ಹೊತ್ತಿ ಉರಿದ ಕಾರಿನಿಂದ ಇಬ್ಬರು ಮಕ್ಕಳ ರಕ್ಷಿಸಿದ ಹೀರೋ, ಮರುಕ್ಷಣದಲ್ಲೆ ವಾಹನ ಸ್ಫೋಟ!

By Suvarna NewsFirst Published May 28, 2023, 4:19 PM IST
Highlights

ಚಲಿಸುತ್ತಿರುವ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಕಾರು ನಿಲ್ಲಿಸಿದ ಪೋಷಕರಿಗೆ ತಮ್ಮ ಮಕ್ಕಳನ್ನು ಕಾರಿನಿಂದ ರಕ್ಷಿಸಲು ಇನ್ನಿಲ್ಲದ ಹರಸಾಹಸ ಪಟ್ಟರು ಸಾಧ್ಯವಾಗಲಿಲ್ಲ. ಇದೇ ದಾರಿಯಲ್ಲಿ ಬಂದ ವ್ಯಕ್ತಿ ತಕ್ಷಣ ನೆರೆವಿಗೆ ಧಾವಿಸಿ ಬೆಂಕಿಯ ಜ್ವಾಲೆ ನಡುವೆ ಮಕ್ಕಳ ರಕ್ಷಿಸಿದ್ದಾರೆ. ಮಕ್ಕಳನ್ನು ರಕ್ಷಿಸಿದ ಬೆನ್ನಲ್ಲೇ ಕಾರು ಸ್ಫೋಟಗೊಂಡಿದೆ.

ಅರಿಜೋನಾ(ಮೇ.28): ಚಲಿಸುತ್ತಿರುವ ವಾಹನದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ವರದಿಯಾಗುತ್ತಿದೆ. ಹೀಗೆ ಪೋಷಕರು ತಮ್ಮ ಇಬ್ಬರು ಮಕ್ಕಳೊಂದಿಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಇದ್ಧಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಲು ಆರಂಭಿಸಿದೆ. ಕಾರು ನಿಲ್ಲಿಸಿದ ಪೋಷಕರು ಹರಸಾಹಸ ಪಟ್ಟು ಹೊರಬಂದು ಮಕ್ಕಳ ರಕ್ಷಿಸಲು ಪರದಾಡಿದ್ದಾರೆ. ಆದರೆ ಇದೇ ದಾರಿಯಲ್ಲಿ ಕಾರಿನಲ್ಲಿ ಸಾಗುತ್ತಿದ್ದ ವ್ಯಕ್ತಿ ತಕ್ಷಣವೇ ನರೆವಿಗೆ ಧಾವಿಸಿ ಮಕ್ಕಳನ್ನು ರಕ್ಷಿಸಿದ್ದಾನೆ. ಮಕ್ಕಳನ್ನು ಹೊರಕ್ಕೆ ತಂದ ಬೆನಲ್ಲೇ ಕಾರು ಸ್ಫೋಟಗೊಂಡಿದೆ. ಅದೃಷ್ಠವಶಾತ್ ಎಲ್ಲರೂ ಸುರಕ್ಷಿತವಾಗಿದ್ದಾರೆ. ಈ ಘಟನೆ ಅಮೆರಿದ ಅರಿಜೋನಾದಲ್ಲಿ ನಡೆದಿದೆ.

ಪೋಷಕರಿಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಪ್ರಯಾಣ ಆರಂಭಿಸಿದ್ದರು. ಹಲವು ದೂರ ಸಾಗಿದ್ದಾರೆ. ವೇಗವಾಗಿ ಸಾಗುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಒಂದೇ ಸಮನೆ ಬೆಂಕಿ ಜ್ವಾಲೆಯಾಗಿ ಕಾರು ತುಂಬಾ ಆವರಿಸಲು ಆರಂಭಿಸಿದೆ. ಕಾರು ನಿಲ್ಲಿಸಿದ ಪೋಷಕರು ಹರಸಾಹಸ ಪಟ್ಟು ಹೊರಬಂದು ಮಕ್ಕಳನ್ನು ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನ ಡೋರ್ ಲಾಕ್ ಆಗಿದೆ. ಹಿಂಬದಿ ಸೀಟಿನಲ್ಲಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಲು ಸಾಧ್ಯವಾಗದೆ ಸಹಾಯಕ್ಕಾಗಿ ಕಿರುಚಾಡುತ್ತಿದ್ದರು. ಮಕ್ಕಳ ತಂದೆ ಕಲ್ಲಿನಿಂದ ಕಾರಿನ ಗಾಜು ಒಡೆಯುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ.

Video viral: ಸರ್ಕಾರಿ ಬಸ್‌ನಲ್ಲಿ ಮಹಿಳೆಯ ಜಡೆ ಮುಟ್ಟಿ ತೀಟೆ, ಕಾಮುಕನ ಬೆನ್ನು ಬಿದ್ದ ಖಾಕಿ!

ಇದೇ ದಾರಿಯಲ್ಲಿ 30 ವರ್ಷದ ಸ್ಯಾಮ್  ಹೈಲರ್ ತನ್ನ ಪತ್ನಿ ಜೊತೆ ಕಾರಿನಲ್ಲಿ ಜಾಲಿ ರೈಡ್ ಹೊರಟ್ಟಿದ್ದ. ನವಜೋ ಕಂಟ್ರಿ ತಲುಪುತ್ತಿದ್ದಂತೆ ಕಾರೊಂದು ಹೊತ್ತಿ ಉರಿಯುತ್ತಿರುವ ದೃಶ್ಯ ಕಣ್ಣಿಗೆ ಬಿದ್ದಿದೆ. ತಕ್ಷಣ ಕಾರು ನಿಲ್ಲಿಸಿದ ಸ್ಯಾಮ್ ಹೈಲರ್ ಹೊತ್ತಿ ಉರಿಯುತ್ತಿದ್ದ ಕಾರಿನತ್ತ ಧಾವಿಸಿದ್ದಾನೆ. ಕಾರಿನ ಹಿಂಭಾಗದ ಗಾಜನ್ನು ಕಲ್ಲಿನಿಂದ ಒಡೆದ ಹೈಲರ್, ಕಾರಿನೊಳಕ್ಕೆ ಹೊಕ್ಕಿ ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾನೆ. ಬೆಂಕಿಯ ಜ್ವಾಲೆ ನಡುವೆ ಮಕ್ಕಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾನೆ.

ಇಬ್ಬರು ಮಕ್ಕಳು ಸೀಟ್ ಬೆಲ್ಟ್ ಹಾಕಿದ ಕಾರಣ ಕದಲಲು ಸಾಧ್ಯವಾಗಿಲ್ಲ. ಬೆಂಕಿ ಜ್ವಾಲೆ, ಹೊಗೆ, ಚೀರಾಟ, ಆತಂಕದಿಂದ ಮಕ್ಕಳು ಅಸ್ವಸ್ಥರಾಗಿದ್ದರು.  ಇತ್ತ ಮಕ್ಕಳನ್ನು ರಕ್ಷಿಸಿದ ಹೈಲರ್ ತಾನು ಹರಸಾಹಸ ಪಟ್ಟು ಹೊರಬಂದ ಬೆನ್ನಲ್ಲೇ ಕಾರು ಸ್ಫೋಟಗೊಂಡಿದೆ. ಕೆಲವೇ ಸೆಕೆಂಡ್‌ಗಳ ಅಂತರದಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೈಲರ್ ಸಾಹಸಕ್ಕೆ 2 ವರ್ಷದ ಹಾಗೂ ಮೂರ ವರ್ಷ ಇಬ್ಬರು ಹೆಣ್ಣುಮಕ್ಕಳು ಸುರಕ್ಷಿತವಾಗಿದ್ದಾರೆ. ಇತ್ತ ಹೈಲರ್ ಸಣ್ಣ ಪುಟ್ಟ ಗಾಯದೊಂದಿಗೆ ಸುರಕ್ಷಿತವಾಗಿದ್ದಾನೆ.

ಹೆಂಡ್ತಿ ಕೋಳಿ ಸಾರು ಮಾಡ್ಲಿಲ್ಲ ಅನ್ನೋ ಸಿಟ್ಟಿಗೆ ನೇಣು ಬಿಗಿದು ಸಾವು ಕಂಡ ಪತಿ!

ಹೈಲರ್ ಧೈರ್ಯ ಹಾಗೂ ಸಾಹಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕಾರಿಗೆ ಬೆಂಕಿ ಹೊತ್ತಿಕೊಂಡ ಸ್ಥಳದಲ್ಲಿ ಯಾವುದೇ ಮೊಬೈಲ್ ನೆಟ್‌ವರ್ಕ್ ಇರಲಿಲ್ಲ. ತುರ್ತು ಸೇವೆಗಳೂ ಲಭ್ಯವಿರಲಿಲ್ಲ. ಆದರೆ ಹೈಲರ್ ಸಾಹಸದಿಂದ ಎಲ್ಲರೂ ಸುರಕ್ಷಿತವಾಗಿದ್ದಾರೆ. 

click me!