ತಮಾಷೆಗೆಂದು ಅಂಡರ್‌ವೇರ್ ಕದ್ದು ಹಾಕಿಕೊಂಡ.. ನಂತರ ನಡೆದಿದ್ದು ಘೋರ!

Published : Feb 26, 2021, 05:53 PM IST
ತಮಾಷೆಗೆಂದು ಅಂಡರ್‌ವೇರ್ ಕದ್ದು ಹಾಕಿಕೊಂಡ.. ನಂತರ ನಡೆದಿದ್ದು ಘೋರ!

ಸಾರಾಂಶ

ಕೊಲೆಯಲ್ಲಿ ಅಂತ್ಯವಾದ ಅಂಡರ್ ವೇರ್ ಜಗಳ/ ತಮಾಷೆ ಮಾಡಲೆಂದು ಬೇರೆಯವನ ಒಳ ಉಡುಪು ಧರಿಸಿದ್ದ/  ಒಂದೆ ಕೋಣೆಯಲ್ಲಿ ವಾಸವಿದ್ದ ಇಬ್ಬರ ನಡುವೆ ವಾಗ್ವಾದ/ ಚಾಕುವಿನಿಂದ ಹತ್ಯೆ

ಕಾನ್ಪುರ(ಫೆ. 26) ಇದು ಒಳ ಉಡುಪಿನ ವಿಚಾರ. ಆದರೆ ಅಂತ್ಯವಾಗಿದ್ದು ಮಾತ್ರ ಕೊಲೆಯಲ್ಲಿ!  ತನ್ನ ಅಂಡರ್ ವೇರ್ ಕದ್ದು ಅದನ್ನು ಹಾಕಿಕೊಂಡಿದ್ದಾನೆ ಎಂಬ ಕಾರಣಕ್ಕೆ ಫ್ಯಾಕ್ಟರಿಯ ಕೆಲಸಗಾರನೊಬ್ಬ ತನ್ನ ಸಹೋದ್ಯೋಗಿಯನ್ನು ಹತ್ಯೆ ಮಾಡಿದ್ದಾನೆ.

ಆರೋಪಿಯನ್ನು ಬಾಂಡಾ ಜಿಲ್ಲೆಯ ಅಜಯ್ ಕುಮಾರ್ ಎಂದು ಗುರುತಿಸಲಾಗಿದೆ ಬಹ್ರೇಚ್‌ನ ವಿವೇಕ್ ಶುಕ್ಲಾ  ಹತ್ಯೆಗಿಡಾದವ.

ಕಾನ್ಪುರ್ ದೇಹತ್ ಜಿಲ್ಲೆಯ ಕಾರ್ಖಾನೆಯ ಕಾರ್ಮಿಕರು ಇಬ್ಬರೂ ಕಾರ್ಖಾನೆಯ ಆವರಣದಲ್ಲಿ ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದರು. ಕುಮಾರ್ ಅವರ ಒಳ ಉಡುಪುಗಳನ್ನು ಕದ್ದು ಧರಿಸಿ ಕುಚೇಷ್ಟೆ ಮಾಡಲು ಶುಕ್ಲಾ ಪ್ರಯತ್ನಿಸಿದ್ದಾರೆ. ಕುಮಾರ್ ಅವರಿಗೆ ಈ ವಿಷಯ  ಗೊತ್ತಾದಾಗ ಗಲಾಟೆ ಆರಂಭವಾಗಿದೆ..

ಬಾಡಿಗೆ ಮನೆ ಸುಂದರಿ.. ಹೆಂಡತಿ ಮೊಬೈಲ್‌ ಗೆ  ಬಂತು ಗಂಡನ ರಾಸಲೀಲೆ ವಿಡಿಯೋ

ಸಿಟ್ಟಿಗೆದ್ದ ಕುಮಾರ್  ತರಕಾರಿ ಕತ್ತರಿಸುವ ಚಾಕುವಿನಿಂದ ವಿವೇಕ್ ಶುಕ್ಲಾ ಮೇಲೆ ದಾಳಿ ಮಾಡಿದ್ದಾನೆ.  ನಂತರ ಅಲ್ಲಿಂದ ಜಾಗ ಖಾಳಿ ಮಾಡಿದ್ದಾನೆ. ಗಂಭೀರ ಗಾಯಗೊಂಡಿದ್ದ ವಿವೇಕ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ದಾರಿ ಮಧ್ಯವೇ ಪ್ರಾಣ ಪಕ್ಷಿ ಹಾರಿಹೋಗಿರುವುದಾಘಿ ವೈದ್ಯರು ತಿಳಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪ್ಯಾಕಟ್ರಿ ಮಾಲೀಕ ಸೇರಿದಂತೆ ಉಳಿದ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್