ಕೊಡವ ಜನಾಂಗದ ಅವಹೇಳನ: ದುಷ್ಕರ್ಮಿಯ ಬಂಧಿಸಿದ ಪೊಲೀಸ್‌ ತಂಡಕ್ಕೆ ಬಹುಮಾನ ಘೋಷಣೆ

By Kannadaprabha News  |  First Published Jul 19, 2022, 10:20 AM IST

ಕೊಡಗು ಜಿಲ್ಲೆಯಲ್ಲಿ ಕಾವೇರಿ ಮತ್ತು ಕೊಡವ ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್  ಪ್ರಕರಣದ ಪ್ರಮುಖ ಆರೋಪಿಯನ್ನು ಕಾರ್ಯಾಚರಣೆ ನಡೆಸಿ ಬಂಧಿಸಿದ ಪೊಲೀಸರಿಗೆ ಡಿಜಿಪಿ ಪ್ರವೀಣ್ ಸೂದ್ 25000 ರೂ. ಬಹುಮಾನ ಘೋಷಿಸಿದ್ದಾರೆ.


ಮಡಿಕೇರಿ (ಜು.19} : ನಕಲಿ ಇನ್ಸಟಾಗ್ರಾಂ ಖಾತೆ ತೆರೆದು ಕಾವೇರಿ ಹಾಗೂ ಕೊಡವ ಜನಾಂಗವನ್ನು ಅವಹೇಳನ ಮಾಡಿ ಜಿಲ್ಲಾದ್ಯಂತ ಸಂಘರ್ಷಕ್ಕೆ ಕಾರಣವಾಗುವ ಸನ್ನಿವೇಶ ಸೃಷ್ಟಿಸಿದ್ದ ದುಷ್ಕರ್ಮಿಯನ್ನು ಬಂಧಿಸಿರುವ ಕೊಡಗು ಜಿಲ್ಲಾ ಪೊಲೀಸರ ಕಾರ್ಯವನ್ನು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಹಾಗೂ ಪೊಲೀಸ್‌ ಮಹಾನಿರೀಕ್ಷಕ ಪ್ರವೀಣ್‌ ಸೂದ್‌(Praveen sood DGP) ಶ್ಲಾಘಿಸಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸ್‌ ತಂಡಕ್ಕೆ 25000 ರು. ಬಹುಮಾನ ಘೋಷಿಸಿದ್ದಾರೆ.

ಸಾಮಾಜಿಕ ಜಾಲತಾಣ(Social Media)ದಲ್ಲಿ ಕೊಡಗು(Kodagu) ಜಿಲ್ಲೆಯ ಒಂದು ಜನಾಂಗದ ವಿರುದ್ದ ಅವಹೇಳನ ಮಾಡಿದ್ದ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿದ ಜಿಲ್ಲೆಯ ಪೊಲೀಸರ ಕಾರ್ಯವನ್ನು ಶ್ಲಾಘಿಸಿ ರಾಜ್ಯದ ಮಹಾ ನಿರ್ದೇಶಕರು ಮತ್ತು ಪೊಲೀಸ್‌ ಮಹಾ ನಿರೀಕ್ಷಕರು 25,000 ರುಪಾಯಿ ನಗದು ಬಹುಮಾನ ಘೋಷಿಸಿದ್ದಾರೆ ಎಂದು ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟ್ವೀಟ್‌(Tweet)( ಮೂಲಕ ಮಾಹಿತಿ ನೀಡಿದ್ದಾರೆ.

Tap to resize

Latest Videos

ಕೊಡವ ಜನಾಂಗವನ್ನು ಅವಹೇಳನ ಮಾಡಿದ್ದ ವಿರಾಜಪೇಟೆ(Virajapete) ತಾಲೂಕಿನ ಕೆ.ಸಿ.ದಿವಿನ್‌ ದೇವಯ್ಯ(K.C.Divin Devaiah) (29) ಎಂಬ ಕೊಡವ ಯುವಕನನ್ನು ಭಾನುವಾರ ಜಿಲ್ಲಾ ಪೊಲೀಸರು(Police) ಬಂಧಿಸಿದ್ದರು.

ಇದನ್ನೂ ಓದಿ: KODAGU; ಕೊಡವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದಾತ ಬಂಧನ

ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಕೊಡವ ಸಮಾಜದ ಮಹಿಳೆಯರನ್ನು ಅವಹೇಳನ ಮಾಡಿ ಅಪರಿಚಿತ ಖಾತೆಯಿಂದ ಪೋಸ್ಟ್‌ ಹಾಕಲಾಗಿತ್ತು. ನಂತರ ಇದಕ್ಕೆ ಸಂಬಂಧವಿಲ್ಲದ ಅಮಾಯಕ ಮುಸ್ಲಿಮ್‌ ಯುವಕನ ಫೋಟೋ ಎಡಿಟ್‌ ಮಾಡಿ ವ್ಯಾಪಕವಾಗಿ ಹರಡಿ ಆತನಿಗೆ ಮಾನಸಿಕ ಕಿರುಕುಳ ನೀಡಲಾಗಿತ್ತು. ಈ ಮಧ್ಯೆ ಸಂಘಪರಿವಾರ ಜಿಲ್ಲಾ ಬಂದ್‌ ಕರೆ ನೀಡಿತ್ತು.

click me!