ಬೆಂಗಳೂರು: ಗುದದ್ವಾರಕ್ಕೆ ಗಾಳಿ ತುಂಬಿ, ಸ್ನೇಹಿತನ ಕೊಂದ ಗೆಳೆಯರು!

By Suvarna News  |  First Published Mar 28, 2024, 2:46 PM IST

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಚಿತ್ರ ಪ್ರಕರಣವೊಂದು ದಾಖಲಾಗಿದೆ. ಸ್ನೇಹಿತರಿಬ್ಬರ ಹುಡುಗಾಟದಲ್ಲಿ ಘೋರ ಘಟನೆ ನಡೆದು ಓರ್ವ ಸಾವನ್ನಪ್ಪಿದ್ದಾನೆ.  


ಬೆಂಗಳೂರು (ಮಾ.28): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಚಿತ್ರ ಪ್ರಕರಣವೊಂದು ದಾಖಲಾಗಿದೆ. ಸ್ನೇಹಿತರಿಬ್ಬರ ಹುಡುಗಾಟದಲ್ಲಿ ಘೋರ ಘಟನೆ ನಡೆದು ಓರ್ವ ಸಾವನ್ನಪ್ಪಿದ್ದಾನೆ. ಗುದದ್ವಾರಕ್ಕೆ ಗಾಳಿ ಹಿಡಿದ ಪರಿಣಾಮ ಓರ್ವ ಸ್ನೇಹಿತ ಸಾವು ಕಂಡಿದ್ದು, ಯೋಗಿಶ್  (28) ಮೃತ ಯುವಕನಾಗಿದ್ದಾನೆ.

ಯುಗಾದಿ ಹಬ್ಬದ ಮಾಂಸದ ಚೀಟಿ ಹಾಕಿದ್ದೀರಾ? ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ

Tap to resize

Latest Videos

undefined

ಮಾ25ರಂದು ಬೈಕ್ ಸರ್ವೀಸ್ ಮಾಡಲು ಸಿಎನ್ ಎಸ್  ಬೈಕ್ ಸರ್ವೀಸ್ ಸೆಂಟರ್ ಗೆ ಮುರಳಿ ಎಂಬಾತ ಹೋಗಿದ್ದ ಇದೇ ವೇಳೆ ಅದೇ  ಸೆಂಟರ್‌ ಗೆ ಯೋಗಿಶ್ ಕೂಡ ಬಂದಿದ್ದ. ಇಬ್ಬರೂ ಈ ವೇಳೆ ಏರ್ ಪ್ಲೇಜರ್ ಪೈಪ್ ನಿಂದ ಆಟ ಆಡಲು ಮುಂದಾಗಿದ್ದರು. ಮೊದಲಿಗೆ ಯೋಗಿಶ್ ನ ಮುಖ ಹಾಗೂ ಹೊಟ್ಟೆಗೆ ಮುರಳಿ ಗಾಳಿ ಬಿಟ್ಟಿದ್ದ. ಇದಾದ ಬಳಿಕ ಯೋಗಿಶ್ ಗುದದ್ವಾರಕ್ಕೆ ಮುರಳಿ ಗಾಳಿ ಬಟ್ಟಿದ್ದ. ಇದು ಎಡವಟ್ಟಿಗೆ ಕಾರಣವಾಯ್ತು.

ಬೆಂಗಳೂರು: ಸಿಕ್ಸ್‌ ಪ್ಯಾಕ್‌ ಗೆಳೆಯನ 'ಮೈನಾ' ಲವ್ ಸ್ಟೋರಿ; ವಿಶೇಷ ಚೇತನ ಹುಡುಗಿಗೆ 56 ಲಕ್ಷ ರೂ. ಪಂಗನಾಮ

ಯೋಗಿಶ್ ಗುದದ್ವಾರಕ್ಕೆ ಗಾಳಿ ಬಿಟ್ಟ ಕಾರಣ ಹೊಟ್ಟೆ ಉತಾ ಬಂದು ಕರಳು ಬ್ಲಾಸ್ಟ್ ಆಗಿದೆ. ತಕ್ಷಣ ಯೋಗಿಶ್ ನನ್ನ ಸ್ನೇಹಿತ ಮುರಳಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದ ಆದರೆ ಚಿಕಿತ್ಸೆ ಫಲಕಾರಿಯಾಗದೇ  ಯೋಗಿಶ್ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೆಕ್ಷನ್ 304 ಅಡಿ ಕೇಸ್ ದಾಖಲಿಸಿಕೊಂಡು ಸಂಪಿಗೇಹಳ್ಳಿ ಪೊಲೀಸರು ಸ್ನೇಹಿತ ಮುರಳಿಯನ್ನು ಬಂಧಿಸಿದ್ದಾರೆ.

click me!