ಬೆಂಗಳೂರಿನಲ್ಲೊಂದು ಘೋರ ಕೃತ್ಯ. ಹೆತ್ತ ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ/ ನಿದ್ರೆ ಮಾತ್ರೆ ನೀಡಿ ರೇಪ್ ಮಾಡಿದ ತಂದೆ/ ಸಹಾಯಕ್ಕೆ ಬಾರದ ಮಲತಾಯಿ
ಬೆಂಗಳೂರು (ಜೂ. 29) ಇದೊಂದು ಘೋರ ದುರಂತದ ಕತೆ. 40 ವರ್ಷದ ತಂದೆ ತನ್ನ 19 ವರ್ಷದ ಮಗಳನ್ನೇ ರೇಪ್ ಮಾಡಿದ್ದಾನೆ.
ಶೀತ, ಥಂಡಿಗೆಂದು ಮಾತ್ರೆ ನೀಡುವ ನೆಪದಲ್ಲಿ ನಿದ್ರೆ ಮಾತ್ರೆ ನೀಡಿ ಕೃತ್ಯ ಎಸಗಿದ್ದಾನೆ. ಬೆಂಗಳೂರು ಹೊರವಲಯದ ಹರಳೂರುನಲ್ಲಿ ಘಟನೆ ನಡೆದಿದೆ.
ಜೂನ್ 23 ರಂದು ಘಟನೆ ನಡೆದಿದ್ದು ತನ್ನಮಲತಾಯಿಯೂ ಸಹಾಯಕ್ಕೆ ಬಾರದಿದ್ದಾಗ ಯುವತಿ ಆತ್ಮಹತ್ಯೆಗೂ ಯತ್ನಿಸಿದ್ದಾರೆ. ಶೌಚಾಲಯ ಕ್ಲೀನ್ ಮಾಡುವ ಕ್ರಿಮಿನಾಶಕ ಸೇವಿಸಿ ಯುವತಿ ಪೊಲೀಶ್ ಸ್ಟೇಶನ್ ಗೆ ತೆರೆಳಿದ್ದಾರೆ.
'ರೇಪ್ ವೇಳೆ ನಿದ್ರಿಸುತ್ತಿದ್ದೆ' ಭಾರತೀಯ ಮಹಿಳೆ ಪ್ರತಿಕ್ರಿಯೆ ಇದಲ್ಲವೆಂದ ಕೋರ್ಟ್!
ನಾನು ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದೆ. ಆಗ ತಂದೆ ಮಾತ್ರೆ ನೀಡಿದ್ದರು. ಮರುದಿನ ಎದ್ದಾಗ ನನ್ನ ಪಕ್ಕ ತಂದೆ ಮಲಗಿದ್ದರು. ನಾನು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದ್ದು ಆಗ ಗೊತ್ತಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನು ನನ್ನ ಮಲತಾಯಿಗೆ ತಿಳಿಸಿದರೂ ಅವರು ಯಾವ ಸಹಾಯಕ್ಕೂ ಬರಲಿಲ್ಲ. ಇದಾದ ಮೇಲೆ ಕ್ರಿಮಿನಾಶಕ ಸೇವಿಸಿ ಅರೆಪ್ರಜ್ಞಾವಸ್ಥೆಯಲ್ಲಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದು ಮಲತಾಯಿ ಪಾತ್ರ ಇದರಲ್ಲಿ ಇದೆಯೇ ಎಂದು ವಿಚಾರಣೆ ನಡೆಸುತ್ತಿದ್ದಾರೆ.