ಮಂಡ್ಯದಲ್ಲಿ ವೈದ್ಯರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕುದುರಗುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ.
ಮಂಡ್ಯ(ಜೂ.2): ಮಂಡ್ಯದಲ್ಲಿ ವೈದ್ಯರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕುದುರಗುಂಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಡಾ.ವೇಣುಗೋಪಾಲ್(57) ಆತ್ಮಹತ್ಯೆ ಮಾಡಿಕೊಂಡ ವೈದ್ಯರಾಗಿದ್ದಾರೆ. ಇವರು ಮಂಡ್ಯದ ಸಾಂಜೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗುರುವಾರ ಕೂಡ ಆಸ್ಪತ್ರೆಯಲ್ಲಿ ಹಲವು ಮಂದಿಗೆ ಚಿಕಿತ್ಸೆ ನೀಡಿದ್ದರು. ಅಂದೇ ರಾತ್ರಿ ಕುದುರಗುಂಡಿ ಗ್ರಾಮದ ಕೆರೆಯ ಬಳಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ವರ್ಷ ಇವರ ತಂಗಿ ಸಾವನ್ನಪ್ಪಿದ್ದರು. ಈ ಬೇಸರದ ನಡುವೆ ವೈದ್ಯ ವ್ಯತ್ತಿಗೆ ಸಂಬಂಧಿಸಿದ ದಾಖಲೆಗಳ ಕೊರತೆ ಹಿನ್ನೆಲೆ ಆಗಾಗ ವಿಚಾರಣೆಗೆ ಹಾಜರಾಗುತ್ತಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಮದ್ದೂರು ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ಮಿಮ್ಸ್ ಶವಗಾರಕ್ಕೆ ಶವ ರವಾನೆ ಮಾಡಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಯುವ ರೈತ ಆತ್ಮಹತ್ಯೆ
ಶಿರಸಿ: ಸಾಲ ತೀರಿಸಲಾಗದೇ ಯುವ ರೈತ ಉಮೇಶ ಸುರೇಶ ನಾಯ್ಕ (30) ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕೊರ್ಲಕಟ್ಟಾದಲ್ಲಿ ಬುಧವಾರ ನಡೆದಿದೆ.
ಮೃತ ರೈತ ಕೊರ್ಲಕಟ್ಟಾವ್ಯವಸಾಯ ಸಹಕಾರಿ ಸಂಘದಲ್ಲಿ 1.5 ಲಕ್ಷ ರೂ, ಸ್ತ್ರೀ ಶಕ್ತಿ ಸಂಘದಿಂದ 50 ಸಾವಿರ ಹಾಗು ಊರ ಜನರಿಂದ 50 ಸಾವಿರ ರೂ ಸಾಲಮಾಡಿದ್ದನು. ಬೆಳೆಗಾಗಿ ಆರು ಕೊಳವೆ ಬಾವಿ ಹೊಡೆಸಿದರೂ ನೀರು ಬಂದಿರಲಿಲ್ಲ. ಇದರಿಂದ ಬೆಳೆ ಕೂಡಾ ನಷ್ಠವಾಗಿತ್ತು. ಇದರ ನಡುವೆಯೇ ಸಾಲ ತುಂಬಲು ಸೊಸೈಟಿಯಿಂದ ನೊಟಿಸ್ ಬಂದಿದ್ದರಿಂದ ಇದನ್ನೆ ಮನಸ್ಸಿಗೆ ಹಚ್ಚಿಕೊಂಡು ಉಮೇಶ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2ನೇ ಮಗುವಿನ ಜನ್ಮ ನೀಡಿದ ಒಂದು ತಿಂಗಳಲ್ಲೇ ಸೆಕ್ಸ್‌ಗೆ ಒತ್ತಾಯಿಸಿದ ಪತಿ, ಮುಂದಾಗಿದ್ದು
ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ
ಯುವಕನೊಬ್ಬ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಾಯ್ಕಿಣಿಯ ಬಾಕಡಕೇರಿಯಲ್ಲಿ ನಡೆದಿದೆ. ಶಿರಾಲಿ ಮಣ್ಣೊಂಡದ ನಿವಾಸಿ ದಿನೇಶ ಮಂಜಪ್ಪ ನಾಯ್ಕ (28) ಆತ್ಮಹತ್ಯೆ ಮಾಡಿಕೊಂಡವನು.
RTI ಕಾರ್ಯಕರ್ತನನ್ನ ಕೊಂದುಬಿಟ್ಟರಾ ಪೊಲೀಸರು?:
ಈತ ಸಣ್ಣಪುಟ್ಟಗುತ್ತಿಗೆ ಕೆಲಸವನ್ನು ನಿರ್ವಹಿಸುತ್ತಿದ್ದು, ಮನೆಯಿಂದ ಹೊರಗೆ ಹೋದ ಈತ ವಾಪಸ್ ಮನೆಗೆ ಬರದೇ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಬಾಕಡಕೇರಿ ಸ್ಮಶಾನದ ಸಮೀಪ ಗೇರು ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿದ್ದಾನೆ. ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಮೃತನ ಸಹೋದರ ಸುಬ್ರಾಯ ನಾಯ್ಕ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.