ಅಡ್ರೆಸ್ ಕೇಳುವ ನೆಪದಲ್ಲಿ ಮಹಿಳೆ ಹತ್ತಿರ ಬಂದ ವ್ಯಕ್ತಿ/ ಮಹಿಳೆ ಎದುರೆ ಹಸ್ತಮೈಥುನ/ ಬಾಣಸವಾಡಿಯಲ್ಲಿ ಘಟನೆ/ ಮಾಸ್ಕ್ ಹಾಕಿದ ಕಾರಣ ಮುಖ ಗುರುತಿಸಲು ಸಾಧ್ಯವಾಗಿಲ್ಲ
ಬೆಂಗಳೂರು(ಜೂ. 30) ಮುಂಬೈ ರೈಲ್ವೆ ನಿಲ್ದಾಣದಲ್ಲಿ ಯುವಕನೊಬ್ಬ ಮಹಿಳೆ ಎದುರೆ ಹಸ್ತ ಮೈಥುನ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಬೆಂಗಳೂರಿನ ಸರದಿ. ವ್ಯಕ್ತಿಯೊಬ್ಬ ತನ್ನ ಮುಂದೆನೆ ಹಸ್ತಮೈಥುನ ಮಾಡಿಕೊಂಡಿದ್ದಾನೆ ಎಂದು 31 ಪತ್ರಕರ್ತೆ ದೂರು ದಾಖಲಿಸಿದ್ದಾರೆ.
ಬಾಣಸವಾಡಿಯಿಂದ ಘಟನೆ ವರದಿಯಾಗಿದೆ. ಸ್ಕೂಟರ್ ನಲ್ಲಿ ಬಂದ ವ್ಯಕ್ತಿ ನನ್ನ ಬಳಿ ಅಡ್ರೆಸ್ ಕೇಳಿದ್ದಾನೆ. ಇದಾದ ಮೇಲೆ ಇದ್ದಕ್ಕಿದ್ದಂತೆ ಹಸ್ತಮೈಥುನ ಮಾಡೊಕೊಳ್ಳಲು ಶುರುಹಚ್ಚಿಕೊಂಡಿದ್ದಾನೆ ಎಂದು ಲೇಡಿ ಜರ್ನಲಿಸ್ಟ್ ದೂರು ನೀಡಿದ್ದಾರೆ.
ಡಿಫರೆಂಟಾಗಿ ಹಸ್ತಮೈಥುನ ಮಾಡಲಿಕ್ಕೆ ಹೋಗಿ ಒಳಸೇರಿದ ಕೇಬಲ್
ಕಳೆದ ಶನಿಉವಾರ ಬೆಳಗ್ಗೆ 10 ಗಂಟೆ ವೇಳೆ ಮನೆ ಗೆ ಬೇಕಾದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಪತ್ರಕರ್ತೆ ವಾಪಸ್ ಆಗುತ್ತಿದ್ದರು. ಈ ವೇಳೆ ಹತ್ತಿರಕ್ಕೆ ಬಂದ ವ್ಯಕ್ತಿ ಅಡ್ರೆಸ್ ಕೇಳಿದ್ದಾನೆ. ಈ ವೇಳೆ ಆತನ ಒಂದು ಕೈ ಸೊಂಟದ ಬಳಿ ಇದ್ದುದ್ದನ್ನು ಮಹಿಳೆ ಗಮನಿಸಿದ್ದಾಳೆ.
ಅಡ್ರೆಸ್ ಹೇಳುವ ವೇಳೆ ಮಹಿಳೆ ವ್ಯಕ್ತಿಯ ಮುಖ ನೋಡುತ್ತಿದ್ದರು. ಇದೇ ವೇಳೆ ವ್ಯಕ್ತಿ ಹಸ್ತಮೈಥುನಕ್ಕೆ ಶುರು ಹಚ್ಚಿಕೊಂಡಿದ್ದಾನೆ. ಮಾಸ್ಕ್ ಹಾಕಿಕೊಂಡ ಕಾರಣ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗಿಲ್ಲ. ಹಸ್ತಮೈಥುನ ಅರಿವೆ ಬರುತ್ತಿದ್ದಂತೆ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ. ರಾಮಮೂರ್ತಿನಗರ ಪೊಲೀಸರು ಸಿಸಿಟಿವಿ ಆಧಾರದಲ್ಲಿ ಆರೋಪಿಗೆ ಬಲೆ ಬೀಸಿದ್ದಾರೆ.