ನಡುರಸ್ತೆಯಲ್ಲೇ ಕೊಲೆ | ಕೊಂದು ಮೃತದೇಹದ ಫೋಟೋ ತೆಗೆದ ಕೊಲೆಗಾರ
ದೆಹಲಿ(ಅ.28): ಹಾಡ ಹಗಲೇ ವ್ಯಕ್ತಿಯನ್ನು ಕೊಂದು, ಅಲ್ಲಿಯೇ ಆತನ ಫೋಟೋಗಳನ್ನು ತೆಗೆದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಉತ್ತಮ ನಗರದ ನವಡ ಹೌಸಿಂಗ್ ಕಾಂಪ್ಲೆಕ್ಸ್‌ನ 55 ಫೀಟ್ ರಸ್ತೆಯಲ್ಲಿ ಘಟನೆ ನಡೆದಿದೆ. ಅ.22ರಂದು ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಬೆಚ್ಚಿಬೀಳಿಸೋ ದೃಶ್ಯಾವಳಿಗಳು ಸೆರೆಯಾಗಿವೆ.
17 ಸೆಕೆಂಡುಗಳ ವಿಡಿಯೋದಲ್ಲಿ ವ್ಯಕ್ತಿ ಇನ್ನೊಬ್ಬನಿಗೆ ಶೂಟ್ ಮಾಡೋದು ದಾಖಲಾಗಿದೆ. ಎರಡರಿಂದ ಮೂರು ಗುಂಡು ಹಾರಿಸಿದ ಕೊಲೆಗಾರ ತನ್ನ ಮೊಬೈಲ್ ಫೋನ್ ಹೊರತೆಗೆದು ಮೃತದೇಹದ ಹಲವು ಫೋಟೋ ತೆಗೆದಿದ್ದಾನೆ.
undefined
ಮದುವೆ, ಮತಾಂತರಕ್ಕೆ ಒತ್ತಾಯ: ಹಿಂದು ಯುವತಿಯನ್ನು ಗುಂಡಿಕ್ಕಿ ಕೊಂದ ಮುಸ್ಲಿಂ ಯುವಕ
ಆರೋಪಿ ಪವನ್ ಗೆಹ್ಲೋಟ್ ಎಂದು ಗುರುತಿಸಲಾಗಿದ್ದು, ವಿಕಾಸ್ ಮೆಹ್ತಾನನ್ನು ಕೊಂದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಸಹೋದರನ ಸಾವಿಗಾಗಿ ರಿವೆಂಜ್ ತಗೊಂಡಿದ್ದಾಗಿಯೂ ಪವನ್ ಹೇಳಿದ್ದಾನೆ.
दिल्ली के मोहन गार्डन इलाके में आपसी रंजिश में पवन गहलोत नाम के आरोपी ने विकास की गोली मार कर हत्या कर दी। बदमाश ने हत्या के बाद अपने मोबाइल से फोटो भी ली। pic.twitter.com/ASUXtz0MXx
2019ರಲ್ಲಿ ಪವನ್ ಸಹೋದರ ಪ್ರವೀಣ್ ಕೊಲೆ ನಡೆದಿತ್ತು. ವಿಕಾಸ್ ದಲಾಲ್ ಎಂಬಾತ ಪ್ರವೀಣ್‌ನನ್ನು ಕೊಲೆ ಮಾಡಿದ್ದ. ಆತನೂ ಪೊಲೀಸ್ ಫೈರಿಂಗ್‌ನಲ್ಲಿ ಮೃತಪಟ್ಟಿದ್ದ. ಮೆಹ್ತಾನಿಂದ ತನಗೆ ತೊಂದರೆಯಾಗಬಹುದೆಂದು ಸಾಯುವ ಮುನ್ನ ಪ್ರವೀಣ್ ಹೇಳಿದ್ದಾಗಿ ಪವನ್ ಗೆಹ್ಲೋಟ್ ಹೇಳಿದ್ದಾನೆ.