Bengaluru: ಕಾರಿನಲ್ಲಿ ಸಿಗರೆಟ್‌ ಸೇವನೆ ಅಪರಾಧ ಎಂದು 95000 ಸುಲಿದ ನಕಲಿ ಪೊಲೀಸ್‌

By Kannadaprabha News  |  First Published Feb 26, 2023, 7:10 AM IST

ಸಿ.ವಿ.ರಾಮನ್‌ ನಗರದ ನಾಗವಾರಪಾಳ್ಯ ನಿವಾಸಿ ಧನಂಜಯ ನಾಯರ್‌(31) ಸುಲಿಗೆ ಒಳಗಾದವರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಇವರು ಫೆ.22ರ ಮುಂಜಾನೆ 5.45ರ ಸುಮಾರಿಗೆ ಬೆನ್ನಿಗಾನಹಳ್ಳಿ ಕೆಳಸೇತುವೆ ಬಳಿ ಕಾರಿನಲ್ಲಿ ಸಿಗರೆಟ್‌ ಸೇದಿಕೊಂಡು ಹೋಗುತ್ತಿದ್ದರು.


ಬೆಂಗಳೂರು (ಫೆ.26): ಪೊಲೀಸರ ಸೋಗಿನಲ್ಲಿ ದುಷ್ಕರ್ಮಿಯೊಬ್ಬ ಖಾಸಗಿ ಕಂಪನಿ ಉದ್ಯೋಗಿಯನ್ನು ಬೆದರಿಸಿ ಹಣ ಹಾಗೂ ಚಿನ್ನಾಭರಣ ಸುಲಿಗೆ ಮಾಡಿ ಪರಾರಿಯಾಗಿರುವ ಘಟನೆ ರಾಮಮೂರ್ತಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಿ.ವಿ.ರಾಮನ್‌ ನಗರದ ನಾಗವಾರಪಾಳ್ಯ ನಿವಾಸಿ ಧನಂಜಯ ನಾಯರ್‌ (31) ಸುಲಿಗೆ ಒಳಗಾದವರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಇವರು ಫೆ.22ರ ಮುಂಜಾನೆ 5.45ರ ಸುಮಾರಿಗೆ ಬೆನ್ನಿಗಾನಹಳ್ಳಿ ಕೆಳಸೇತುವೆ ಬಳಿ ಕಾರಿನಲ್ಲಿ ಸಿಗರೆಟ್‌ ಸೇದಿಕೊಂಡು ಹೋಗುತ್ತಿದ್ದರು. 

ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿರುವ ಅಪರಿಚಿತ ವ್ಯಕ್ತಿ ಕಾರನ್ನು ಅಡ್ಡಗಟ್ಟಿದ್ದಾನೆ. ಬಳಿಕ ತಾನು ಪೊಲೀಸ್‌ ಎಂದು ನಕಲಿ ಗುರುತಿನ ಚೀಟಿ ತೋರಿಸಿ ಪರಿಚಯಿಸಿ ಕೊಂಡಿದ್ದಾನೆ. ಕಾರಿನಲ್ಲಿ ಸಿಗರೆಟ್‌ ಸೇದುವುದು ಅಪರಾಧ. ನಿನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಸಿದ್ದಾನೆ. ಬಳಿಕ ಕಾರಿನ ಬಾಗಿಲು ತೆರೆದು ಒಳಗೆ ಕುಳಿತು ಧನಂಜಯನನ್ನು ಅವಾಚ್ಯವಾಗಿ ಬೈದಿದ್ದಾನೆ. ಧನಂಜಯಗೆ ಕನ್ನಡ ಭಾಷೆ ಬಾರದಿರುವುದನ್ನು ಗಮನಿಸಿದ ದುಷ್ಕರ್ಮಿ, ತನ್ನ ಬಳಿಯಿದ್ದ ಚಾಕು ತೆಗೆದು ನಾನು ಹೇಳಿದಂತೆ ಕೆಳಬೇಕು. ಇಲ್ಲವಾದರೆ, ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿದ್ದಾನೆ. 

Tap to resize

Latest Videos

ತುಮಕೂರಿನಲ್ಲಿ ಇಂಟರ್ ನ್ಯಾಶನಲ್ ತಿಮಿಂಗಿಲ ವಾಂತಿ ದಂಧೆ ಪತ್ತೆ: ಆರೋಪಿ ಅಂದರ್

ನಂತರ ಧನಂಜಯನ ಮೊಬೈಲ್‌ ಫೋನ್‌, ಪರ್ಸ್‌ ಕಿತ್ತುಕೊಂಡಿದ್ದಾನೆ. ಬಳಿಕ ಅದೇ ಕಾರಿನಲ್ಲಿ ಎಟಿಎಂಗೆ ಕರೆದೊಯ್ದು ಧನಂಜಯನ ಡೆಬಿಟ್‌ ಕಾರ್ಡ್‌ನಿಂದ .50 ಸಾವಿರ ಹಾಗೂ ಕ್ರೆಡಿಟ್‌ ಕಾರ್ಡ್‌ನಿಂದ .45 ಸಾವಿರ ಡ್ರಾ ಮಾಡಿಸಿಕೊಂಡಿದ್ದಾನೆ. ಬಳಿಕ ಧನಂಜಯ ಬಳಿಯಿದ್ದ ಸುಮಾರು 40 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ಕಿತ್ತುಕೊಂಡಿದ್ದಾನೆ. ಬಳಿಕ ಅದೇ ಕಾರಿನಲ್ಲಿ ಬೆನ್ನಿಗಾನಹಳ್ಳಿ ಕೆಳಸೇತುವೆ ಬಳಿಗೆ ಡ್ರಾಪ್‌ ಪಡೆದು ತನ್ನ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ರಾಮಮೂರ್ತಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಯ ಪತ್ತೆಗೆ ಶೋಧಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಂತದ ವಸ್ತು ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಬಂಧನ: ಆನೆ ದಂತದಿಂದ ತಯಾರಿಸಿದ ವಸ್ತುಗಳು ಹಾಗೂ ಚಿರತೆ ಉಗುರು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಸಿಐಡಿ ಅರಣ್ಯ ಘಟಕದ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಹಾಸನ ಜಿಲ್ಲೆ ಬೈರೆಗೌಡನಹಳ್ಳಿ ನಿವಾಸಿ ನವೀನ್‌ ಕುಮಾರ್‌(40) ಬಂಧಿತ. ಆರೋಪಿಯಿಂದ ಆನೆ ದಂತದ ಎಂಟು ಬ್ರಾಸ್ಲೆಟ್‌, ಒಂದು ದಂತದ ಜುವೆಲ್ಲರಿ ಬಾಕ್ಸ್‌, ಒಂದು ದಂತದ ವಾಕಿಂಗ್‌ ಸ್ಟಿಕ್‌, ಒಂದು ರೋಸ್‌ವುಡ್‌ ಸ್ಟಿಕ್‌ ಹಾಗೂ ಎರಡು ಚಿರತೆ ಉಗುರು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೂಟೌಟ್‌ ಹಿನ್ನೆಲೆ: ಮಲೆನಾಡ ವಿವಿಧೆಡೆ 51ಕ್ಕೂ ಹೆಚ್ಚು ಅಕ್ರಮ-ಸಕ್ರಮ ಬಂದೂಕುಗಳ ವಶ

ಬೆಂಗಳೂರು-ಹಾಸನ ಹೆದ್ದಾರಿಯ ಮಾಗಡಿ ತಾಲೂಕು ತಾಳೆಕೆರೆ ಹ್ಯಾಂಡ್‌ಪೋಸ್ಟ್‌ ಬಳಿ ವ್ಯಕ್ತಿಯೊಬ್ಬ ಆನೆ ದಂತದಿಂದ ತಯಾರಿಸಿದ ವಸ್ತುಗಳ ಮಾರಾಟಕ್ಕೆ ಬರುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಐಡಿ ನಗರ ಅರಣ್ಯ ಘಟಕದ ಅಧಿಕಾರಿಗಳು ಶನಿವಾರ ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಮಾಲು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

click me!