Mangaluru Blast: ವಾಟ್ಸಾಪ್‌ ಡಿಪಿಯಾಗಿ ಆದಿ ಯೋಗಿ ಫೋಟೋ ಬಳಸಿದ್ದ ಉಗ್ರ; ಸಿಮ್‌ ಕಾರ್ಡ್‌ ಕೊಡಿಸಿದ್ದ ಶಿಕ್ಷಕ..!

By BK Ashwin  |  First Published Nov 22, 2022, 3:51 PM IST

ಆರೋಪಿ ತಮಿಳುನಾಡು ಹಾಗೂ ಕೇರಳದ ಹಲವು ಪ್ರದೇಶಗಳಿಗೆ ಹೋಗಿದ್ದಾನೆ ಎಂಬುದೂ ಬೆಳಕಿಗೆ ಬಂದಿದೆ. ಆತ ಹಾಸ್ಟೆಲ್‌ಗಳಲ್ಲಿ ತಂಗುತ್ತಿದ್ದ ಹಾಗೂ ನಕಲಿ ಹೆಸರುಗಳಲ್ಲಿ ಹಾಗೂ ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸಿ ವಾಟ್ಸಾಪ್‌ ನಂಬರ್‌ಗಳನ್ನು ಬಳಸುತ್ತಿದ್ದ ಎಂದೂ ತಿಳಿದುಬಂದಿದೆ.


ಮಂಗಳೂರು (Mangaluru) ಕುಕ್ಕರ್‌ ಸ್ಪೋಟ ಪ್ರಕರಣ (Cooker Blast Case) ಸಂಬಂಧ ಆರೋಪಿ (Accused) ವಿರುದ್ಧ ಹಲವು ಸಾಕ್ಷ್ಯಗಳು ಹಾಗೂ ಲಿಂಕ್‌ಗಳು ಪತ್ತೆಯಾಗುತ್ತಿವೆ. ಮಂಗಳೂರಿನಲ್ಲಿ ಮೊಹಮ್ಮದ್‌ ಶಾರೀಖ್‌ (Mohammed Shariq) ಪರವಾಗಿ ಶಾಲೆಯ ಶಿಕ್ಷಕರೊಬ್ಬರು ಸಿಮ್‌ ಕಾರ್ಡ್‌ ಖರೀದಿಸಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ಆತನ ವಾಟ್ಸಾಪ್‌ ಡಿಪಿಯಲ್ಲಿ (Whats App Dp) ಇಶಾದ (Isha) ಆದಿ ಯೋಗಿಯ (Adi Yogi) ಪ್ರತಿಮೆಯ (Statue) ಫೋಟೋವನ್ನು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ನವೆಂಬರ್‌ 18 ರವರೆಗೆ ಆತನ ವಾಟ್ಸಾಪ್‌ ಸಂಖ್ಯೆ ಸಕ್ರಿಯವಾಗಿತ್ತು ಎಂದೂ ತಿಳಿದುಬಂದಿದೆ.  

ಮಂಗಳೂರು ಕುಕ್ಕರ್‌ ಸ್ಫೋಟ ಪ್ರಕರಣದಲ್ಲಿ ಶಾಲೆಯ ಟೀಚರ್‌ ವೊಬ್ಬರನ್ನು ರಾಜ್ಯ ಪೊಲೀಸರು ಮಂಗಳೂರಿಗೆ ಕರೆದೊಯ್ಯ್ದಿದ್ದಾರೆ. ಸ್ಫೋಟ ಪ್ರಕರಣದ ಆರೋಪಿ ಮೊಹಮ್ಮದ್‌ ಶಾರಿಖ್‌ ಅವರಿಗೆ ಸುರೇಂದ್ರನ್‌ ಎಂಬ ಶಾಲಾ ಶಿಕ್ಷಕ ಸಿಮ್‌ ಕಾರ್ಡ್‌ ಕೊಡಿಸಿದ್ದರು ಎಂದು ತಿಳಿದುಬಂದಿದೆ. ಸದ್ಯ, ಮೊಹಮ್ಮದ್‌ ಶಾರೀಕ್‌ ಗಾಯಗೊಳಗಾಗಿದ್ದು, ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಹಿನ್ನೆಲೆ ಶಿಕ್ಷಕ ಸುರೇಂದ್ರನ್‌ ಅವರನ್ನು ಮಂಗಳೂರಿಗೆ ಕರೆದೊಯ್ದಿದ್ದು, ಶಾರೀಖ್‌ ಅವರನ್ನು ಗುರುತಿಸಲು ಕರೆದೊಯ್ದಿದ್ದಾರೆ.   

Tap to resize

Latest Videos

ಇದನ್ನು ಓದಿ: ಮಂಗಳೂರು ಸ್ಫೋಟ: ಬಾಂಬ್‌ ಸರಿಯಾಗಿ ಫಿಟ್‌ ಆಗಿರಲಿಲ್ಲ, ಅರ್ಧಂಬರ್ಧ ಕಲಿತಿದ್ದ ಶಾರೀಕ್‌
 
ಇನ್ನು, ಕುಕ್ಕರ್‌ ಸ್ಫೋಟ ಪ್ರಕರಣಕ್ಕೂ ಮುನ್ನ ಮೊಹಮ್ಮದ್‌ ಶಾರಿಖ್‌ ಬಸ್‌ ಸ್ಟಾಪ್‌ವೊಂದರ ಬಳಿ ನಿಂತಿರುವುದು ಹಾಗೂ ಹ್ಯಾಟ್‌ ಹಾಕಿಕೊಂಡು ಬ್ಯಾಗ್‌ವೊಂದರ ಜತೆ ನಡೆದಾಡುತ್ತಿರುವ ಸಿಸಿಟಿವಿ ದೃಶ್ಯಾವಳಿ ದೊರೆತಿದ್ದು, ಪೊಲೀಸರು ಈ ಫೂಟೇಜ್‌ ಅನ್ನು ವಶಪಡಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಕೊಯಮತ್ತೂರಿನ ಆದಿ ಯೋಗಿ ಪ್ರತಿಮೆಯ ಫೋಟೋವನ್ನು ಆತ ವಾಟ್ಸಾಪ್‌ ಡಿಪಿಯಾಗಿ ಬಳಸುತ್ತಿದ್ದ ಎಂದೂ ತಿಳಿದುಬಂದಿದೆ. 

ಮಂಗಳೂರಿನಲ್ಲಿ ನವೆಂಬರ್ 19 ರಂದು ಕುಕ್ಕರ್‌ ಸ್ಫೋಟವಾಗಿತ್ತು. ಈ ಸ್ಫೋಟದಲ್ಲಿ ಗಾಯಗೊಳಗಾಗಿರುವ ಇಬ್ಬರ ಪೈಕಿ ಒಬ್ಬನಾಗಿರುವ ಶಾರಿಖ್‌ ಈ ಸ್ಫೋಟ ನಡೆಸಲು ಪ್ರಮುಖ ಪಾತ್ರ ಬೀರಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ತಮಿಳುನಾಡು ಹಾಗೂ ಕೇರಳದ ಹಲವು ಪ್ರದೇಶಗಳಿಗೆ ಹೋಗಿದ್ದಾನೆ ಎಂಬುದೂ ಬೆಳಕಿಗೆ ಬಂದಿದೆ. ಆತ ಹಾಸ್ಟೆಲ್‌ಗಳಲ್ಲಿ ತಂಗುತ್ತಿದ್ದ ಹಾಗೂ ನಕಲಿ ಹೆಸರುಗಳಲ್ಲಿ ಹಾಗೂ ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸಿ ವಾಟ್ಸಾಪ್‌ ನಂಬರ್‌ಗಳನ್ನು ಬಳಸುತ್ತಿದ್ದ ಎಂದೂ ತಿಳಿದುಬಂದಿದೆ. ಆತ ಪ್ರೇಮ್‌ ರಾಜ್‌ ಎಂಬುವರ ಹೆಸರಲ್ಲಿ ಸೆಲ್‌ ಫೋನ್‌ ಬಳಸುತ್ತಿದ್ದು, ಹಾಗೂ ಗೌರಿ ಅರುಣ್‌ಕುಮಾರ್‌ ಎಂಬ ಹೆಸರಲ್ಲಿ ಕೊಯಮತ್ತೂರು ಹೋಟೆಲ್‌ನಲ್ಲಿ ವಾಸ ಮಾಡುತ್ತಿದ್ದ ಎಂಬುದೂ ಬೆಳಕಿಗೆ ಬಂದಿದೆ. 

ಇದನ್ನೂ ಓದಿ: ಮಂಗಳೂರು ಬಾಂಬ್‌ ಸ್ಫೋಟ ಪ್ರಕರಣ: ಕೊಯಮತ್ತೂರಲ್ಲಿ ನಕಲಿ ಸಿಮ್‌ ಕಾರ್ಡ್‌ ಖರೀದಿ ಮಾಡಿದ್ನಾ ಉಗ್ರ?

ಈ ಮಧ್ಯೆ, ಮೊಹಮ್ಮದ್‌ ಶಾರಿಖ್‌ ತಮಿಳುನಾಡಿನ ಕೊಯಮತ್ತೂರಿನ ಪ್ರಮುಖ ಪ್ರವಾಸಿ ಸ್ಥಳವಾದ ಇಶಾ ಕೇಂದ್ರದ ಆದಿ ಯೋಗಿ ಪ್ರತಿಮೆಯನ್ನು ವಾಟ್ಸಾಪ್‌ ಡಿಪಿಯಾಗಿ ಬಳಸುತ್ತಿದ್ದ. ಜತೆಗೆ, ಈತನ ವಾಟ್ಸಾಪ್‌ ಸಂಖ್ಯೆ ನವೆಂಬರ್ 18 ರವರೆಗೆ ಸಕ್ರಿಯವಾಗಿತ್ತು ಎಂದು ಸಹ ತಿಳಿದುಬಂದಿದೆ. ಈ ಹಿನ್ನೆಲೆ ಈತ ಇಶಾ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದನಾ ಹಾಗೂ ಈತನ ಜತೆಗೆ ಬೇರೆ ಯಾರಾದರೂ ಭೇಟಿ ಕೊಟ್ಟಿದ್ದರಾ ಎಂಬ ಬಗ್ಗೆಯೂ ಕರ್ನಾಟಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.  

ಇದನ್ನೂ ಓದಿ: ಮಂಗಳೂರು ಸ್ಫೋಟ ಭಯೋತ್ಪಾದನಾ ಕೃತ್ಯ: ಡಿಜಿಪಿ ಪ್ರವೀಣ್‌ ಸೂದ್‌ ಸ್ಪಷ್ಟನೆ

click me!