
ಬೆಂಗಳೂರು, (ಫೆ.16): ಪ್ರೀತಿಸಿ ಮದುವೆಯಾದ ಸಹೋದರಿಯ ಪತಿಯನ್ನೇ ಆಕೆಯ ಸಹೋದರ ಹಾಗೂ ಚಿಕಪ್ಪ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ರಾಜಗೋಪಾಲ ನಗರದ ಲಗ್ಗೆರೆಯಲ್ಲಿ ನಡೆದಿದೆ.
ಚೇತನ್ (27) ಕೊಲೆಯಾದ ನವ ವಿವಾಹಿತ. ಮನೆಯವರ ವಿರೋಧದ ನಡುವೆಯೂ ಚೇತನ್ ಹಾಗೂ 22 ವರ್ಷದ ಭೂಮಿಕಾ ಪ್ರೀತಿ ಮದುವೆಯಾಗಿದ್ದರು. ಇದರಿಂದ ಕೋಪಗೊಂಡಿದ್ದ ಭೂಮಿಕಾ ಸಹೋದರ ಆಕಾಶ್ ಮತ್ತು ಚಿಕ್ಕಪ್ಪ ನಂಜುಂಡೇಗೌಡ ಚೇತನ್ನನ್ನು ಕೊಲೆ ಮಾಡಿದ್ದಾರೆ.
ಕುಡಿದು ಜಗಳ: ಯುವಕನನ್ನ ಕೊಂದ ಚಿಕ್ಕಪ್ಪ
ಕಳೆದ ಎರಡು ತಿಂಗಳ ಹಿಂದೆ ಅಷ್ಟೇ ಮದುವೆಯಾಗಿದ್ದ ಚೇತನ್ ಹಾಗೂ ಭೂಮಿಕಾ ಲಗ್ಗೆರೆ ಎಜ್ಜಿ ರಾಮಣ್ಣ ಬಡಾವಣೆಯಲ್ಲಿ ಹೊಸ ಜೀವನ ಆರಂಭಿಸಿದ್ದರು. ಆದ್ರೆ, ಇದನ್ನು ಇಷ್ಟ ಪಡದ ಭೂಮಿಕಾ ಸಹೋದರ, ಇಂದು (ಮಂಗಳವಾರ) ಚೇತನ್ ಹುಟ್ಟುಹಬ್ಬದ ಹಿನ್ನೆಲೆ ಶುಭಾಶಯ ಕೋರವ ನೆಪದಲ್ಲಿ ಹೋಗಿ ಹತ್ಯೆ ಮಾಡಿದ್ದಾನೆ.
ಭೂಮಿಕಾ ಪ್ರೀತಿಯ ವಿಚಾರ ತಿಳಿದಿದ್ದ ಮನೆಯವರು ಯುವತಿಯ ವಿರೋಧದ ನಡುವೆಯೂ ಭೂಮಿಕಾ ಬೇರೆ ಮದುವೆ ಮಾಡಿದ್ದರು. ಮದುವೆಯ ಬಳಿಕವೂ ಭೂಮಿಕಾ, ಚೇತನ್ ನಡುವಿನ ಪ್ರೀತಿ ಮುಂದುವರಿದಿತ್ತು. ಈ ನಡುವೆಯೇ ಕಳೆದ ಎರಡು ತಿಂಗಳ ಹಿಂದೆ ಭೂಮಿಕಾ ಪತಿಯನ್ನು ಬಿಟ್ಟು ಚೇತನ್ನೊಂದಿಗೆ ಎರಡನೇ ಮದುವೆಯಾಗಿದ್ದಳು.
ಇದರಿಂದ ಸಾಕಷ್ಟು ಕೋಪಗೊಂಡಿದ್ದ ಆಕಾಶ್, ನಮ್ಮ ಅಕ್ಕನ ಜೀವನವನ್ನು ಚೇತನ ಹಾಳು ಮಾಡಿದ್ದಾನೆ ಎಂಬ ಕೋಪದಿಂದ ತನ್ನ ಚಿಕ್ಕಪ್ಪನೊಂದಿಗೆ ಸೇರಿ ಚೇತನ್ನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆ ಕುರಿತಂತೆ ರಾಜಗೋಪಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ