ಹಳೇ ವೈಷಮ್ಯಕ್ಕೆ ಯುವಕನೋರ್ವನ ಬರ್ಬರ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಆದಿಜಾಂಬವನಗರದಲ್ಲಿ ನಡೆದಿದೆ. ಶಾನೂರು ಪೂಜಾರಿ (27) ಕೊಲೆಯಾದ ದುರ್ದೈವಿ. ಪೆಟ್ರೊಲ್ ಬಂಕ್‌ನಲ್ಲಿ ಕೆಲಸ ಮಾಡ್ತಿದ್ದ ಶಾನೂರು ಪೂಜಾರಿ. ಕೊಲೆ ಆಗ್ತಿದ್ದಂತೆ ಆರೋಪಿ ಮನೆಯ ಮೇಲೆ ಕಲ್ಲು ತೂರಿ ಗಲಾಟೆ ಮಾಡಿದ ಮತ್ತೊಂದು ಗುಂಪು.
ಬೆಳಗಾವಿ (ನ.13): ಹಳೇ ವೈಷಮ್ಯಕ್ಕೆ ಯುವಕನೋರ್ವನ ಬರ್ಬರ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಆದಿಜಾಂಬವನಗರದಲ್ಲಿ ನಡೆದಿದೆ.
ಶಾನೂರು ಪೂಜಾರಿ (27) ಕೊಲೆಯಾದ ದುರ್ದೈವಿ. ಪೆಟ್ರೊಲ್ ಬಂಕ್‌ನಲ್ಲಿ ಕೆಲಸ ಮಾಡ್ತಿದ್ದ ಶಾನೂರು ಪೂಜಾರಿ. ಕೊಲೆ ಆಗ್ತಿದ್ದಂತೆ ಆರೋಪಿ ಮನೆಯ ಮೇಲೆ ಕಲ್ಲು ತೂರಿ ಗಲಾಟೆ ಮಾಡಿದ ಮತ್ತೊಂದು ಗುಂಪು. ಘಟನೆಯಲ್ಲಿ ಬೈಕ್, ಕಾರು ಜಖಂ, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಕೊಲೆ ಮಾಡಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಆರೋಪಿಗಳ ಬಂಧನಕ್ಕೆ ಪಟ್ಟು ಹಿಡಿದಿರುವ ಉದ್ವಿಗ್ನರು. ಉದ್ವಿಗ್ನರನ್ನು ಸಮಾಧಾನ ಪಡಿಸಲು ಪೊಲೀಸರ ಹರಸಾಹಸ. ಪೊಲೀಸ್ ಠಾಣೆ ಎದುರು ನೂರಾರು ಸಂಖ್ಯೆಯಲ್ಲಿ ಯುವಕರು ಜಮಾವಣೆ.
ಸಕ್ರೆಬೈಲು: ಭಾನುಮತಿ ಆನೆಬಾಲಕ್ಕೆ ಮಚ್ಚಿನೇಟು; ಇಬ್ಬರು ಸಿಬ್ಬಂದಿ ಸಸ್ಪೆಂಡ್