ಆತ ನನಗೆ ಅಣ್ಣನ ಸಮಾನ, ಗೆಳತಿ ಹೇಳಿಕೆಗೆ ಮನನೊಂದು ಕೋರ್ಟ್‌ನಲ್ಲೇ ಕೈಕತ್ತರಿಸಿದ ಪ್ರೇಮಿ!

Published : Sep 05, 2023, 04:07 PM IST
ಆತ ನನಗೆ ಅಣ್ಣನ ಸಮಾನ, ಗೆಳತಿ ಹೇಳಿಕೆಗೆ ಮನನೊಂದು ಕೋರ್ಟ್‌ನಲ್ಲೇ ಕೈಕತ್ತರಿಸಿದ ಪ್ರೇಮಿ!

ಸಾರಾಂಶ

ಪ್ರೀತಿ ಗಾಢವಾಗಿದೆ. ಇಬ್ಬರು ರಾತ್ರೋರಾತ್ರೋ ಓಡಿಹೋಗಿದ್ದಾರೆ. ಬಳಿಕ  ಒಂದು ತಿಂಗಳು ಜೊತೆಯಾಗಿದ್ದರು. ಆದರೆ ಹೆಬಿಯಸ್ ಕಾರ್ಪಸ್ ಅರ್ಜಿಯಿಂದ ಪ್ರೇಮಿಗಳು ಕೋರ್ಟ್‌ಗೆ ಹಾಜರಾಗಬೇಕಾಯಿತು. ಈ ವೇಳೆ ಆತ ನನಗೆ  ಅಣ್ಣನ ಸಮಾನ, ಆತನ ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾಳೆ. ಇತ್ತ ಮನನೊಂದ ಪ್ರೇಮಿ ಕೋರ್ಟ್ ಆವರಣದಲ್ಲೇ ಕೈಕತ್ತರಿಸಿದ್ದಾನೆ.

ತ್ರಿಶೂರ್(ಸೆ.05) ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮೂಲಕ ಪರಿಚಯ, ಬಳಿಕ ವ್ಯಾಟ್ಸ್ಆ್ಯಪ್ ನಂಬರ್ ಹಂಚಿಕೊಳ್ಳುವುದು,  ಪರಿಚಯ ಪ್ರೀತಿಯಾಗಿ, ಪ್ರೀತಿ ಮದುವೆಯಾಗಿ ತಿರುಗಿದ ಹಲವು ಘಟನೆಗಳಿವೆ. ಇದೇ ರೀತಿ ಇಲ್ಲೊಂದು ಜೋಡಿ ಪ್ರೀತಿಸಿ ಓಡಿ ಹೋಗಿದ್ದಾರೆ. ಸರಿಸುಮಾರು ಒಂದು ತಿಂಗಳು ಜೊತೆಯಾಗಿದ್ದರು.  ಆದರೆ  ಮಗಳನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ತಂದೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಇವರಿಬ್ಬರನ್ನು ಪತ್ತೆ ಹಚ್ಚಿದ ಪೊಲೀಸರು ಕೋರ್ಟ್ ಮುಂದೆ ಹಾಜರು ಪಡಿಸಿದ್ದಾರೆ. ಈ ವೇಳೆ ಆಕೆ ನೀಡಿದ ಹೇಳಿಕೆಯಿಂದ ಪ್ರೇಮಿ ಶಾಕ್ ಆಗಿದ್ದಾನೆ. ಆತ ನನಗೆ ಅಣ್ಣನ ಸಮಾನ, ಆತನನ್ನು ನಾನು ಯಾವತ್ತೂ ಪ್ರೀತಿಸಿಲ್ಲ. ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾಳೆ. ಈ ಹೇಳಿಕೆ ಕೇಳಿದ ಪ್ರೇಮಿ ಕೋರ್ಟ್ ಆವರಣದಲ್ಲೇ ಕೈಕತ್ತರಿಸಿಕೊಂಡ ಘಟನೆ ಕೇರಳ ಹೈಕೋರ್ಟ್‌ನಲ್ಲಿ ನಡೆದಿದೆ. 

ತ್ರಿಶೂರ್ ಜಿಲ್ಲೆಯ 31ರ ಹರೆಯ ವಿಷ್ಣು, ಅದೇ ಜಿಲ್ಲೆಯ 23ರ ಹರೆಯದ  ಯುವತಿಯನ್ನು ಪ್ರೀತಿಸುತ್ತಿದ್ದ. ಏಕಾಏಕಿ ಇವರಿಬ್ಬರು ನಾಪತ್ತೆಯಾಗಿದ್ದರು. ಯುವತಿ ಮನೆಯವರು ಹುಡುಕಾಟ ನಡೆಸಿ ಪೊಲೀಸರಿಗೆ ದೂರು ನೀಡಿದ್ದರು. ಕೆಲ ದಿನಗಳಲ್ಲಿ ಮಗಳು ವಿಷ್ಣು ಜೊತೆ ಓಡಿ ಹೋಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಯುವತಿ ತಂದೆ ಕೋರ್ಟ್‌ಗೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ತಮ್ಮ  ಮಗಳನ್ನು ಅಕ್ರಮವಾಗಿ ಬಂಧನದಲ್ಲಿ ಇಡಲಾಗಿದೆ. ತಕ್ಷಣವೇ ಮಗಳಿಗೆ ಮುಕ್ತಿ ನೀಡಬೇಕು ಎಂದು  ಮನವಿ ಮಾಡಿದ್ದರು.

ಪತಿಯ ಅಕ್ರಮ ಸಂಬಂಧ, ಗಂಡನನ್ನು ಲವರ್‌ನೊಂದಿಗೆ ಕಟ್ಟಿ, ತಲೆಬೋಳಿಸಿ ರಸ್ತೆಯಲ್ಲಿ ಪರೇಡ್‌ ಮಾಡಿದ ಪತ್ನಿ!

ಈ ಅರ್ಜಿ ಕುರಿತು ಕೇರಳ ಹೈಕೋರ್ಟ್ ವಿಭಾಗೀಯ ಪೀಠದ ಜಸ್ಟೀಸ್ ಸಿ ಜಯಚಂದ್ರನ್ ಹಾಗೂ ಅನು ಶಿವರಾಮನ್ ವಿಚಾರಣೆ ನಡೆಸಿದ್ದಾರೆ.  ವಿಚಾರಣೆ ವೇಳೆ ಯುವತಿ ಮಹತ್ವದ ಹೇಳಿಕೆ ನೀಡಿದ್ದಾಳೆ. ವಿಷ್ಣು ಜೊತೆ ಮದುವೆಯಾಗಲು ಸಾಧ್ಯವಿಲ್ಲ. ಆತ ನನಗೆ ಅಣ್ಣನಿದ್ದಂತೆ. ವಿಷ್ಣುವನ್ನು ನಾನು ಯಾವತ್ತೂ ಪ್ರೀತಿಸಿಲ್ಲ ಎಂದಿದ್ದಾಳೆ. ಮತ್ಯಾಕೆ ಒಂದು ತಿಂಗಳು ಆತನ ಜೊತೆಗಿದ್ದೆ ಎಂದು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಯುವತಿ, ವಿಷ್ಣು ನನಗೆ ಬೆದರಿಕೆ ಹಾಕಿದ್ದ. ಬಿಟ್ಟು ಹೋದರೆ ಚಾಕು ಇರಿಯುವುದಾಗಿ ಹೇಳಿದ್ದ. ನನ್ನ ಪೋಷಕರನ್ನು ಬಿಟ್ಟು ನಾನು ಬದುಕಲಾರೆ. ನಾನು ಪೋಷಕರ ಜೊತೆ ಹೋಗುವುದಾಗಿ ಕೋರ್ಟ್‌ನಲ್ಲಿ ಹೇಳಿದ್ದಾಳೆ.

ಗರ್ಲ್‌ಫ್ರೆಂಡ್‌ ಮನೆಗೆ ನುಗ್ಗಿ ಅಟ್ಯಾಕ್‌ ಮಾಡಿದ ಪಾಗಲ್‌ ಪ್ರೇಮಿ; ಆಕೆಯ ಸೋದರನನ್ನು ಕೊಲೆನೇ ಮಾಡ್ದ!

ಈ ಮಾತು ಕೇಳಿದ  ವಿಷ್ಣುಗೆ ಶಾಕ್ ಆಗಿದೆ. ಪ್ರೀತಿಸಿ ಓಡಿ ಹೋಗಿ ಇದೀಗ ಅಣ್ಣಾ ಎಂದು ಕರೆದ ಕಾರಣಕ್ಕೆ ತೀವ್ರವಾಗಿ ನೊಂದಿದ್ದಾನೆ.  ಕೋರ್ಟ್ ಆವರಣದಲ್ಲೇ ವಿಷ್ಣು ಕೈಕತ್ತರಿಸಿದ್ದಾನೆ. ತಕ್ಷಣವೇ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಬಳಿಕ ಆಸ್ಪತ್ರೆ ದಾಖಲಿಸಿದ್ದಾರೆ.  ಇತ್ತ ವಿಷ್ಣು ಕುರಿತು ಮತ್ತಷ್ಟು ಮಾಹಿತಿಗಳು ಇದೀಗ ಬಹಿರಂಗವಾಗಿದೆ. ವಿಷ್ಣು ಈಗಾಗಲೇ ಮದುವೆಯಾಗಿದ್ದಾನೆ. ಮೊದಲ ಪತ್ನಿಗೆ ವಿಚ್ಚೇದನ ನೀಡಿ ಯುವತಿಯನ್ನು ವರಿಸಲು ಪ್ಲಾನ್ ಮಾಡಿದ್ದ. ಆದರೆ ಮೊದಲ ಪತ್ನಿ ವಿಚ್ಚೇದನಕ್ಕೆ ನಿರಾಕರಿಸಿದ್ದಾಳೆ.  
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ