ವಿ.ಸೋಮಣ್ಣ ಪಿಎ ಹೆಸರಿನಲ್ಲಿ 4.5 ಲಕ್ಷ ರು. ಪಡೆದು ವಂಚನೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಂಗಳೂರು (ಆ.5): ಮಾಜಿ ಸಚಿವ ವಿ.ಸೋಮಣ್ಣ ಅವರ ಆಪ್ತ ಸಹಾಯಕನ ಸೋಗಿನಲ್ಲಿ ಪಡಿತರ ಕಾರ್ಡ್ ಆಧರಿಸಿ ಸಾಲ ಹಾಗೂ ಕಡಿಮೆ ಬೆಲೆಗೆ ನಿವೇಶನ ಕೊಡಿಸುವುದಾಗಿ ನಂಬಿಸಿ ಕೂಲಿ ಕಾರ್ಮಿಕರಿಗೆ ಕಿಡಿಗೇಡಿಯೊಬ್ಬ ವಂಚಿಸಿರುವ ಬಗ್ಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀರೇಶ್ ಎಂಬಾತನ ಮೇಲೆ ಆರೋಪ ಬಂದಿದ್ದು, ಜಕ್ಕೂರಿನ ನಿವಾಸಿ ಕೂಲಿ ಕಾರ್ಮಿಕ ಬಸಪ್ಪ ಅವರಿಂದ 4.5 ಲಕ್ಷ ರು ಹಣ ಪಡೆದು ಆರೋಪಿ ವಂಚಿಸಿದ್ದಾನೆ. ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿದ್ದಾರೆ.
Bengaluru: ಜೈಲಿಂದ ಬಿಡುಗಡೆಯಾಗಿ ಮನೆ ಸೇರುವ ಮುನ್ನವೇ ರೌಡಿ ಶೀಟರ್ ಬರ್ಬರ
ದೂರಿನ ವಿವರ: ಜಕ್ಕೂರಿನಲ್ಲಿ ತಮ್ಮ ಕುಟುಂಬದ ಜತೆ ನೆಲೆಸಿರುವ ಬಸಪ್ಪ, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಾಲ್ಕು ತಿಂಗಳ ಹಿಂದೆ ತಮ್ಮೂರಿನ ಮಲ್ಲಮ್ಮ ಎಂಬುವರ ಮೂಲಕ ಬಸಪ್ಪ ಅವರಿಗೆ ವೀರೇಶ್ ಪರಿಚಯವಾಗಿದೆ. ಆಗ ತಾನು ಶಾಸಕ ಸೋಮಣ್ಣರವರ ಬಳಿ ಕೆಲಸ ಮಾಡುತ್ತೇನೆ ಎಂದು ವೀರೇಶ್ ಪರಿಚಯ ಮಾಡಿಕೊಂಡಿದ್ದ. ‘ನಿಮಗೆ ಪಡಿತರ ಕಾರ್ಡ್ ಆಧರಿಸಿ ಸಾಲ ಹಾಗೂ ನಿವೇಶನ ಕೊಡಿಸುವುದಾಗಿ’ ಆತ ನಂಬಿಸಿದ್ದಾನೆ. ಈ ಮಾತು ನಂಬಿದ ಬಸಪ್ಪ ಅವರು 4.5 ಲಕ್ಷ ರು ಹಣವನ್ನು ಕೊಟ್ಟಿದ್ದಾರೆ. ಆದರೆ ಹಣ ನೀಡಿದ ಬಳಿಕ ವೀರೇಶ್ ಸಂಪರ್ಕ ಕಡಿತಗೊಳಿಸಿದ್ದಾರೆ. ಹಲವು ಬಾರಿ ಆತನನ್ನು ಸಂಪರ್ಕಿಸಲು ಯತ್ನಿಸಿ ವಿಫಲರಾದ ಬಸಪ್ಪ ಕೊನೆಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಲಂಚಕ್ಕೆ ಕೈಯೊಡ್ಡಿ ಕೇರಳ ಪೊಲೀಸರಿಗೆ ಸಿಕ್ಕಿಬಿದ್ದ 4 ಮಂದಿ ಕರ್ನಾಟಕ ಪೊಲೀಸರು ಸಸ್ಪೆಂಡ್!
ಆನ್‌ಲೈನ್‌ನಲ್ಲಿ ವ್ಯಕ್ತಿಗೆ .2.25 ಲಕ್ಷ ವಂಚನೆ:
ಹುಬ್ಬಳ್ಳಿ: ಮನೆಯಲ್ಲಿ ಕುಳಿತು ಕೆಲಸ ಮಾಡಬಹುದು ಎಂಬ ಇನ್ಸಾ$್ಟಗ್ರಾಂನಲ್ಲಿ ಸಂದೇಶ ವೀಕ್ಷಿಸಿದ ಧಾರವಾಡದ ಬನಶ್ರೀನಗರದ ನಿಂಗಪ್ಪಾ ಸುಣಗಾರ ಎಂಬುವರಿಗೆ ಅಪರಿಚಿತ ವ್ಯಕ್ತಿಯಿಂದ .2.25 ಲಕ್ಷ ವಂಚಿಸಿದ ಪ್ರಕರಣ ಸೈಬರ್ ಪೊಲೀಸ್ ಠಾಣೆ ದಾಖಲಾಗಿದೆ. ನಿಂಗಪ್ಪ ಅವರು ಇನ್ಸಾ$್ಟಗ್ರಾಂ ಜಾಹೀರಾತುವೊಂದರಲ್ಲಿ ಫಾರ್ಚ್ ಟೈಮ್ ಕೆಲಸವಿರುವುದನ್ನು ಗಮನಿಸಿದ್ದಾರೆ. ಬಳಿಕ ಅಲ್ಲಿದ್ದ ಟೆಲಿಗ್ರಾಂ ಐಡಿ ಸಂಪರ್ಕಿಸಿದ್ದಾರೆ. ಅಪರಿಚಿತ ವ್ಯಕ್ತಿ ನಿಂಗಪ್ಪಾ ಅವರಿಗೆ ಕೆಲ ಟಾಸ್‌್ಕ ನೀಡಿದ್ದು, ಲಿಂಕ್ ಓಪನ್, ಲೈಕ್ ಮಾಡಿಸಿ ಕಳುಹಿಸಲು ಸೂಚಿಸಿದ್ದಾರೆ. ಬಳಿಕ .225, ನಿಂಗಪ್ಪ ಅವರಿಗೆ ನೀಡಿ ಬಳಿಕ ಮತ್ತೆ ಟಾಸ್‌್ಕಗಳನ್ನು ನೀಡಿ ಇವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.