ಪ್ರೇಮಿಗಳ ಗುಂಡಿಕ್ಕಿ ಕೊಂದ ಯುವತಿ ಪೋಷಕರು: ಮೃತದೇಹಕ್ಕೆ ಕಲ್ಲು ಕಟ್ಟಿ ನದಿಗೆಸೆದರು

ಯುವ ಪ್ರೇಮಿಗಳನ್ನು ಗುಂಡಿಕ್ಕಿ ಕೊಂದ ಪೋಷಕರು ನಂತರ ಶವಕ್ಕೆ ಕಲ್ಲು ಕಟ್ಟಿ ಮೊಸಳೆಗಳಿಂದ ತುಂಬಿರುವ ಚಂಬಲ್ ನದಿಗೆ ಎಸೆದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಮೊರೇನಾ ಜಿಲ್ಲೆಯಲ್ಲಿ ನಡೆದಿದೆ.

Madhya Pradesh Lovers killed by girls family an tied a stone to the dead body of them and threw it into a river which have crocodiles akb

ಭೋಪಾಲ್‌ ಆಕೆಗಿನ್ನು ಕೇವಲ 18 ವರ್ಷ ತುಂಬಿತ್ತಷ್ಟೇ ಆತನೋ ಇನ್ನು ಚಿಗುರು ಮೀಸೆಯ 21 ವರ್ಷದ ನವ ತರುಣ, ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿಗಳ ಪ್ರೇಮಕ್ಕೆ ಯುವತಿ ಕಡೆಯವರ ತೀವ್ರ ವಿರೋಧವಿತ್ತು. ವಿರೋಧ ಲೆಕ್ಕಿಸದೇ ಇವರ ಪ್ರೇಮ ಮುಂದುವರೆದಿತ್ತು. ಇದರಿಂದ ಆಕ್ರೋಶಗೊಂಡ ಯುವತಿಯ ಪೋಷಕರು ಸ್ವಲ್ಪವೂ ಕರುಣೆ ಇಲ್ಲದಂತೆ ಈ ನವಪ್ರೇಮಿಗಳನ್ನು ಗುಂಡಿಕ್ಕಿ ಕೊಂದಿದ್ದಾರೆ. ಅಷ್ಟು ಮಾತ್ರವಲ್ಲದೇ ಅವರಿಬ್ಬರ ಮೃತದೇಹಗಳಿಗೆ ಭಾರವಾದ ಕಲ್ಲುಗಳನ್ನು ಕಟ್ಟಿ ಮೊಸಳೆಗಳಿಂದ ತುಂಬಿದ ಚಂಬಲ್ ನದಿಗೆ ಎಸೆದು ಕ್ರೌರ್ಯ ಮೆರೆದಿದ್ದಾರೆ. ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. 

ಮೊರೆನಾ ಜಿಲ್ಲೆಯ (Morena district) ರತ್ನಬಸೈ ಗ್ರಾಮದ ಶಿವಾನಿ ತೋಮರ್‌ (18) ಹಾಗೂ ರಾಧೇಶ್ಯಾಮ್ (21) ತೋಮರ್‌ ಕೊಲೆಯಾದ ಪ್ರೇಮಿಗಳಾಗಿದ್ದಾರೆ.  ಶಿವಾನಿಯ ಪೋಷಕರು ಆಕೆಯ ಪ್ರೇಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.  ಯುವಕ ರಾಧೇಶ್ಯಾಮ್ ನೆರೆಯ ಬಾಲುಪುರ (Balupura) ಗ್ರಾಮದ ನಿವಾಸಿಯಾಗಿದ್ದ. ರಾಧೇಶ್ಯಾಮ್‌ ತಂದೆ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. 

ಪ್ರೀತಿ ಕೊಂದ ಪೋಷಕರು: ಆತ್ಮಹತ್ಯೆಗೆ ಶರಣಾದ ಕೂಲಿ ಕಾರ್ಮಿಕ ಪ್ರೇಮಿಗಳು

ರಾಧೇಶ್ಯಾಮ್ ಅವರ ತಂದೆ,  ತನ್ನ ಮಗ ಮತ್ತು ಯುವತಿ ಹಲವಾರು ದಿನಗಳಿಂದ ನಾಪತ್ತೆಯಾಗಿದ್ದಾರೆ ಅವರನ್ನು ಕೊಲೆ ಮಾಡಿರಬಹುದು ಎಂಬ ಶಂಕೆ ಇದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆರಂಭದಲ್ಲಿ ಪ್ರೇಮಿಗಳಿಬ್ಬರು ಓಡಿ ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ ಇವರಿಬ್ಬರು ಮನೆ ಬಿಟ್ಟು ಹೋಗಿದ್ದನ್ನು ಗ್ರಾಮದಲ್ಲಿ ಯಾರೂ ನೋಡಿರಲಿಲ್ಲ. ಹೀಗಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿಯ ತಂದೆ ಹಾಗೂ ಸಂಬಂಧಿಗಳನ್ನು ವಿಚಾರಣೆ ನಡೆಸಿದ್ದಾರೆ. ಗಂಟೆಗಳ ವಿಚಾರಣೆ ಬಳಿಕ ಮಗಳು ಹಾಗೂ ಆಕೆಯ ಪ್ರೇಮಿಯನ್ನು ತಾವೇ ಕೊಲೆ ಮಾಡಿದ್ದಾಗಿ ಯುವತಿಯ ಪೋಷಕರು ಬಾಯ್ಬಿಟ್ಟಿದ್ದಾರೆ. 

ರಾಧೇಶ್ಯಾಂ (Radheshyam) ಹಾಗೂ ಶಿವಾನಿಯನ್ನು (Shivani) ಜೂನ್ 3 ರಂದು ಗುಂಡಿಕ್ಕಿ ಹತ್ಯೆ ಮಾಡಿದ್ದು, ನಂತರ ಅವರಿಬ್ಬರ ಮೃತದೇಹಗಳಿಗೆ ಕಲ್ಲುಗಳನ್ನು ಕಟ್ಟಿ ಅವುಗಳನ್ನು ಮೊಸಳೆಗಳಿಂದ ತುಂಬಿದ್ದ ಚಂಬಲ್ ನದಿಗೆ (Chambal river)ಎಸೆದಿದ್ದಾಗಿ ಯುವತಿಯ ಪೋಷಕರು ಪೊಲೀಸರ ತನಿಖೆ ವೇಳೆ ಹೇಳಿದ್ದಾರೆ.  ನಾವು ಯುವತಿಯ ಕುಟುಂಬದ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ತಾವು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ದಂಪತಿಯನ್ನು ಕೊಲೆ ಮಾಡಿ ಶವವನ್ನು ಚಂಬಲ್ ನದಿಗೆ ಎಸೆದಿದ್ದಾಗಿ ಯುವತಿ ಮನೆಯವರು ನಮಗೆ ತಿಳಿಸಿದ್ದಾರೆ. ಮೃತದೇಹಗಳನ್ನು ಹೊರತೆಗೆಯಲು ನಾವು ರಕ್ಷಣಾ ತಂಡಗಳ ಸಹಾಯವನ್ನು ಪಡೆದುಕೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಂಬಲ್ ಘರಿಯಾಲ್ ಅಭಯಾರಣ್ಯವು (Chambal Gharial sanctuary) 2,000 ಕ್ಕೂ ಹೆಚ್ಚು ಘಾರಿಯಲ್ ಮೊಸಳೆ (alligator) ಮತ್ತು 500 ಸಿಹಿನೀರಿನ ಮೊಸಳೆಗಳನ್ನು ಹೊಂದಿದೆ. 

ಮದುವೆಯಾದ್ರೆ ನೀವಿಬ್ರೂ ಉಳಿಯಲ್ಲ, ಹೆಂಗ್‌ ಮದ್ವೆ ಆಗ್ತೀರೋ ಆಗ್ರಿ: ಪ್ರೇಮಿಗಳಿಗೆ ಪ್ರಾಣ ಬೆದರಿಕೆ

Latest Videos
Follow Us:
Download App:
  • android
  • ios