ಮೂವರು ಮಕ್ಕಳಿಗೆ ನೇಣು ಬಿಗಿದು ತಂದೆಯೂ ಆತ್ಮಹತ್ಯೆ

By Suvarna News  |  First Published Nov 13, 2020, 4:04 PM IST

ಮೂವರು ಮಕ್ಕಳಿಗೆ ನೇಣು ಬಿಗಿದ ತಂದೆ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ  ನಡೆದಿದೆ.


ಬೆಂಗಳೂರು, (ನ.13): ಮೂವರು ಮಕ್ಕಳನ್ನು ನೇಣು ಬಿಗಿದು ಬಳಿಕ ತಂದೆಯೂ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ನಗರದ ಮೈಕೋ ಲೇಔಟ್ ನ ರಮಣಶ್ರೀ ಎನ್ ಕ್ಲೇವ್ ಬಳಿ ಶುಕ್ರವಾರ ನಡೆದಿದೆ.

ಸರಸ್ವತಿ (14), ಹೇಮತಿ (9), ರಾಜ್ ಕುಮಾರ್ (3) ಮೃತ ಮಕ್ಕಳು. 32 ವರ್ಷದ ಜನಕರಾಜ್ ಬಿಸ್ತಾ ಎಂಬುವವರು ತಮ್ಮ ಮೂವರು ಮಕ್ಕಳನ್ನು ನೇಣು ಬಿಗಿದು ಬಳಿಕ ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ.

Tap to resize

Latest Videos

ಪ್ರಿ ವೆಡ್ಡಿಂಗ್ ಪೋಟೋ ಶೂಟ್ ದುರಂತಕ್ಕೆ ಇದೆ ಕಾರಣ, ಎಚ್ಚರಿಕೆ ಕೊಟ್ಟ ಅವಘಡ!

ಮೃತ ಜನಕರಾಜ್ ಬಿಸ್ತಾ ಅವರು ರಮಣಶ್ರೀ ಎನ್ ಕ್ಲೇವ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

2 ತಿಂಗಳ ಹಿಂದಷ್ಟೇ ಜನಕರಾಜ್ ಅವರ ಪತ್ನಿ ನಂದಾದೇವಿ ಆತ್ಮಹತ್ಯೆಗೆ ಶರಣಾಗಿದ್ದರು. ಆದ್ದರಿಂದ ಮಕ್ಕಳನ್ನು ನೋಡಿಕೊಳ್ಳಲಾರದೇ ಜೀವನದಲ್ಲಿ ಜುಗುಪ್ಸೆಗೊಂಡು ಜನಕರಾಜ್ ತಮ್ಮ ಮಕ್ಕಳನ್ನು ನೇಣಿಗೆ ಹಾಕಿ ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಸದ್ಯ, ನಾಲ್ವರ ಮೃತದೇಹಗಳನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!