
ಭೋಪಾಲ್: ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ಪತಿಯೋರ್ವ ತನ್ನ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ (Madhya Pradesh) ಭೋಪಾಲ್ ನಗರದಲ್ಲಿ ನಡೆದಿದೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಭೋಪಾಲ್ (Bhopal) ನಗರದ ಕೋತ್ವಾಲಿ ಪೊಲೀಸ್ ಠಾಣೆ (Kotwali police station) ವ್ಯಾಪ್ತಿಯ ಕಬೀರ್ ವಾಲಿ ಮಸ್ಜಿದ್ ಸಮೀಪ ಈ ಘಟನೆ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ಕಮೀಷನರ್ ರಾಮ್‌ಸ್ನೇಹಿ ಮಿಶ್ರಾ (Ramsnehi Mishra) ಹೇಳಿದ್ದಾರೆ. ಆರೋಪಿ ರಾಜಸ್ತಾನ ಮೂಲದ ರಾಯಿಸ್ ಖಾನ್ ಪತ್ನಿ ತನ್ನ 22 ವರ್ಷದ ಮುಸ್ಕಾನ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪತಿಯೊಂದಿಗೆ ಮುಸ್ಕಾನ್ ತೆರಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪತಿ ಈ ಭಯಾನಕ ಕೃತ್ಯವೆಸಗಿದ್ದಾನೆ ಎಂದು ತಿಳಿದು ಬಂದಿದೆ.
Bengaluru Crime: ಶೀಲ ಶಂಕಿಸಿ ಮಕ್ಕಳ ಮುಂದೆಯೇ ಪತ್ನಿಯ ಕೊಲೆ: ಆರೋಪಿ ಅರೆಸ್ಟ್
ಘಟನೆಯ ಬಳಿಕ ಆರೋಪಿ ರಾಯಿಸ್ ಖಾನ್ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಮೂರು ವರ್ಷಗಳ ಹಿಂದೆ ಇವರಿಬ್ಬರ ಮದುವೆ ನಡೆದಿತ್ತು. ಮದುವೆ ಆರಂಭದಿಂದಲೂ ರಾಯಿಸ್ ಖಾನ್ ಪತ್ನಿ ಮುಸ್ಕಾನ್‌ಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಲೇ ಇದ್ದ. ಹೀಗಾಗಿ ಈತನ ಕಿರುಕುಳದಿಂದ ಬೇಸತ್ತ ಆಕೆ ಎಂಟು ತಿಂಗಳ ಹಿಂದಷ್ಟೇ ಗಂಡನನ್ನು ಬಿಟ್ಟು ರಾಜಸ್ಥಾನದಿಂದ ತವರು ಮನೆ ಭೋಪಾಲ್‌ಗೆ ಬಂದು ಸೇರಿದ್ದಳು. ಅಲ್ಲಿ ಒಂದು ವೃದ್ಧಾಶ್ರಮದಲ್ಲಿ ಆಕೆ ಕೆಲ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಬುಧವಾರ ಏನೋ ಕೆಲಸದ ನಿಮಿತ್ತ ಮನೆಯಿಂದ ಹೊರಗಡೆ ತೆರಳಿದ್ದ ಮುಸ್ಕಾನ್‌ಗೆ ಅಲ್ಲಿ ಪತಿ ರಾಯಿಸ್ ಖಾನ್ ಸಿಕ್ಕಿದ್ದಾನೆ. ಅಲ್ಲೇ ಆಕೆಯ ಕೈಯನ್ನು ಹಿಡಿದುಕೊಂಡ ಆಕೆ ರಾಜಸ್ಥಾನಕ್ಕೆ(Rajasthan) ಬರುವಂತೆ ಆಕೆಯನ್ನು ಒತ್ತಾಯಿಸಿದ್ದಾನೆ. ಆದರೆ ಆಕೆ ಆತನೊಂದಿಗೆ ತೆರಳಲು ನಿರಾಕರಿಸಿದ್ದಾಳೆ. ಇದಾದ ಬಳಿಕ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ರಾಯಿಸ್ ಖಾನ್ (Raees Khan) ಆಕೆಗೆ ತನ್ನ ಬಳಿ ಇದ್ದ ಪೆಟ್ರೋಲ್ ಸುರಿದ್ದು, ಲೈಟರ್‌ನಿಂದ ಬೆಂಕಿ ಹಚ್ಚಿದ್ದಾನೆ ಎಂದು ಎಸಿಪಿ ಮಿಶ್ರಾ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಆರೋಪಿ ರಾಜಸ್ತಾನದಲ್ಲಿ ಮೂಟೆ ಹೊರುವ ಕೆಲಸ ಮಾಡುತ್ತಿದ್ದ.
Mandya: ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಲೆಗೈದ ಪಾಪಿ ಪತಿ!
ದೇಹವನ್ನು ಸುಡುತ್ತಿರುವ ಬೆಂಕಿಯ ಉರಿ ತಡೆಯಲಾಗದೇ ಆಕೆ ಕಿರುಚಲು ಶುರು ಮಾಡಿದಾಗ ದಾರಿಯಲ್ಲಿ ಹೋಗುತ್ತಿರುವವರು ಬಂದು ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ದುರಂತದಲ್ಲಿ ಮಹಿಳೆಗೆ ಶೇಕಡಾ ಎಂಟರಷ್ಟು ಸುಟ್ಟ ಗಾಯಗಳಾಗಿದ್ದು, ಸರ್ಕಾರ ನಡೆಸುವ ಹಮಿದೀಯಾ ಆಸ್ಪತ್ರೆಯಲ್ಲಿ (Hamidia Hospital)ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆ ದುರಂತದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯ ಕುತ್ತಿಗೆ ಬಿಗಿದು ಮಕ್ಕಳ ಮುಂದೆಯೇ ಪಾಪಿ ಪತಿ ಕೊಲೆಗೈದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗೆಂಡೆಹೊಸಹಳ್ಳಿ ಗ್ರಾಮದಲ್ಲಿ ನಿನ್ನೆ ನಡೆದಿದೆ. ಯೋಗಿತಾ (27) ಗಂಡನಿಂದಲೇ ಕೊಲೆಯಾಗಿದ್ದು, ಪತಿ ರವಿ, ಮಕ್ಕಳ ಮುಂದೆಯೇ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ರವಿ, ಪತ್ನಿಗೆ ಮನೆಯಿಂದ ಹೋಗುವಂತೆ ಹಿಂಸೆ ನೀಡ್ತಿದ್ದ ಎನ್ನಲಾಗಿದೆ. ಸಾಕಷ್ಟು ಬಾರಿ ನ್ಯಾಯ ಪಂಚಾಯಿತಿಯನ್ನು ಗ್ರಾಮದ ಮುಖಂಡರು ನಡೆಸಿದ್ದರು. ನಿನ್ನೆ (ಬುಧವಾರ) ರಾತ್ರಿ ಮಕ್ಕಳಿಗೆ ಪಾನಿಪುರಿ ತಿನಿಸುತ್ತಿದ್ದಾಗ ಮತ್ತೆ ಗಂಡ ಹೆಂಡತಿ ನಡುವೆ ಜಗಳ ಆರಂಭವಾಗಿದೆ.
ಬಳಿಕ ಪತ್ನಿ ಯೋಗಿತಾಗೆ ಮನಬಂದಂತೆ ಹೊಡೆದು ರೂಂ ಒಳಗೆ ರವಿಗೌಡ ಎಳೆದೊಯ್ದಿದ್ದಾನೆ. ತಕ್ಷಣ ಜಗಳದ ಬಗ್ಗೆ ಪಕ್ಕದ ಮನೆಯವರಿಗೆ ಮಕ್ಕಳು ವಿಚಾರ ತಿಳಿಸಿದ್ದು, ಅವರು ಬರುವಷ್ಟರಲ್ಲಿ ಪತ್ನಿಯನ್ನು ರವಿ ಕೊಲೆ ಮಾಡಿದ್ದಾನೆ. ಅಲ್ಲದೇ ಈ ವಿಚಾರವನ್ನು ಯಾರಿಗೂ ಹೇಳಬೇಡಿ ಎಂದು ಮಕ್ಕಳಿಗೆ ಹೇಳಿ ರವಿ ಪರಾರಿಯಾಗಿದ್ದಾನೆ. ಇನ್ನು ಮನೆ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಕಣ್ಣ ಮುಂದೆಯೇ ತಾಯಿ ಕಳೆದುಕೊಂಡು ಇಬ್ಬರು ಮಕ್ಕಳು ತಬ್ಬಲಿಯಾಗಿದ್ದಾರೆ. ಸದ್ಯ ಪರಾರಿಯಾಗಿರುವ ರವಿಯನ್ನ ಸ್ಥಳಕ್ಕೆ ಕರೆಸುವಂತೆ ಯೋಗಿತಾ ಪೋಷಕರ ಪಟ್ಟು ಹಿಡಿದಿದ್ದು, ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ