ಒಬ್ಬ ವ್ಯಕ್ತಿ ತನ್ನ ಸೊಸೆಯನ್ನು ಕೊಲೆ ಮಾಡಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆಕೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಈ ಕೃತ್ಯವೆಸಗಿದ್ದಾರೆ. ಸೊಸೆ ಎಚ್ಚರಿಕೆಗೆ ಕಿವಿಗೊಡದೇ ಇದ್ದಾಗ ಕೋಪದ ಭರದಲ್ಲಿ ಆಕೆಯನ್ನು ಕೊಂದಿದ್ದಾನೆ. ಇನ್ನು, ಇಬ್ಬರ ನಡುವಿನ ಸಂಬಂಧ ಹಳಸಿತ್ತು ಎಂಬುದು ಪೊಲೀಸರಿಗೆ ತಿಳಿದು ಬಂದಿದೆ.
ಪಂಜಾಬ್‌ನ (Punjab) ಲುಧಿಯಾನಾದ (Ludhiana) ಪ್ರತಾಪ್ ನಗರದಲ್ಲಿ ಶುಕ್ರವಾರ ಸೊಸೆ (Daughter in Law) ಅಕ್ರಮ ಸಂಬಂಧ ಹೊಂದಿದ್ದಾರೆಂದು ಶಂಕಿಸಿ ಮಾವ ಮಹಿಳೆಯನ್ನು ಕೊಲೆ ಮಾಡಿದ್ದಾರೆ. ಇನ್ನು, ಕತ್ತು ಹಿಸುಕಿ ಕೊಲೆ ಮಾಡಿದ ಆರೋಪದ ಮೇಲೆ ಲುಧಿಯಾನಾದ ಪೊಲೀಸ್ ವಿಭಾಗ 6 (Division 6 ) ಶನಿವಾರ ಅದೇ ಪ್ರದೇಶದ ನಿವಾಸಿ ಗೋಭಿ ಲಾಲ್ ಎಂಬುವರನ್ನು ಬಂಧಿಸಿದೆ. ಶಂಕಿತ ಆರೋಪಿ ಮತ್ತು ಆತನ ಪುತ್ರ ಮೋನು ಪ್ರತಾಪ್ ನಗರದಲ್ಲೇ ಪ್ರತ್ಯೇಕ ಮನೆಗಳಲ್ಲಿ ವಾಸ ಮಾಡುತ್ತಿದ್ದರು ಎಂದು ಎಸಿಪಿ (Assistant Commissioner of Police) ಜ್ಯೋತಿ ಯಾದವ್ ಮಾಹಿತಿ ನೀಡಿದ್ದಾರೆ. ಹಾಗೂ, ನಿನ್ನೆ ಮಗನ ಮನೆಗೆ ಹೋಗಿದ್ದ ಅವರು ಸೊಸೆ ಲಕ್ಷ್ಮೀ ಒಬ್ಬಳೇ ಇರುವುದನ್ನು ಕಂಡು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಮಹಿಳೆಗೆ ಬೇರೊಬ್ಬ ಪುರುಷನ ಜತೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿ ತಾನು ಕೊಲೆ (Murder) ಮಾಡಿರುವುದಾಗಿ ಮಾವ ಒಪ್ಪಿಕೊಂಡಿದ್ದಾರೆ ಎಂದೂ ತಿಳಿದುಬಂದಿದೆ. ಅಲ್ಲದೆ, ಈ ಕೃತ್ಯಕ್ಕೆ ಬೇರೊಬ್ಬರು ಸಹಾಯ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಕ್ರಮ ಸಂಬಂಧ (Illict Relationship) ಹೊಂದುವುದನ್ನು ನಿಲ್ಲಿಸುವಂತೆ ತಾಕೀತು ಮಾಡಿದರೂ ಸೊಸೆ ಅದಕ್ಕೆ ಕ್ಯಾರೇ ಎನ್ನಲಿಲ್ಲ. ಹಾಗಾಗಿ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದಾಗಿ ಆರೋಪಿ ಗೋಭಿ ಲಾಲ್ ಹೇಳಿಕೊಂಡಿದ್ದಾರೆ.
Sonali Phogat: ಗೋವಾದಲ್ಲಿ ಯಾವುದೇ ಶೂಟಿಂಗ್ ಇದ್ದಿರಲಿಲ್ಲ, ನಾನೇ ಕೊಲೆ ಮಾಡಿದೆ: ಪಿಎ ಸುಧೀರ್ ತಪ್ಪೊಪ್ಪಿಗೆ?
ಸಂಪೂರ್ಣ ತನಿಖೆಯ (Investigation) ನಂತರ ಮೃತ ಮಹಿಳೆಯ ಮಾವನೇ ಕೊಲೆ ಮಾಡಿರುವುದು ದೃಢಪಟ್ಟಿದೆ ಎಂದೂ ಎಸಿಪಿ ತಿಳಿಸಿದ್ದಾರೆ. ಸ್ಥಳೀಯ ಸಿಸಿಟಿವಿ ಫೂಟೇಜ್‌ನಲ್ಲಿ ಶಂಕಿತ ವ್ಯಕ್ತಿ ತನ್ನ ಮಗನ ಮನೆಯ ಬಳಿ ತಿರುಗಾಡುತ್ತಿದ್ದ ದೃಶ್ಯಾವಳಿ ಸೆರೆಯಾಗಿದೆ. ಹಾಗೂ, ಸೊಸೆ ಹಾಗೂ ಮಾವನ ನಡುವಿನ ಸಂಬಂಧ ಚೆನ್ನಾಗಿರಲಿಲ್ಲವೆಂಬುದು ತನಿಖೆಯ ವೇಳೆ ಬಯಲಾಗಿದೆ. ನಂತರ, ತಾನು ಅಪರಾಧ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದೂ ತಿಳಿದುಬಂದಿದೆ. ಇನ್ನೊಂದೆಡೆ, ಸೊಸೆ ಅಕ್ರಮ ಸಂಬಂಧ ಹೊಂದಿದ್ದ ಬಗ್ಗೆ ಹಾಗೂ ಆಕೆಯ ನಡತೆಯ ಬಗ್ಗೆ ಮಗನ ಬಳಿ ಮಾತನಾಡಿದ್ದ, ಆದರೆ ಮೋನು ಮಾತ್ರ ತನ್ನ ಹೆಂಡತಿಯನ್ನು ನಂಬಿದ್ದ ಎಂದು ಮೂಲಗಳು ತಿಳಿಸಿವೆ.
ಘಟನೆ ಬೆಳಕಿಗೆ ಬಂದಿದ್ದು ಹೀಗೆ..
ಮೃತ ಲಕ್ಷ್ಮೀ ಮಧ್ಯಾಹ್ನ ತನ್ನ ಮಗುವನ್ನು ತನ್ನ ಮನೆಯ ಸಮೀಪವಿರುವ ಪ್ಲೇ ಸ್ಕೂಲ್‌ನಿಂದ ಕರೆದುಕೊಂಡು ಹೋಗಲು ವಿಫಲವಾದ ಕಾರಣ, ಆಕೆಯನ್ನು ಪರೀಕ್ಷಿಸಲು ಹೋದಾಗ ಲಕ್ಷ್ಮೀ ಶವವಾಗಿದ್ದಳು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಶುಕ್ರವಾರ ಆಕೆ ಮಗುವನ್ನು ಕರೆದುಕೊಂಡು ಹೋಗಲು ಬಾರದೆ ಇದ್ದಾಗ ಶಾಲೆಯ ಅಧಿಕಾರಿಗಳು ಪತಿ ಮೋನು ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ, ಮೋನು ತನ್ನ ಹೆಂಡತಿ ಮನೆಯಲ್ಲಿ ಇದ್ದಾಳೋ ಇಲ್ಲವೋ ಎಂದು ತಿಳಿದುಕೊಳ್ಳಲು ಹಾಗೂ ಮಗುವನ್ನು ಪ್ಲೇ ಸ್ಕೂಲ್‌ನಿಂದ /Play School) ಏಕೆ ಕರೆದುಕೊಂಡು ಬಂದಿಲ್ಲ ಎಂಬುದನ್ನು ಪತ್ತೆಹಚ್ಚಲು ಅವರ ನೆರೆಯವರಿಗೆ ಕರೆ ಮಾಡಿದರು. ಬಳಿಕ ಅಕ್ಕಪಕ್ಕದ ಮನೆಯವರು ಮನೆಗೆ ಹೋಗಿ ನೋಡಿದಾಗ ಲಕ್ಷ್ಮೀ ಶವವಾಗಿ ಕಂಡಿದ್ದಾಳೆ.
ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳೀಯ ಪೊಲೀಸರು ಸ್ಥಳಕ್ಕಾಗಮಿಸಿ ಲಕ್ಷ್ಮೀ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತೆ ಮತ್ತು ಆರೋಪಿಗಳ ನಡುವಿನ ಸಂಘರ್ಷದ ಹಿಂದಿನ ಕಾರಣವನ್ನು ಅವರು ಪತ್ತೆಹಚ್ಚಲು ಪ್ರಯತ್ನಿಸಿದ್ದಾರೆ ಎಂದೂ ತಿಳಿದುಬಂದಿದೆ. ಸದ್ಯ, ಆರೋಪಿಯನ್ನು ಬಂಧಿಸಲಾಗಿದ್ದು, ಆತ ಪೊಲೀಸರ ವಶದಲ್ಲಿದ್ದಾನೆ ಎಂದು ತಿಳಿದುಬಂದಿದೆ.
ಅತ್ತಿಗೆಯ ಕೊಲೆಗೆ ಮೈದುನನಿಂದಲೇ ಸುಪಾರಿ! ಯೋಧನಿಗೆ ಅತ್ತಿಗೆ ಕೆಲಸದ ಮೇಲೆ ಕಣ್ಣು!