ಸ್ನೇಹಿತರೊಂದಿಗೆ ಭಾನುವಾರ ಬೆಳಗ್ಗೆ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಆನೇಕಲ್ ತಾಲೂಕಿನ ಮಹಲ್ ಚೌಡದೇನಹಳ್ಳಿ ಕೆರೆಯಲ್ಲಿ ನಡೆದಿದೆ.
ಬೆಂಗಳೂರು (ಮೇ 28): ಸ್ನೇಹಿತರೊಂದಿಗೆ ಭಾನುವಾರ ಬೆಳಗ್ಗೆ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಆನೇಕಲ್ ತಾಲೂಕಿನ ಮಹಲ್ ಚೌಡದೇನಹಳ್ಳಿ ಕೆರೆಯಲ್ಲಿ ನಡೆದಿದೆ. ಇನ್ನು ಸ್ನೇಹಿತನ ಪ್ರಾಣ ಹೋಗುತ್ತಿದ್ದರೂ ಈಜು ಬಾರದ ಸ್ನೇಹಿತರು ಅಸಾಯಕರಾಗಿ ನಿಂತಿದ್ದರು.
ಬೇಸಿಗೆ ಹಿನ್ನೆಲೆಯಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಇರುವ ಹಿನ್ನೆಯಲ್ಲಿ ಮಕ್ಕಳನ್ನು ಮನೆಯಕ್ಕಿ ನೋಡಿಕೊಳ್ಳುವುದು ತುಂಬಾ ಕಷ್ಟವಾಗಿದೆ. ಇಲ್ಲೂ ಕೂಡ ಕಾಲೇಜು ಓದುತ್ತಿದ್ದ ಯುವಕ ಕಾಲೇಜಿಗೆ ರಜೆ ಇರುವ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ತನ್ನ ಸ್ನೇಹಿತರೊಂದಿಗೆ ಕೆರೆಗೆ ಹೋಗಿದ್ದಾರೆ. ಆದರೆ, ಯುವಕನಿಗೆ ಸರಿಯಾಗಿ ಈಜು ಬರುತ್ತಿರಲಿಲ್ಲ. ಕೆರೆಯ ದಡದ ಬಳಿಯೇ ಇದ್ದು ಮೀನು ಹಿಡಿಯುತ್ತಿರುವಾಗ ನೀರಿನಲ್ಲಿ ಇಳಿದಿದ್ದ ಯುವಕ ಆಳ ಇರುವುದರ ಬಗ್ಗೆ ಮಾಹಿತಿ ಇಲ್ಲದೇ ಮುಂದಕ್ಕೆ ಹೋಗಿದ್ದಾನೆ. ಈ ವೇಳೆ ಆತ ಮುಳುಗಿದ್ದು, ಸ್ನೇಹಿತರಿಗೂ ಸರಿಯಾಗಿ ಈಜು ಬಾರದ ಹಿನ್ನೆಲೆಯಲ್ಲಿ ಯುವಕನನ್ನು ರಕ್ಷಣೆ ಮಾಡಲು ಮುಂದಾಗಿಲ್ಲ. ಕೆಲವೇ ಕ್ಷಣಗಳಲ್ಲಿ ಯುವಕ ಮೃತಪಟ್ಟಿದ್ದಾನೆ.
Bengaluru: ಒಂಟಿ ಮಹಿಳೆಯ ಕೈ-ಕಾಲು ಕಟ್ಟಿ ಉಸಿರು ಗಟ್ಟಿಸಿ ಹತ್ಯೆ, ಮನೆ ದರೋಡೆ!
ಈಜು ಬಾರದಿದ್ದರೂ ಆಳಕ್ಕೆ ಹೋದ ಯುವಕ: ಚೌಡದೇನಹಳ್ಳಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಯುವಕನನ್ನು ಗೋಪಿ (19) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಸ್ನೇಹಿತರ ಜೊತೆ ಮೀನು ಹಿಡಿಯಲು ಹೋಗಿದ್ದ ಸಮಯದಲ್ಲಿ ದುರಂತ ಅಂತ್ಯವಾಗಿದ್ದಾರೆ. ಇನ್ನು ಗೋಪಿ ನೀರಿನಲ್ಲಿ ಮುಳುಗಿದ ಬೆನ್ನಲ್ಲೇ ದೂರದಿಂದಲೇ ರಕ್ಷಣೆಗೆ ಕರೆದರೂ ಯಾರೂ ಸಿಗದಿದ್ದಾಗ ಯುವಕನ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ನಂತರ, ಅಗ್ನಿಶಾಲ=ಮಕದಳದ ಸಿಬ್ಬಂದಿ ಕೆರೆಯಲ್ಲಿ ಮುಳುಗಿದ್ದ ಯುವಕನ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ.
ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ: ಮನೆಯಲ್ಲಿ ಬೆಳೆದು ನಿಂತಿದ್ದ ಮಗ ಮನೆಗೆ ಆಸರೆ ಆಗಬಹುದು ಎಂದು ನಿರೀಕ್ಷೆಯಲ್ಲಿದ್ದ ಮಗ ಗೋಪಿ ಈಗ ಕಣ್ಣಮುಂದೆಯೇ ಸಾವನ್ನಪ್ಪಿ ಹೆಣವಾಗಿದ್ದಾನೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಪೋಷಕರ ಆಕ್ರಂದ ಮುಗಿಲು ಮುಟ್ಟಿತ್ತು. ಮೃತದೇಹದ ಮುಂದೆ ಕುಟುಂಬಸ್ಥರು ರೋದನೆಪಡುತ್ತಿದ್ದರು. ಇನ್ನು ಈ ಘಟನೆ ಕುರಿತಂತೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಬೆಂಗಳೂರು: ಪಿಜಿಯಲ್ಲಿದ್ದ ಯುವಕ ಆತ್ಮಹತ್ಯೆಗೆ ಶರಣು, ಕಾರಣ ನಿಗೂಢ?
ಈಜುಕೊಳದಲ್ಲಿ ಮುಳುಗಿ ಬಾಲಕ ಸಾವು : ಪೀಣ್ಯ ದಾಸರಹಳ್ಳಿ(ಮೇ 28): ಈಜು ಕೊಳದಲ್ಲಿ ಈಜಾಡುತ್ತಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಾದನಾಯಕಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಂಚೆಪಾಳ್ಯದಲ್ಲಿ ನಡೆದಿದೆ. ಮುನೇಶ್ವರ ನಗರ ನಿವಾಸಿ ಗಿರೀಶ್, ನಾಗಮ್ಮ ದಂಪತಿ ಪುತ್ರ ಧನುಷ್ (16) ಸಾವನ್ನಪ್ಪಿರುವ ದುರ್ದೈವಿ. ಅಂಚೆ ಪಾಳ್ಯದಲ್ಲಿರುವ ಆರ್.ಡಿ.ಕ್ಲಬ್‌ನ ಈಜುಕೊಳದಲ್ಲಿ ಈಜಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈಜುಕೊಳದ ಮಾಲಿಕ ಪರಾರಿ ಆಗಿದ್ದಾನೆ. ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ತಂದೆ ಗಾರೆ ಕೆಲಸ ಮಾಡುತ್ತಿದ್ದರು. ಮೂಲತಃ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ನಲ್ಲಕಮ್ಮನಹಳ್ಳಿ ಗ್ರಾಮದ ಗಿರೀಶ್ ತಮ್ಮ ಕುಟುಂಬದೊಂದಿಗೆ ಜೀವನೋಪಾಯಕ್ಕಾಗಿ ಬೆಂಗಳೂರಿನ ಬಾಗಲಗುಂಟೆಯ ಮುನೇಶ್ವರ ನಗರದಲ್ಲಿ ವಾಸಿಸುತ್ತಿದ್ದರು.