* ಚೆಕ್ ಅಪ್ ಗೆಂದು ಬಂದ ಮಹಿಳೆ ಜತೆ ವೈದ್ಯನ ಅನುಚಿತ ವರ್ತನೆ
* ಖಾಸಗಿ ಅಂಗ ಸ್ಪರ್ಶ ಮಾಡಲು ಯತ್ನಿಸಿದ
* ಗೋವಾದ ಪ್ರಸಿದ್ಧ ಮೂಳೆ ತಜ್ಞನ ವಿರುದ್ಧ ದೂರು
ಪಣಜಿ(ಸೆ. 28) ಚೆಕ್ ಅಪ್ ಗೆ ಬಂದಿದ್ದ ಮಹಿಳಾ ಪೇಶೆಂಟ್ ಜತೆ ಅಸಭ್ಯವಾಗಿ ವರ್ತಿಸಿದ ವೈದ್ಯನ ವಿರುದ್ಧ ಪ್ರಕರಣ ದಾಖಲಾಗಿದೆ.
ಗೋವಾದ ಪ್ರಸಿದ್ಧ ಮೂಳೆ ತಜ್ಞನ ವಿರುದ್ಧ ಪ್ರಕರಣ ದಾಖಲಾಗಿದೆ. ವೈದ್ಯನ ಆಸ್ಪತ್ರೆಯಲ್ಲಿ ಮಹಿಳೆ ಬಂದಾಗ ಲೇಡಿ ನರ್ಸ್ ಇರಲಿಲ್ಲ. ಮಹಿಳೆಯ ಪ್ಯಾಂಟ್ ಕಳಚಿ ಖಾಸಗಿ ಅಂಗವನ್ನು ಮುಟ್ಟಲು ಯತ್ನಿಸಿದ ಆರೋಪ ಬಂದಿದೆ. ಹಿಂಬದಿ ಭಾಗದಲ್ಲಿ ನಿರಂತರ ನೋವು ಕಾಣಿಸಿಕೊಂಡಿದ್ದರಿಂದ ಮಹಿಳೆ ವೈದ್ಯರ ಬಳಿ ತೆರಳಿದ್ದಾಳೆ.
ಚೆಕ್ ಅಪ್ ಮಾಡಲೇಂದು ವೈದ್ಯ ಒಳಗಿನ ಕೋಣೆಗೆ ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾನೆ. ಮಹಿಳೆಯನ್ನು ಅಂಗಾತ ಮಲಗಲು ಹೇಳಿ ಆಕೆ ಧರಿಸಿದ್ದ ಪ್ಯಾಂಟ್ ಕಳಚಿದ್ದಾನೆ. ಈ ವೇಳೆ ಮಹಿಳೆಯ ಖಾಸಗಿ ಅಂಗವನ್ನು ಮುಟ್ಟಲು ಮುಂದಾಗಿದ್ದು ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಾಳೆ.
ಮಹಿಳಾ ಪೊಲೀಸರೆ ಎದುರೆ ಲಾಕಪ್ ನಲ್ಲಿ ಬೆತ್ತಲಾದವನ ಪುಂಡಾಟ
ಮನೆಗೆ ಬಂದು ತನ್ನ ಪತಿಗೆ ವಿಷಯ ತಿಳಿಸಿದ್ದು ನಂತರ ಇಬ್ಬರು ತೆರಳಿ ದೂರು ದಾಖಲಿಸಿದ್ದಾರೆ. ಮಹಿಳೆ ಕೂಡ ಮಾಪುಸಾ ಪೊಲೀಸರನ್ನು ಸಂಪರ್ಕಿಸಿ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಗಜಾನನ ಪ್ರಭುದೇಸಾಯಿ ಪ್ರಕರಣ ದಾಖಲಿಸಿಕೊಂಡುದ್ದು ವೈದ್ಯನನ್ನು ಅರೆಸ್ಟ್ ಮಾಡಿದ್ದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ನೈಟ್ ಡ್ಯೂಟಿಯಲ್ಲಿದ್ದ ನರ್ಸ್ ಮೇಲೆ ಅದೇ ಆಸ್ಪತ್ರೆ ವೈದ್ಯ ಲಯಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದ ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿತ್ತು. ನರ್ಸ್ ಮೇಲೆ ಕೈ ಹಾಕಿದ್ದ ವೈದ್ಯ ಈ ವಿಚಾರವನ್ನು ಬಾಯಿ ಬಿಟ್ಟರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ.