ಮಧು ಎಂಬ ವ್ಯಕ್ತಿ ಮಧುರವಾಡ ಬಡಾವಣೆಯ ವೈನ್ ಶಾಪ್‌ಗೆ ಹೋಗಿದ್ದಾರೆ. ಆದರೆ, ಆ ವೇಳೆ ವೈನ್‌ಶಾಪ್ ಮುಚ್ಚುವ ಸಮಯವಾದ್ದರಿಂದ ಅಂಗಡಿ ಸಿಬ್ಬಂದಿ ಮದ್ಯ ನೀಡುವುದನ್ನು ನಿರಾಕರಿಸಿದ್ದಾರೆ. ಇದರಿಂದ ಆರೋಪಿ ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಮರುದಿನ ಬಂದು ವೈನ್‌ಶಾಪ್‌ಗೆ ಬೆಂಕಿ ಹಚ್ಚಿದ್ದಾರೆ.
ವಿಶಾಖಪಟ್ಟಣಂ (ನವೆಂಬರ್ 13, 2023): ವೈನ್ ಶಾಪ್ ಮುಚ್ಚುವ ಸಮಯದಲ್ಲಿ ಮದ್ಯ ಕೇಳಿದ ವ್ಯಕ್ತಿಯೊಬ್ಬರಿಗೆ ಅಂಗಡಿಯವರೊಬ್ಬರು ಮದ್ಯ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ವ್ಯಕ್ತಿ ಅವರ ಜತೆ ಜಗಳವಾಡಿದ್ದಲ್ಲದೆ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಅಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಭಾನುವಾರ ಈ ಘಟನೆ ನಡೆದಿದೆ.
ಮದ್ಯ ನಿರಾಕರಿಸಿದ ಹಿನ್ನೆಲೆಯಲ್ಲಿ ವೈನ್ ಶಾಪ್‌ಗೆ ಬೆಂಕಿ ಹಚ್ಚಿದ ವ್ಯಕ್ತಿಯನ್ನು ವಿಶಾಖಪಟ್ಟಣಂ ಪೊಲೀಸರು ಬಂಧಿಸಿರುವ ಘಟನೆ ವಿಶಾಖಪಟ್ಟಣಂನ ಮಧುರ್ವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ. ಮಧು ಎಂಬ ವ್ಯಕ್ತಿ ಮಧುರವಾಡ ಬಡಾವಣೆಯ ವೈನ್ ಶಾಪ್‌ಗೆ ಹೋಗಿದ್ದಾರೆ. ಆದರೆ, ಆ ವೇಳೆ ವೈನ್‌ಶಾಪ್ ಮುಚ್ಚುವ ಸಮಯವಾದ್ದರಿಂದ ಅಂಗಡಿ ಸಿಬ್ಬಂದಿ ಮದ್ಯ ನೀಡುವುದನ್ನು ನಿರಾಕರಿಸಿದ್ದಾರೆ. ಇದರಿಂದ ಆರೋಪಿ ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ.
ಇದನ್ನು ಓದಿ: Hassan: ಎಣ್ಣೆ ಕುಡಿಯುವ ಬೆಟ್ ಕಟ್ಟಿ ಯಮರಾಜನ ಫ್ಲೈಟ್ ಹತ್ತಿದ ವ್ಯಕ್ತಿ!
ಅದರೆ, ವೈನ್ ಶಾಪ್‌ಗೆ ಎಚ್ಚರಿಕೆ ನೀಡಿ ಸ್ಥಳದಿಂದ ತೆರಳಿದ ವ್ಯಕ್ತಿ, ಇಷ್ಟಕ್ಕೆ ಸುಮ್ಮನಾಗದೆ, ಭಾನುವಾರ ಸಂಜೆ ಪೆಟ್ರೋಲ್ ಟ್ಯಾಂಕ್‌ನೊಂದಿಗೆ ಅಂಗಡಿಗೆ ಮರಳಿದ್ದಾರೆ. ಅಲ್ಲದೆ, ಅಂಗಡಿಯೊಳಗೆ ಮತ್ತು ಸಿಬ್ಬಂದಿಯ ಮೇಲೂ ಪೆಟ್ರೋಲ್ ಸುರಿದು ತಕ್ಷಣ ಬೆಂಕಿ ಹಚ್ಚಿದ್ದಾರೆ ಎಂದು ಈ ಸಂಬಂಧ ಪೋತಿನಮಲ್ಲಯ್ಯ ಪಾಲೆಂ ಇನ್ಸ್‌ಪೆಕ್ಟರ್ ರಾಮಕೃಷ್ಣ ಮಾಹಿತಿ ನೀಡಿದ್ದಾರೆ.
ಅಪ್ಪ-ಅಮ್ಮನಿಂದಾಗಿ ಕುಡಿತದ ದಾಸಳಾದೆ, ಹುಚ್ಚಿಯೂ ಆಗಿದ್ದೆ: ಶ್ರುತಿ ಹಾಸನ್ ಶಾಕಿಂಗ್ ಹೇಳಿಕೆ!
ಬಳಿಕ ಸಿಬ್ಬಂದಿ ಅಂಗಡಿಯಿಂದ ಓಡಿಹೋಗಿದ್ದು, ಬಚಾವಾಗಿದ್ದಾರೆ. ಆದರೆ ಅಂಗಡಿ ಸುಟ್ಟುಹೋಗಿದೆ. ಅಲ್ಲದೆ, ವೈನ್ ಶಾಪ್‌ನಲ್ಲಿದ್ದ ಕಂಪ್ಯೂಟರ್ ಮತ್ತು ಪ್ರಿಂಟರ್, ಮದ್ಯ ಸೇರಿದಂತೆ 1.5 ಲಕ್ಷ ರೂ. ಗೂ ಹೆಚ್ಚು ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 307 ಮತ್ತು 436 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದೂ ಇನ್ಸ್‌ಪೆಕ್ಟರ್ ರಾಮಕೃಷ್ಣ ತಿಳಿಸಿದ್ದಾರೆ. ಹಾಗೂ, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ: ಗೋವಾ-ತೆಲಂಗಾಣ ಖಾಸಗಿ ಬಸ್ಸೊಳಗೇ ಇತ್ತು ಮಿನಿ ಬಾರ್: ಖದೀಮರ ಖರ್ತನಾಕ್ ಐಡಿಯಾ..!
ಇದನ್ನೂ ಓದಿ: ಕುಡಿತೀರಾ? ಏನೂ ತಲೆಯೇ ಓಡ್ತಿಲ್ಲವೆಂದ್ರೆ ಆಲ್ಕೋಹಾಲ್ ನಿಲ್ಲಿಸಿ ನೋಡಿ!