ಹೆತ್ತ ಮಗಳ ತಲೆ ಕಡಿದು ಪೊಲೀಸ್ ಸ್ಟೇಷನ್ಗೆ ಬಂದ

By Suvarna News  |  First Published Mar 4, 2021, 1:29 PM IST

ಮಗಳ ಲವ್ ಎಫೇರ್ | ಹೆತ್ತ ಮಗಳ ತಲೆ ಕಡಿದ ತಂದೆ | ಮಗಳ ಕತ್ತರಿಸಿದ ತಲೆ ಹಿಡಿದುಕೊಂಡೇ ಪೊಲೀಸ್ ಸ್ಟೇಷನ್‌ಗೆ ಬಂದ


ಲಕ್ನೋ(ಮಾ.04): ಭಾರತದಲ್ಲಿ ಮಾರ್ಯದಾ ಹತ್ಯೆಗಳು ನಡೆಯುತ್ತಲೇ ಇರುತ್ತವೆ. ಪ್ರೀತಿ, ಪ್ರೇಮಯ, ಅನೈತಿಕ ಸಂಬಂಧ ಇವೆಲ್ಲದ ಜೊತೆ ಮಾರ್ಯಾದೆಗೆ ಅಂಜಿ ಹಲವು ಘಟನೆಗಳು ಕೊಲೆಯಲ್ಲಿ ಕೊನೆಯಾಗುತ್ತವೆ.

ಇದೀಗ ಇಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ತಂದೆಯೊಬ್ಬರು ಮಗಳ ಪ್ರೀತಿಯ ವಿಚಾರ ತಿಳಿದು ಕ್ರೂರವಾಗಿ ಮಗಳನ್ನು ಕೊಂದಿದ್ದಾರೆ.

Tap to resize

Latest Videos

ಫ್ರೆಂಚ್ ಮಹಿಳೆ ಖಾಸಗಿ ಅಂಗದ ಮೇಲೆ ಎರಗಿದ ಖ್ಯಾತ ಬರಹಗಾರ್ತಿ, LGBT ಹೋರಾಟಗಾರ್ತಿ!

ಉತ್ತರ ಪ್ರದೇಶದ ಹರಡೋಯ್‌ನಲ್ಲಿ ಘಟನೆ ನಡೆದಿದ್ದು, ಮಗಳು ಯಾರನ್ನೋ ಪ್ರೀತಿಸುತ್ತಿರುವ ವಿಚಾರ ತಿಳಿದು ತಂದೆಯಿಂದ ಕೃತ್ಯ ನಡೆದಿದೆ. ಮಜಿಹಿಲಾ ಪ್ರದೇಶದಲ್ಲಿ ತಂದೆಯೇ ಮಗಳ ತಲೆ ಕತ್ತರಿಸಿದ್ದಾನೆ.

ಕತ್ತರಿಸಿದ ಮಗಳ ತಲೆಯನ್ನು ಹಿಡಿಸುಕೊಂಡು ಪೊಲೀಸ್‌ ಸ್ಟೇಷನ್‌ಗೆ ನಡೆದುಕೊಂಡು ಬರುವಾಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವ್ಯಕ್ತಿಯ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

click me!