ಘಟನೆ
* 9 ವರ್ಷಗಳಿಂದ ಪ್ರೀತಿಸಿ ಈಗ ಮದುವೆಯಾಗಲು ನಿರಾಕರಿಸಿದ ಯುವತಿ
* ಈ ಸಂಬಂಧ ಗಂಡಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಹಾಸನ(ನ.27): ಪ್ರೀತಿಸಿದ(Love) ಯುವತಿ ಕೈಕೊಟ್ಟ ಹಿನ್ನೆಲೆಯಲ್ಲಿ ಮನನೊಂದ ಪ್ರೇಮಿಯೊಬ್ಬ ವಿಷ(Poison) ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನ(Hassan) ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜೀವಿತ್(29) ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಕಳೆದ 9 ವರ್ಷಗಳಿಂದ ಪ್ರೀತಿಸಿ ಈಗ ಮದುವೆಯಾಗಲು ನಿರಾಕರಿಸುತ್ತಿದ್ದಾಳೆ ಎಂದು ಯುವತಿ ವಿರುದ್ಧ ಜೀವಿತ್ ಆರೋಪಿಸಿದ್ದಾನೆ(Allegation). ಜೀವಿತ್ ತಮ್ಮದೇ ಗ್ರಾಮದ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದನು. ಈಗ ಮನೆಯವರ ಒತ್ತಡದಿಂದ ಆಕೆ ತನ್ನನ್ನು ನಿರಾಕರಿಸುತ್ತಿದ್ದಾಳೆ ಎಂದು ಆರೋಪಿದ್ದಾನೆ.
Bizarre case:ಬರ್ತ್‌ಡೆ ವಿಶ್ ಮಾಡಿಲ್ಲ, ಮಾತು ಬಿಟ್ಟ ಬಾಯ್‌ಫ್ರೆಂಡ್, ಪೊಲೀಸರಿಗೆ ದೂರು ನೀಡಿದ ಯುವತಿ!
ಕಳೆದ 9 ವರ್ಷಗಳಿಂದ ಜೀವಿತ್ ಆಕೆಯ ಹುಟ್ಟು ಹಬ್ಬಕ್ಕೆ(Birthday) ತಾನೇ ಕೇಕ್‌ಕಟ್ ಮಾಡಿಸುತ್ತಿದ್ದನು. ನಾನೇ ಆಕೆಗೆ ಮೊದಲ ಶುಭಾಶಯ(Wish) ಹೇಳುತ್ತಿದ್ದೆ, ನಿನ್ನೆ ಆಕೆಯ ಹುಟ್ಟು ಹಬ್ಬದಂದು ಸಿಗಲಿಲ್ಲ ಎಂಬ ಕಾರಣಕ್ಕೆ ನೊಂದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥಗೊಂಡಿರುವ ಪ್ರೇಮಿ ಜೀವಿತ್‌ನನ್ನ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ(Treatment) ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಆಕೆ ತನ್ನನ್ನೇ ಮದುವೆಯಾಗಬೇಕು, ಇಲ್ಲ ತನಗಾದ ಅನ್ನಾಯಕ್ಕೆ ನ್ಯಾಯ ಸಿಗಬೇಕು ಅಂತ ನೊಂದ ಪ್ರೇಮಿ ತನ್ನ ಅಳಲು ತೋಡಿಕೊಂಡಿದ್ದಾನೆ. ಯುವತಿ 9 ವರ್ಷಗಳು ಅನ್ಯೋನ್ಯವಾಗಿದ್ದು ಪರಸ್ಪರ ಪ್ರೀತಿಸಿ ಈಗ ಕೈಕೊಟ್ಟಿರೋದಾಗಿ ಜೀವಿತ್ ಆರೋಪಿಸಿದ್ದಾನೆ.
ಏತನ್ಮಧ್ಯೆ ಯುವತಿಗೆ ತನ್ನನ್ನು ಮದುವೆಯಾಗು ಅಂತ ಪೀಡಿಸುತ್ತಿದ್ದಾನೆ ಅಂತ ಯುವಕನ ವಿರುದ್ಧ ಯುವತಿಯ ಪೋಷಕರ ದೂರು(Complaint) ನೀಡಿದ್ದಾರೆ. ಈ ಸಂಬಂಧ ದೂರು ಸ್ವೀಕರಿಸಿ ಗಂಡಸಿ ಪೊಲೀಸರು(Police) ವಿಚಾರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರೀತಿಸಿದಾಕೆಗೆ ಖಾಸಗಿ ಕ್ಷಣಗಳ ಫೋಟೋ ತೋರಿಸಿ ಬ್ಲ್ಯಾಕ್ ಮೇಲ್, ಬಂಧನ!
ಬೆಂಗಳೂರು(Bengaluru): ಗೆಳತಿಯ ಖಾಸಗಿ ಕ್ಷಣಗಳ ಫೋಟೋ (Explicit Photos) ಸೆರೆ ಹಿಡಿದು ಹಣಕ್ಕಾಗಿ ಬ್ಲ್ಯಾಕ್ ಮೇಲ್ (Blackmail) ಮಾಡುತ್ತಿದ್ದ ಯುವಕ ಮತ್ತು ಆ ವಿಡಿಯೋಗಾಗಿ ಆತನ ಮೇಲೆ ಹಲ್ಲೆ ಮಾಡಿದ ಮೂವರು ಸೇರಿ ನಾಲ್ವರು ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ ಘಟನೆ ನ.22 ರಂದು ನಡೆದಿತ್ತು.
ಪ್ರಿಯತಮೆಯ ಖಾಸಗಿ ವಿಡಿಯೋ ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಹಾಕಿದ ಯುವಕ
ಯುವತಿಗೆ ಬ್ಲ್ಯಾಕ್‌ಮೇಲ್ ಆರೋಪದಡಿ ಸಹಕಾರ ನಗರದ ಸಂತೋಷ್‌ಕುಮಾರ್(23) ಹಾಗೂ ಹಲ್ಲೆ ಆರೋಪದಡಿ ಸಹಕಾರ ನಗರದ ಎರಿಸ್ವಾಮಿ (23), ನಂಜುಂಡಸ್ವಾಮಿ (25) ಮತ್ತು ಆಕಾಶ್ (19) ಎಂಬುವರನ್ನ ಪೊಲೀಸರು ಬಂಧಿಸಿದ್ದರು.
ಆರೋಪಿ ಸಂತೋಷ್ ಸಹಕಾರ ನಗರದ ಬೇಕರಿಯಲ್ಲಿ ಕೆಲಸ ಮಾಡಿಕೊಂಡುತ್ತಿದ್ದು, ಎರಡು ವರ್ಷದ ಹಿಂದೆ ಯುವತಿಯೊಬ್ಬಳ ಪರಿಚಯವಾಗಿ ಬಳಿಕ ಅದು ಪ್ರೀತಿಗೆ (Love) ತಿರುಗಿತ್ತು. ಹೀಗಾಗಿ ಇಬ್ಬರು ಹಲವರು ಬಾರಿ ಖಾಸಗಿಯಾಗಿ ಸಮಯ ಕಳೆದಿದ್ದರು. ಈ ವೇಳೆ ಸಂತೋಷ್ ಮೊಬೈಲ್‌ನಲ್ಲಿ ಯುವತಿಯ ಕೆಲ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದಿದ್ದ. ದಿನಗಳೆದಂತೆ ಈತನ ವರ್ತನೆಯಿಂದ ಬೇಸತ್ತು ದೂರವಾಗಿದ್ದಳು. ಇದರಿಂದ ಕೋಪಗೊಂಡ ಸಂತೋಷ್, ಆಕೆಯ ಖಾಸಗಿ ಫೋಟೋಗಳನ್ನು ತೋರಿಸಿ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಲು ಮುಂದಾಗಿದ್ದ. ಹಲವು ಬಾರಿ ಯುವತಿಯಿಂದ ಹಣ ಪಡೆದಿದ್ದ. ಕೆಲ ದಿನಗಳ ಹಿಂದೆ ನಾನು ಬೈಕ್ ತೆಗೆದುಕೊಳ್ಳಬೇಕು ಎಂದು ಹಣಕ್ಕೆ ಬೇಡಿಕೆ ಇರಿಸಿದ್ದ. ಇಲ್ಲವಾದರೆ, ಈ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಬೆದರಿಸಿದ್ದ. ಇದರಿಂದ ಹೆದರಿದ ಯುವತಿ ಹಣ ನೀಡಿದ್ದಳು.
ಸಂತೋಷ್‌ನ ಕಾಟದಿಂದ ಬೇಸರಗೊಂಡಿದ್ದ ಯುವತಿ, ಆತನ ಕಿರುಕುಳದ (Harassment) ಬಗ್ಗೆ ಆಪ್ತ ಸ್ನೇಹಿತರಾದ ಆಕಾಶ್, ನಂಜುಂಡಸ್ವಾಮಿ, ಯರಿಸ್ವಾಮಿ ಬಳಿ ಹೇಳಿಕೊಂಡಿದ್ದಳು. ಅಂತೆಯೆ ನನ್ನ ಖಾಸಗಿ ಫೋಟೋ ಇರುವ ಆತನ ಮೊಬೈಲ್ ಫೋನ್ ತೆಗೆದುಕೊಂಡು ಬರುವಂತೆ ಸೂಚಿಸಿದ್ದಳು ಎಂದು ಪೊಲೀಸರು ತಿಳಿಸಿದ್ದರು.