ಲಾಕ್ಡೌನ್ ನೆಪದಲ್ಲಿ ಊರು ಸೇರಿದ್ದ ಮೂರು ಮಕ್ಕಳ ತಾಯಿಯೊಬ್ಬಳು ಪ್ರಿಯಕರನ ಜೊತೆ ಬೆತ್ತಲಾಗಿದ್ದಾಳೆ. ಬಳಿಕ ಮಸಣ ಸೇರಿದ್ದಾಳೆ.
ಥಾಣೆ, (ನ.07): ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಬರ್ಬರವಾಗಿ ಕೊಲೆಗೈದು ಬಳಿ ಪೊಲೀಸರಿಗೆ ಶರಣಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ನಸ್ರೀನ್ ಎಂದು ಗುರುತಿಸಲಾಗಿದೆ. ಈಕೆಯನ್ನು ಪತಿ ಯೂನುಸ್(50) ಕೊಲೆ ಮಾಡಿದ್ದಾನೆ. ಬಳಿಕ ನೇರವಾಗಿ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ.
ಅಣ್ಣನಿಂದ ತಂಗಿ ಮೇಲೆ ನಿರಂತರ ಅತ್ಯಾಚಾರ: ಗರ್ಭಿಣಿಯಾದ 17 ವರ್ಷದ ಬಾಲಕಿ
ಕೊಲೆ ಮಾಡಿದ್ಯಾಕೆ..?
ಕೊರೋನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪತಿ ಯೂನುಸ್ ಕೆಲಸ ಕಳೆದುಕೊಂಡಿದ್ದ. ಹೀಗಾಗಿ ನಸ್ರೀನ್ ತನ್ನ ಮೂವರು ಮಕ್ಕಳೊಂದಿಗೆ ಭೀವಾಂಡಿಯ ಅನ್ಸಾರ್ ನಗರದಲ್ಲಿರುವ ಸಹೋದರಿ ಮನೆ ಸೇರಿದ್ದಳು. ಈ ಮಧ್ಯೆ ಆಕೆ ಪ್ರಿಯತಮ ಸದ್ದಾಂ ಜೊತೆ ಇರುವ ಬೆತ್ತಲೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭವಾಗಿದೆ. ಈ ವೀಡಿಯೋವನ್ನು ಯೂನುಸ್ ನೋಡಿದ್ದಾನೆ.
ಇದರಿಂದ ರೊಚ್ಚಿಗೆದ್ದ ಯೂನುಸ್, ನೇರವಾಗಿ ಪತ್ನಿ ಇದ್ದ ಸ್ಥಳಕ್ಕೆ ಹೋಗಿ ಚಾಕುವಿನಿಂದ ತಿವಿದು ಹತ್ಯೆ ಮಾಡಿದ್ದಾನೆ. ಪತ್ನಿಯನ್ನು ಕೊಲೆ ಮಾಡಿದ ಬಳಿಕ ಯೂನುಸ್, ಶಾಂತಿನಗರ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ.
ಇತ್ತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯೂನುಸ್, ನನ್ನ ಪತ್ನಿ ಬೇರೊಬ್ಬನ ಜೊತೆ ಮಲಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ನನಗೆ ಭಾರೀ ಅವಮಾನ ಆಗಿದೆ. ನನಗೆ ಮುಜುಗರ ತಂದ ಪತ್ನಿ ಜೀವಂತವಾಗಿ ಉಳಿಯಬಾರದು ಎಂದು ತಪ್ಪೊಪ್ಪಿಕೊಂಡಿದ್ದಾನೆ.